ಉರಿ ಬಳಿಕ ಬಾಲಾಕೋಟ್ ಏರ್ ಸ್ಟ್ರೈಕ್ ಕುರಿತ ಬಾಲಿವುಡ್ ಚಿತ್ರಕ್ಕೆ ಪಾಕಿಸ್ತಾನ ಸೇನೆ ತೀವ್ರ ಗರಂ!

ಭಾರತೀಯ ಸೇನೆಯ ಸರ್ಜಿಕಲ್ ದಾಳಿ ಬಳಿಕ ತೆರೆಕಂಡಿದ್ದ ಉರಿ ಚಿತ್ರದ ಬಳಿಕ ಬಾಲಿವುಡ್ ವಿರುದ್ಧ ಕೆಂಗಣ್ಣು ಬೀರಿದ್ದ ಪಾಕಿಸ್ತಾನ ಸೇನೆ ಇದೀಗ ಮತ್ತೊಮ್ಮೆ ಬಾಲಿವುಡ್ ವಿರುದ್ಧ ಕಿಡಿಕಾರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಭಾರತೀಯ ಸೇನೆಯ ಸರ್ಜಿಕಲ್ ದಾಳಿ ಬಳಿಕ ತೆರೆಕಂಡಿದ್ದ ಉರಿ ಚಿತ್ರದ ಬಳಿಕ ಬಾಲಿವುಡ್ ವಿರುದ್ಧ ಕೆಂಗಣ್ಣು ಬೀರಿದ್ದ ಪಾಕಿಸ್ತಾನ ಸೇನೆ ಇದೀಗ ಮತ್ತೊಮ್ಮೆ ಬಾಲಿವುಡ್ ವಿರುದ್ಧ ಕಿಡಿಕಾರಿದೆ.

ಹೌದು.. ಪುಲ್ವಾಮಾದಲ್ಲಿ ಪಾಕ್ ಪ್ರಾಯೋಜಿತ ಉಗ್ರದಾಳಿಯ ಬಳಿಕ ಪಾಕಿಸ್ತಾನದ ಬಾಲಾಕೊಟ್ ನಲ್ಲಿದ್ದ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿರುವ ಏರ್ ಸ್ಟ್ರೈಕ್ ಕುರಿತಾದ ಚಿತ್ರದ ಹೆಸರು ಕೇಳಿ ಪಾಕಿಸ್ತಾನದ ಸೇನೆ ಆತಂಕಗೊಂಡಿದೆ. ಈ ಕುರಿತು ಟ್ವೀಟ್ ಮಾಡಿರುವ ಪಾಕ್ ಸೇನಾ ವಕ್ತಾರ ಭಾರತೀಯ ಚಿತ್ರ ನಿರ್ಮಾಪಕರಿಗೆ ತೀಕ್ಷ್ಣಶಬ್ದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ. 

ಇದಕ್ಕೂ ಮೊದಲು ಬಾಲಿವುಡ್ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಹಾಗೂ ನಿರ್ಮಾಪಕ ಭೂಷಣ್ ಕುಮಾರ್, ಪಾಕಿಸ್ತಾನದ ಬಾಲಾಕೊಟ್ ನಲ್ಲಿರುವ ಉಗ್ರರ ಶಿಬಿರುಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಕುರಿತು ಚಿತ್ರ ಬಿಡುಗಡೆಗೊಳಿಸುವುದಾಗಿ ಪ್ರಕಟಿಸಿದ್ದರು. ಅದರಂತೆ ಚಿತ್ರದ ಕುರಿತು ಟ್ವೀಟ್ ಮಾಡಿರುವ ಅವರು, 'ಬನ್ನಿ ದೇಶದ ವೀರ ಸುಪುತ್ರರ ಬಗ್ಗೆ ನಮ್ಮ ಶ್ರದ್ಧೆ ವ್ಯಕ್ತಪಡಿಸೋಣ' ಎಂದು ಬರೆದುಕೊಂಡಿದ್ದರು. 

ನಿರ್ಮಾಪಕರು ನೀಡಿರುವ ಈ ಹೇಳಿಕೆ ಪಾಕ್ ಸೇನಾ ವಕ್ತಾರ  ಆಸೀಫ್ ಗಫೂರ್ ಅವರನ್ನು ಇನ್ನಿಲ್ಲದಂತೆ ಕೆರಳಿಸಿದ್ದು, ಈ ಕುರಿತಂತೆ ಪ್ರತಿ ಟ್ವೀಟ್ ಮಾಡಿರುವ ಅವರು 'ಭಾರತೀಯ ಚಿತ್ರ ನಿರ್ಮಾಪಕರು ತಮ್ಮ ಆಸೆಗಳನ್ನು ಕೇವಲ ಚಿತ್ರಗಳ ಮೂಲಕವೇ ಪೂರ್ಣಗೊಳಿಸಿಕೊಳ್ಳುತ್ತಾರೆ ಎಂದು ನಾನೋರ್ವ ಸೈನಿಕನಾಗಿ ಹಾಗೂ ಅಭಿನಂದನ್ ಅವರನ್ನು ಗೌರವಿಸಿ ಹೇಳಬಯಸುತ್ತೇನೆ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com