ಪುಲ್ವಾಮ ದಾಳಿ: ತೀಕ್ಷ್ಣ ಪ್ರತೀಕಾರಕ್ಕಾಗಿ ಭಾರತದ ತುಡಿತ ನನಗೆ ಅರ್ಥವಾಗುತ್ತದೆ- ಟ್ರಂಪ್

ಪುಲ್ವಾಮಾ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಣ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, 40 ಸೈನಿಕರನ್ನು ಕಳೆದುಕೊಂಡು ತೀಕ್ಷ್ಣ ಪ್ರತೀಕಾರಕ್ಕಾಗಿ ಕಾಯುತ್ತಿರುವ ಭಾರತದ ತುಡಿತ ನನಗೆ ಅರ್ಥವಾಗುತ್ತದೆ ಎಂದಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ : ಪುಲ್ವಾಮಾ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಣ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿದೆ ಎಂದು ಅಮೆರಿಕಾ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ಹೇಳಿದ್ದು, 40 ಸೈನಿಕರನ್ನು ಕಳೆದುಕೊಂಡು ತೀಕ್ಷ್ಣ ಪ್ರತೀಕಾರಕ್ಕಾಗಿ ಕಾಯುತ್ತಿರುವ ಭಾರತದ ತುಡಿತ ನನಗೆ ಅರ್ಥವಾಗುತ್ತದೆ ಎಂದಿದ್ದಾರೆ.

ಪುಲ್ವಾಮಾ ಜಿಲ್ಲೆಯಲ್ಲಿ ಜೈಷ್ -ಇ- ಮೊಹಮ್ಮದ್ ಸಂಘಟನೆ ನಡೆಸಿದ ಅಮಾನುಷ ಆತ್ಮಾಹುತಿ ಬಾಂಬರ್ ದಾಳಿಯಲ್ಲಿ 40  ಸಿಆರ್ ಪಿಎಫ್ ನ  40 ಯೋಧರು ಹುತಾತ್ಮರಾಗಿ, ಐದು ಮಂದಿ ಗಾಯಗೊಂಡಿದ್ದರು.  ಈ ದಾಳಿ ಬಳಿಕ ಪಾಕಿಸ್ತಾನದ ಪಾತ್ರದ ಬಗ್ಗೆ ಭಾರತ ಆರೋಪ ಮಾಡುತ್ತಿದೆ.

ಅಮೆರಿಕಾ ನೇತೃತ್ವದಲ್ಲಿನ ಅಂತಾರಾಷ್ಟ್ರೀಯ ಸಮುದಾಯ ಕೂಡಾ ಉಗ್ರರ ಕಾರ್ಯಾಚರಣೆಗೆ ನೆಲೆಯಾಗದಂತೆ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಸೂಚನೆ ನೀಡಿದ್ದು, ಪುಲ್ವಾಮಾ ದಾಳಿಯ ಸಂಚುಕೋರರನ್ನು ಕಾನೂನು ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

 ದಕ್ಷಿಣ ಏಷ್ಯಾದ ಎರಡು ರಾಷ್ಟ್ರಗಳ ನಡುವಿನ ಪ್ರಕ್ಷುಬ್ದ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ ಡೊನಾಲ್ಡ್ ಟ್ರಂಪ್,  ಪುಲ್ವಾಮಾ ಉಗ್ರರ ದಾಳಿಯಿಂದ ಭಾರತ ಹಾಗೂ ಪಾಕಿಸ್ತಾನದ ನಡುವಣ ತೀವ್ರ ಸಮಸ್ಯೆ ಸೃಷ್ಟಿಯಾಗಿದ್ದು. ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇದನ್ನು ನಿಲ್ಲಿಸುವಂತೆ  ಹೇಳಲು ಬಯಸುವುದಾಗಿ  ಹೇಳಿದರು.

ಅಮೆರಿಕಾದ ಇತರ ಅಧ್ಯಕ್ಷರ ಅವಧಿಯಲ್ಲಿ ಹೆಚ್ಚಿನ ರೀತಿಯಲ್ಲಿ ಆರ್ಥಿಕ  ನೆರವನ್ನು ಪಾಕಿಸ್ತಾನ ಪಡೆದುಕೊಂಡಿತ್ತು. ಆದರೆ, ಅವರು ನಮ್ಮಗೆ ಸಹಾಯ ಮಾಡದಿದ್ದರಿಂದ ಪಾಕಿಸ್ತಾನಕ್ಕೆ 1.3 ಬಿಲಿಯನ್ ಡಾಲರ್ ಆರ್ಥಿಕ ನೆರವನ್ನು ಸ್ಥಗಿತಗೊಳಿಸಿದ್ದೇವೆ. ಆದರೂ, ಪಾಕಿಸ್ತಾನ ಜೊತೆಗಿನ ಸಂಬಂಧ ಉತ್ತಮವಾಗಿರುವುದಾಗಿ ಟ್ರಂಪ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com