ಸೇನಾ ಬಜೆಟ್ ಕಡಿತದಿಂದ ನಮ್ಮ ಸಾಮರ್ಥ್ಯ, ಎದುರಾಳಿಗಳ ಎದುರಿಸುವ ಬಲ ಕುಂದುವುದಿಲ್ಲ: ಪಾಕ್ ಸೇನೆ

ದೇಶದ ಆರ್ಥಿಕ ಹಿತರಕ್ಷಣೆ ಸಲುವಾಗಿ ರಕ್ಷಣಾ ಬಜೆಟ್ ನಲ್ಲಿ ಕಡಿತ ಮಾಡಲಾಗಿದೆಯೇ ಹೊರತು ನಮ್ಮ ಸಾಮರ್ಥ್ಯ, ಎದುರಾಳಿಗಳ ಎದುರಿಸುವ ಬಲ ಎಂದಿಗೂ ಕುಂದುವುದಿಲ್ಲ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಹೇಳಿದ್ದಾರೆ.

Published: 06th June 2019 12:00 PM  |   Last Updated: 06th June 2019 11:38 AM   |  A+A-


Cut in annual defence budget won't impact our response to any threat, says Pakistan Army Chief

ಸಂಗ್ರಹ ಚಿತ್ರ

Posted By : SVN SVN
Source : ANI
ಇಸ್ಲಾಮಾಬಾದ್: ದೇಶದ ಆರ್ಥಿಕ ಹಿತರಕ್ಷಣೆ ಸಲುವಾಗಿ ರಕ್ಷಣಾ ಬಜೆಟ್ ನಲ್ಲಿ ಕಡಿತ ಮಾಡಲಾಗಿದೆಯೇ ಹೊರತು ನಮ್ಮ ಸಾಮರ್ಥ್ಯ, ಎದುರಾಳಿಗಳ ಎದುರಿಸುವ ಬಲ ಎಂದಿಗೂ ಕುಂದುವುದಿಲ್ಲ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಹೇಳಿದ್ದಾರೆ.

ಪಾಕಿಸ್ತಾನ ದೇಶ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನಲೆಯಲ್ಲಿ ಬುಧವಾರ ಸ್ವಯಂಪ್ರೇರಿತವಾಗಿ ಪಾಕಿಸ್ತಾನ ಸೇನೆ ತನ್ನ ಸೇನಾ ಬಜೆಟ್ ಕಡಿತಗೊಳಿಸುವುದಾಗಿ ಘೋಷಣೆ ಮಾಡಿತ್ತು, ಸೇನೆಯ ಈ ನಡೆಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಪಾಕ್ ಮಾಧ್ಯಮಗಳು ಶ್ಲಾಘನೆ ವ್ಯಕ್ತಪಡಿಸಿದ್ದವು. ಅಂತೆಯೇ ಬಜೆಟ್ ಕಡಿತ ಪಾಕ್ ಸೇನೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದರ ಕುರಿತು ಚರ್ಚೆ ಕೂಡ ನಡೆಸಿದ್ದವು. 

ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಅವರು ಸ್ಪಷ್ಟನೆ ನೀಡಿದ್ದು, 'ಯಾವುದೇ ದೇಶಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಾವು ಸೇನಾ ಬಜೆಟ್ ಕಡಿತಗೊಳಿಸಿಲ್ಲ. ಬದಲಿಗೆ ಪಾಕಿಸ್ತಾನ ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿದ್ದು, ಬಜೆಟ್ ಕಡಿತದಿಂದ ಪಾಕಿಸ್ತಾನ ಸರ್ಕಾರಕ್ಕೆ ಕೊಂಚ ಆರ್ಥಿಕ ತಲೆ ಬಿಸಿ ತಗ್ಗುತ್ತದೆ. ಇದೇ ಕಾರಣಕ್ಕೆ ತಾವು ಸೇನಾ ಬಜೆಟ್ ಕಡಿತಗೊಳಿಸಿದ್ದೇವೆ ಎಂದು ಹೇಳಿದ್ದಾರೆ.

ಅಂತೆಯೇ ದೇಶದ ಆರ್ಥಿಕ ಹಿತರಕ್ಷಣೆ ಸಲುವಾಗಿ ರಕ್ಷಣಾ ಬಜೆಟ್ ನಲ್ಲಿ ಕಡಿತ ಮಾಡಲಾಗಿದೆಯೇ ಹೊರತು ನಮ್ಮ ಸಾಮರ್ಥ್ಯ, ಎದುರಾಳಿಗಳ ಎದುರಿಸುವ ಬಲ ಎಂದಿಗೂ ಕುಂದುವುದಿಲ್ಲ. ನಮ್ಮ ಸಾಮಾರ್ಥ್ಯ ಮತ್ತು ನಮ್ಮ ಕರ್ತವ್ಯವನ್ನು ನಾವು ಎಂದೂ ಮರೆಯುವುದಿಲ್ಲ. ಯಾವುದೇ ರೀತಿಯ ಬಾಹ್ಯಾ ಬೆದರಿಕೆಗಳಿಗೆ ತಕ್ಕ ಪ್ರತ್ಯುತ್ತರ ನೀಡುವ ಸಾಮರ್ಥ್ಯ ನಮಗಿದೆ. ಅಂತೆಯೇ ನಮ್ಮ ಸೇನಾಧಿಕಾರಿಗಳ ವೇತನ ಹೆಚ್ಚಳ ಇರುವುದಿಲ್ಲ. ಆದರೆ ಸೈನಿಕರಿಗೆ ಎಂದಿನಂತೆ ವೇತನ ಹೆಚ್ಚಳವಾಗುತ್ತದೆ. ಈ ಕುರಿತು ಶೀಘ್ರ ನಿರ್ಧರಿಸುತ್ತೇವೆ. ಆ ಮೂಲಕ ಸೈನಿಕ ಆತ್ನ ಸ್ಥೈರ್ಯ ಕೂಡ ಹೆಚ್ಚಿಸಲು ಇದು ನೆರವಾಗುತ್ತದೆ ಎಂದು ಬಜ್ವಾ ಹೇಳಿದ್ದಾರೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp