ಅಮೆರಿಕ-ಚೀನಾ ವ್ಯಾಪಾರ ಸಮರ: ಮಾತುಕತೆ ಪುನಾರಂಭಿಸಲು ಟ್ರಂಪ್, ಕ್ಸಿ ಜಿನ್‏ಪಿಂಗ್ ಒಪ್ಪಿಗೆ

ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ವಹಿವಾಟು ಸಮರ ತಾರಕಕ್ಕೇರಿತ್ತು. ಈ ನಡುವೆ ಸದ್ಯ ಜಿ20 ಶೃಂಗಸಭೆಯಲ್ಲಿ ಉಭಯ ದೇಶದ ನಾಯಕರಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಒಟ್ಟಾಗಿ...
ಡೊನಾಲ್ಡ್ ಟ್ರಂಪ್-ಕ್ಸಿ ಜಿನ್ ಪಿಂಗ್
ಡೊನಾಲ್ಡ್ ಟ್ರಂಪ್-ಕ್ಸಿ ಜಿನ್ ಪಿಂಗ್
ಒಸಾಕಾ: ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ವಹಿವಾಟು ಸಮರ ತಾರಕಕ್ಕೇರಿತ್ತು. ಈ ನಡುವೆ ಸದ್ಯ ಜಿ20 ಶೃಂಗಸಭೆಯಲ್ಲಿ ಉಭಯ ದೇಶದ ನಾಯಕರಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಒಟ್ಟಾಗಿ ಮಾತುಕತೆ ಪುನಾರಂಭಿಸಲು ಒಪ್ಪಿಕೊಂಡಿದ್ದಾರೆ.
ಚೀನಾದೊಂದಿಗೆ ವ್ಯಾಪಾರ ಮಾತುಕತೆಗಳು ಮತ್ತೆ ಜಾರಿಗೆ ಬಂದಿವೆ. ಇದರಲ್ಲಿ ಹೊಸ ಸುಂಕಗಳನ್ನು ತಡೆಹಿಡಿಯಲು ವಾಷಿಂಗ್ಟನ್ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. 
ಮಾತುಕತೆ ಪುನರಾರಂಭಿಸಿ ಮತ್ತೆ ವ್ಯಾಪಾರ ವಹಿವಾಟಿನಲ್ಲಿ ಉಭಯ ದೇಶದ ನಾಯಕರು ಸಮಂಜಸ ತೀರ್ಮಾನಕ್ಕೆ ಬರುತ್ತಾರಾ ಎಂದು ಎಲ್ಲರ ಚಿತ್ತ ನೆಟ್ಟಿತ್ತು. ಅದರಂತೆ ಉಭಯ ನಾಯಕರು ಮಹತ್ವದ ಚರ್ಚೆ ಫಲಪ್ರದವಾಗಿದೆ.
ಮಾತುಕತೆ ಬಳಿಕ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾವು ಚೀನಾ ಅಧ್ಯಕ್ಷ ಕ್ಸಿ ಅವರೊಂದಿಗೆ ಬಹಳ ಒಳ್ಳೆಯ ಸಭೆ ನಡೆಸಿದ್ದೇವೆ. ಈ ಸಭೆ ಉಭಯ ದೇಶಗಳಿಗೂ ಅತ್ಯುತ್ತಮವಾಗಿದೆ ಎಂದು ಹೇಳಿದ್ದಾರೆ. ಇನ್ನು ಉಭಯ ದೇಶಗಳ ನಡುವೆ ನಡೆದಿರುವ ಒಪ್ಪಂದಗಳ ಕುರಿತು ಮಾಹಿತಿಯನ್ನು ಬಿಟ್ಟುಕೊಡದ ಟ್ರಂಪ್ ನಾವು ಮತ್ತೆ ಹಳೆಯ ಟ್ರ್ಯಾಕ್ ಗೆ ಮರಳಿದ್ದೇವೆ ಎಂದಷ್ಟೇ ಹೇಳಿದ್ದಾರೆ.
ರಫ್ತಿಗೆ ಯಾವುದೇ ಹೊಸ ಸುಂಕಗಳನ್ನು ವಿಧಿಸದಿರಲು ವಾಷಿಂಗ್ಟನ್ ಬದ್ಧವಾಗಿದೆ. ವ್ಯಾಪಾರ ಮತ್ತು ಆರ್ಥಿಕ ಮಾತುಕತೆಗಳನ್ನು ಪುನರಾರಂಭಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ಚೀನಾ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com