ಮಲ್ಯ ಮತ್ತು ನೀರವ್‌ರನ್ನು ಹಸ್ತಾಂತರಿಸಿದರೆ ಒಂದೇ ಜೈಲಿನ ಕೋಣೆಯಲ್ಲಿಡುತ್ತೀರಾ: ಯುಕೆ ನ್ಯಾಯಮೂರ್ತಿ

ಭಾರತದ ಬ್ಯಾಂಕ್ ಗಳಿಗೆ ಪಂಗನಾಮ ಹಾಕಿ ಲಂಡನ್ ನಲ್ಲಿ ತರೆಮರೆಸಿಕೊಂಡಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತು ಮದ್ಯದ ದೊರೆ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಿದರೆ...

Published: 30th March 2019 12:00 PM  |   Last Updated: 30th March 2019 03:55 AM   |  A+A-


Vijay Mallya-Nirav Modi

ವಿಜಯ್ ಮಲ್ಯ-ನೀರವ್ ಮೋದಿ

Posted By : VS VS
Source : PTI
ಲಂಡನ್: ಭಾರತದ ಬ್ಯಾಂಕ್ ಗಳಿಗೆ ಪಂಗನಾಮ ಹಾಕಿ ಲಂಡನ್ ನಲ್ಲಿ ತರೆಮರೆಸಿಕೊಂಡಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತು ಮದ್ಯದ ದೊರೆ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಿದರೆ ಅವರನ್ನು ಒಂದೇ ಜೈಲಿನ ಕೋಣೆಯಲ್ಲಿಡುತ್ತೀರಾ ಎಂದು ಬ್ರಿಟನ್ ನ್ಯಾಯಮೂರ್ತಿ ಪ್ರಶ್ನಿಸಿದ್ದಾರೆ.

ನೀರವ್ ಮೋದಿಯಿಂದ ಮೋಸ ಹೋಗಿರುವ ಬ್ಯಾಂಕುಗಳ ಪರವಾಗಿ ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್ ನ ವಕೀಲರು ವಾದ ಮಂಡಿಸಿದರು. ಈ ವೇಳೆ ಪ್ರಕರಣ ಸಂಬಂಧ ಸಾಕ್ಷಿಗಳಿಗೆ ನೀರವ್ ಮೋದಿ ಕೊಲೆ ಬೆದರಿಕೆ ಮತ್ತು ಲಂಚದ ಆಮಿಷ ಒಡ್ಡಿದ್ದಾರೆ. ಹೀಗಾಗಿ ಅವರಿಗೆ ಜಾಮೀನು ನಿರಾಕರಿಸಬೇಕು ಎಂದು ಮನವಿ ಮಾಡಿದರು. ಹೀಗಾಗಿ ಎರಡನೇ ಬಾರಿಗೂ ನೀರವ್ ಗೆ ಜಾಮೀನು ನಿರಾಕರಣೆಯಾಗಿದೆ. 

ಇನ್ನು ವಾದದ ವೇಳೆ ಲಂಡನ್ ನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯದ ನ್ಯಾಯಾಧೀಶರಾದ ಎಮ್ಮಾ ಅರ್ಬುತ್ರೋಟ್ ಅವರು ವಿಜಯ್ ಮಲ್ಯರಂತೆ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಿದರೆ ಅವರನ್ನು ಒಂದೇ ಜೈಲಿನ ಕೋಣೆಯಲ್ಲಿಡುತ್ತೀರಾ ಎಂದು ಪ್ರಶ್ನಿಸಿದರು.

ಈ ಹಿಂದೆ ಭಾರತ ಬ್ರಿಟನ್ ಗೆ ವಿಜಯ್ ಮಲ್ಯರನ್ನು ಹೆಚ್ಚು ಭದ್ರತೆ ಇರುವ ಮುಂಬೈ ಆರ್ತೂರ್ ರೋಡ್ ಕಾರಾಗೃಹದಲ್ಲಿ ಇಡಲಾಗುವುದು ಎಂದು ಹೇಳಿತ್ತು.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp