ಇರಾನ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ

ಇರಾನ್'ಗೆ ಸೇರಿದ ಸೈನೋಪಾ ತೈಲ ಟ್ಯಾಂಕ್ ಮೇಲೆ ಎರಡು ಕ್ಷಿಪಣಿಗಳಿಂದ ದಾಳಿ ನಡೆದಿರುವ ಘಟನೆ ಸೌದಿ ಅರೇಬಿಯಾದ ಜೆಡ್ಡಾಹ್ ದಲ್ಲಿ ಶುಕ್ರವಾರ ನಡೆದಿದೆ. 
ಇರಾನ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ
ಇರಾನ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ

ಜೆಡ್ಡಾಹ್: ಇರಾನ್'ಗೆ ಸೇರಿದ ಸೈನೋಪಾ ತೈಲ ಟ್ಯಾಂಕ್ ಮೇಲೆ ಎರಡು ಕ್ಷಿಪಣಿಗಳಿಂದ ದಾಳಿ ನಡೆದಿರುವ ಘಟನೆ ಸೌದಿ ಅರೇಬಿಯಾದ ಜೆಡ್ಡಾಹ್ ದಲ್ಲಿ ಶುಕ್ರವಾರ ನಡೆದಿದೆ. 

ಸೌದಿ ಅರೇಬಿಯಾದ ಬಂದರು ನಗರ ಜೆಡ್ಡಾ ಸಮೀಪ ಎರಡು ಕ್ಷಿಪಣಿಗಳು ತೈಲ ಟ್ಯಾಂಕರ್ ಮೇಲೆ ದಾಳಿ ನಡೆಸಿದೆ ಎಂದು ಮಾಧ್ಯಮಗಳ ವರದಿಗಳು ತಿಳಿಸಿವೆ. 

ಸ್ಫೋಟದಿಂದ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ, ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿಗಳು ಕ್ಷೇಮವಾಗಿದ್ದಾರೆ. ಪ್ರಸ್ತುತ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ. 

ಹಡಗಿಗೆ ಬೆಂಕಿ ತಗುಲಿದ ಪರಿಣಾಮ ಭಾರೀ ಹಾನಿಯುಂಟಾಗಿದ್ದು, ದಾಳಿಯಿಂದಾಗಿ ಕಚ್ಚಾ ಸೋರಿಕೆಯ ಭೀತಿ ಎದುರಾಗಿದೆ. ಶಂಕಿತ ದಾಳಿಯು ರೆಡ್ ಸೀ ಮತ್ತು ಗಲ್ಫ್ ವ್ಯಾಪ್ತಿಯಲ್ಲಿ ಸಂಚರಿಸುವ ತೈಲ ಟ್ಯಾಂಕರ್ ಗಳನ್ನು ಗುರಿಯಾಗಿರಿಸಿಕೊಂಡು ನಡೆದಿದೆ ಎಂದು ಹೇಳಲಾಗುತ್ತಿದೆ. 

ಸೆ.14 ರಂದೂ ಕೂಡ ಸೌದಿ ಅರೇಬಿಯಾದ ಎರಡು ತೈಲ ಸಂಗ್ರಹ ಮೇಲೆ ದಾಳಿ ನಡೆಸಲಾಗಿತ್ತು. ದಾಳಿ ಬಳಿಕ ಇರಾನ್ ಹಾಗೂ ಸೌದಿ ಅರೇಬಿಯಾದ ನಡುವಿನ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com