ಬೆಚ್ಚಿ ಬಿದ್ದ ಲಂಡನ್: ಟ್ರಕ್ ನಲ್ಲಿ 39 ಶವ ಪತ್ತೆ, ಚಾಲಕನ ಬಂಧನ

ಇತ್ತೀಚೆಗಷ್ಟೇ ಉಗ್ರ ದಾಳಿಗೆ ತುತ್ತಾಗಿ ಚೇತರಿಸಿಕೊಳ್ಳುತ್ತಿದ್ದ ಲಂಡನ್ ಮತ್ತೆ ಬೆಚ್ಚಿ ಬಿದ್ದಿದ್ದು, ಟ್ರಕ್ ವೊಂದರಲ್ಲಿ ಬರೊಬ್ಬರಿ 39 ಶವಗಳ ಪತ್ತೆಯಾಗಿವೆ.

Published: 24th October 2019 07:35 AM  |   Last Updated: 24th October 2019 07:39 AM   |  A+A-


39 found dead in truck in london

ಟ್ರಕ್ ನಲ್ಲಿ 39 ಶವ ಪತ್ತೆ

Posted By : Srinivasamurthy VN
Source : PTI

ಲಂಡನ್: ಇತ್ತೀಚೆಗಷ್ಟೇ ಉಗ್ರ ದಾಳಿಗೆ ತುತ್ತಾಗಿ ಚೇತರಿಸಿಕೊಳ್ಳುತ್ತಿದ್ದ ಲಂಡನ್ ಮತ್ತೆ ಬೆಚ್ಚಿ ಬಿದ್ದಿದ್ದು, ಟ್ರಕ್ ವೊಂದರಲ್ಲಿ ಬರೊಬ್ಬರಿ 39 ಶವಗಳ ಪತ್ತೆಯಾಗಿವೆ.

ಲಂಡನ್ ನ ಗ್ರೇಸ್ ನ ಈಸ್ಟರ್ನ್ ಅವೆನ್ಯೂದ ವಾಟರ್ ಗ್ಲೇಡ್ ಕೈಗಾರಿಕಾ ಪ್ರದೇಶದ ಪಾರ್ಕ್ ಒಳಗೆ ಲಾರಿಯ ಕಂಟೇನರ್ ಸಿಕ್ಕಿದೆ. ಎಸೆಕ್ಸ್ ಪೊಲೀಸರು ನೀಡಿರುವ ಮಾಹಿತಿ ಅನ್ವಯ, ಲಾರಿಯ ಕಂಟೇನರ್ ನಲ್ಲಿ ಮೂವತ್ತೆಂಟು ಮಂದಿ ವಯಸ್ಕರರು ಹಾಗೂ ಒಬ್ಬ ಹದಿಹರೆಯದ ವ್ಯಕ್ತಿಯ ಶವ ಸಿಕ್ಕಿದೆ. ಶಂಕಿತ ಕೊಲೆ ಪ್ರಕರಣದಲ್ಲಿ ಇಪ್ಪತ್ತೈದು ವರ್ಷ ವಯಸ್ಸಿನ ಉತ್ತರ ಐರ್ಲೆಂಡ್ ನ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಈತನೇ ಟ್ರಕ್ ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಲಂಡನ್ ಪೊಲೀಸರು, 'ಈ ದುರ್ಘಟನೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಜೀವ ಕಳೆದುಕೊಂಡಿದ್ದಾರೆ. ಏನಾಗಿದೆ ಎಂದು ತಿಳಿಯುವ ಸಲುವಾಗಿ ತನಿಖೆ ನಡೆಯುತ್ತಿದೆ. ಸಂತ್ರಸ್ತರನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಆದರೆ ಇದು ಬಹಳ ದೀರ್ಘವಾದ ಪ್ರಕ್ರಿಯೆ ಆಗಲಿದೆ. ಬಲ್ಗೇರಿಯಾದಿಂದ ಬಂದ ಲಾರಿ ಇದಾಗಿದ್ದು, ಅಕ್ಟೋಬರ್ ಹತ್ತೊಂಬತ್ತನೆ ತಾರೀಕಿನಂದು ಹೋಲಿಹೆಡ್ ನಲ್ಲಿ ದೇಶವನ್ನು ಪ್ರವೇಶಿಸಿದೆ. ಲಾರಿ ಚಾಲಕನನ್ನು ಪೊಲೀಸ್ ವಶದಲ್ಲಿ ಇರಿಸಿಕೊಳ್ಳಲಾಗಿದ್ದು, ನಮ್ಮ ತನಿಖೆ ನಡೆಯುತ್ತಿದೆ. ಮಾನವ ಕಳ್ಳಸಾಗಣೆ ಪ್ರಕರಣ ಇದಾಗಿರಬಹುದು ಎಂದು ಮುಖ್ಯ ಸೂಪರಿಂಟೆಂಡೆಂಟ್ ಆಂಡ್ರೂ ಮರೈನರ್ ಹೇಳಿದ್ದಾರೆ. 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp