ಭಾರತದೊಂದಿಗೆ ಎಲ್ಲ ರೀತಿಯ ವ್ಯಾಪಾರ ಕಟ್, ಆದರೆ ದಯಮಾಡಿ ಜೀವ ರಕ್ಷಕ ಔಷಧಿಗಳನ್ನು ನೀಡಿ; ಪಾಕಿಸ್ತಾನದ ಹೊಸ ವರಸೆ!

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುತ್ತಿದ್ದ ವಿಧಿ 370ರ ರದ್ಧತಿ ಬಳಿಕ ಭಾರತದ ವಿರುದ್ಧ ತೊಡೆ ತಟ್ಟಿ ನಿಂತಿದ್ದ ಪಾಕಿಸ್ತಾನ ಎಲ್ಲ ರೀತಿಯ ವ್ಯಾಪಾರ ಸಂಬಂಧವನ್ನು ಕಡಿತಗೊಳಿಸಿತ್ತು. ಆದರೆ ಇದೀಗ ಅಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆ ಎದುರಾಗುತ್ತಿದ್ದಂತೆಯೇ ಔಷಧಿಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭಾರತದ ಔಷಧಿಗಳ ಆಮದು ಮೇಲಿನ ನಿಷೇಧ ತೆರವುಗೊಳಿಸಿದ ಪಾಕಿಸ್ತಾನ ಸರ್ಕಾರ

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುತ್ತಿದ್ದ ವಿಧಿ 370ರ ರದ್ಧತಿ ಬಳಿಕ ಭಾರತದ ವಿರುದ್ಧ ತೊಡೆ ತಟ್ಟಿ ನಿಂತಿದ್ದ ಪಾಕಿಸ್ತಾನ ಎಲ್ಲ ರೀತಿಯ ವ್ಯಾಪಾರ ಸಂಬಂಧವನ್ನು ಕಡಿತಗೊಳಿಸಿತ್ತು. ಆದರೆ ಇದೀಗ ಅಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆ ಎದುರಾಗುತ್ತಿದ್ದಂತೆಯೇ ಔಷಧಿಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಿದೆ.

ಹೌದು.. ಭಾರತದೊಂದಿಗಿನ ವಾಣಿಜ್ಯ ಸಂಬಂಧವನ್ನು ನಿಷೇಧಿಸಿದ್ದ ಪಾಕಿಸ್ತಾನದಲ್ಲಿ ಇದೀಗ ಅಕ್ಷರಶಃ ಅಗತ್ಯ ವಸ್ತುಗಳಿಗೆ ಹಾಹಾಕಾರ ಉಂಟಾಗಿದ್ದು, ತರಕಾರಿ ಮತ್ತು ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದರ ನಡುವೆ ಪಾಕಿಸ್ತಾನದಲ್ಲಿ ಜೀವ ರಕ್ಷಕ ಔಷಧಿಗಳ ಬೆಲೆಯೂ ಗಗನಕ್ಕೇರಿದ್ದು, ಔಷಧಿಗಳ ಕೊರತೆಯಿಂದಾಗಿ ಅಲ್ಲಿನ ಜನ ಸಂಕಷ್ಟಕ್ಕೀಡಾಗಿದ್ದಾರೆ.

ಪ್ರಮುಖವಾಗಿ ಕ್ಯಾನ್ಸರ್, ಹೃದಯ ಸಂಬಂಧಿ ಖಾಯಿಲೆಗಳಿಗೆ ಪಾಕಿಸ್ತಾನಕ್ಕೆ ಭಾರತದ ಮುಖಾಂತರವೇ ಔಷಧಿಗಳ ರವಾನೆಯಾಗುತ್ತಿತ್ತು. ಆದರೆ ಪಾಕಿಸ್ತಾನ ಸರ್ಕಾರ ವ್ಯಾಪಾರ ಸಂಬಂಧ ನಿಷೇಧಿಸಿ ಬೆನ್ನಲ್ಲೇ ಅಲ್ಲಿಔಷಧಿಗಳಿಗಾಗಿ ಹಾಹಾಕಾರ ಸೃಷ್ಟಿಯಾಗಿತ್ತು. ಇದೇ ಕಾರಣಕ್ಕೆ ಇದೀಗ ಪಾಕಿಸ್ತಾನ ಸರ್ಕಾರ ಜೀವ ರಕ್ಷಕ ಔಷಧಿಗಳ ಮೇಲಿನ ನಿಷೇಧವನ್ನು ತೆರವುಗೊಳಿಸಿದೆ. 

ಪಾಕಿಸ್ತಾನದ ವಾಣಿಜ್ಯ ಸಚಿವಾಲಯ ನಿಷೇಧ ತೆರವುಗೊಳಿಸಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಪಾಕಿಸ್ತಾನಕ್ಕೆ ಸರಬರಾಜು ಆಗುವ ಒಟ್ಟಾರೆ ಔಷಧಿಗಳ ಪೈಕಿ ಶೇ. 65ಕ್ಕೂ ಅಧಿಕ ಔಷಧಿಗಳು ಭಾರತದ ಮುಖಾಂತರವೇ ರಫ್ತಾಗುತ್ತದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com