'ಬ್ಯಾಡ್ ಫಾಲ್': ವ್ಯಕ್ತಿಯ ಜೀವ ಉಳಿಸಿದ ಆ್ಯಪಲ್ ಸ್ಮಾರ್ಟ್ ವಾಚ್!

ಡಿಜಿಟಲ್ ಗ್ಯಾಜೆಟ್ ಗಳನ್ನು ಶೋಕಿಗಾಳಿ ಬಳಸುತ್ತಾರೆ ಎಂದು ಕೆಲವರು ಟೀಕಿಸುತ್ತಾರೆ. ಆದರೆ ಇಂತಹ ಡಿಜಿಟಲ್ ಗ್ಯಾಜೆಟ್ ವೊಂದು ವ್ಯಕ್ತಿಯ ಜೀವ ಉಳಿಸಿದೆ.
ಸ್ಮಾರ್ಟ್ ವಾಚ್ ಮತ್ತು ಅಪಘಾತ
ಸ್ಮಾರ್ಟ್ ವಾಚ್ ಮತ್ತು ಅಪಘಾತ

ಅಪಘಾತಕ್ಕೀಡಾಗಿ ಸಾವುನೋವಿನ ನಡುವೆ ಇದ್ದ ವ್ಯಕ್ತಿಯ ಕುಟುಂಬಕ್ಕೆ ತುರ್ತು ಸಂದೇಶ ರವಾನಿಸಿದ್ದ ಸ್ಮಾರ್ಟ್ ವಾಚ್

ವಾಷಿಂಗ್ಟನ್: ಡಿಜಿಟಲ್ ಗ್ಯಾಜೆಟ್ ಗಳನ್ನು ಶೋಕಿಗಾಳಿ ಬಳಸುತ್ತಾರೆ ಎಂದು ಕೆಲವರು ಟೀಕಿಸುತ್ತಾರೆ. ಆದರೆ ಇಂತಹ ಡಿಜಿಟಲ್ ಗ್ಯಾಜೆಟ್ ವೊಂದು ವ್ಯಕ್ತಿಯ ಜೀವ ಉಳಿಸಿದೆ.

ಹೌದು.. ವ್ಯಕ್ತಿಯೋರ್ವ ಅಪಘಾತಕ್ಕೀಡಾಗಿದ್ದ ಸಂದರ್ಭದಲ್ಲಿ ಆತ ಧರಿಸಿದ್ದ ಸ್ಮಾರ್ಟ್ ವಾಚ್ ಆತನ ಕುಟುಂಬಕ್ಕೆ ವಿಚಾರ ತಿಳಿಸಿ, ಸೂಕ್ತ ಸಂದರ್ಭದಲ್ಲಿ ಆತನಿಗೆ ಚಿಕಿತ್ಸೆ ಲಭಿಸುವಂತೆ ಮಾಡಿದೆ. ಆ ಮೂಲಕ ಆತನ ಜೀವ ಉಳಿಸುವಲ್ಲಿ ಸ್ಮಾರ್ಟ್ ವಾಚ್ ನೆರವಾಗಿದೆ.

ಇದು ಅಮೆರಿಕದ ವಾಷಿಂಗ್ಟನ್ ನಿಂದ ವರದಿಯಾಗಿದ್ದು, ಬೈಕಿಂಗ್ ಗೆ ಹೋಗಿದ್ದ ಬೈಕರ್ ಬಾಬಿಯೋ ಮಾರ್ಗ ಮಧ್ಯ ಅಪಘಾತಕ್ಕೀಡಾಗಿದ್ದರು. ರಿವರ್ ಸೈಡ್ ಪಾಕ್ ಬಳಿ ಬಾಬಿಯೋ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಬರ್ಡೆಟ್ ಧರಿಸಿದ್ದ ಆ್ಯಪಲ್ ಸ್ಮಾರ್ಟ್ ವಾಚ್ ಗೂ ಹಾನಿಯಾಗಿತ್ತು. ಕೂಡಲೇ ವಾಚ್ ಆತನ ಕುಟುಂಬಕ್ಕೆ ತುರ್ತು ಸಂದೇಶ ರವಾನಿಸಿದ್ದು ಮಾತ್ರವಲ್ಲದೇ, ಆತ ಇರುವ ಲೊಕೇಷನ್ ಅನ್ನು ಕೂಡ ತೋರಿಸಿದೆ. ವಾಚ್ ತೋರಿಸಿದ ಲೋಕೇಷನ್ ಜಾಡನ್ನು ಹಿಡಿದ ಕುಟುಂಬಸ್ಥರು ಕೂಡಲೇ ಬರ್ಡೆಟ್ ಇದ್ದ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಅಷ್ಟು ಹೊತ್ತಿಗಾಗಲೇ ಆ್ಯಂಬುಲೆನ್ಸ್ ಮೂಲಕ ಬೊಬಿಯೋರನ್ನು ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ.

ವಾಚ್ ಬೋಬಿಯೋ ಕುಟುಂಬಸ್ಥರಿಗೆ ಮಾತ್ರವಲ್ಲದೇ ಆ್ಯಂಬುಲೆನ್ಸ್ ಕೂ ಸಂದೇಶ ರವಾನಿಸಿರುತ್ತದೆ. ಹೀಗಾಗಿ ಕೂಡಲೇ ಸ್ಥಳಕ್ಕಾಗಿಮಿಸಿದ ಆ್ಯಂಬುಲೆನ್ಸ್ ಸಿಬ್ಬಂದಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬರ್ಡೆಟ್ ರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಬಳಿಕ ತುರ್ತು ಚಿಕಿತ್ಸೆ ಬಳಿಕ ಬಾಬಿಯೋ ಗುಣಮುಖರಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಚಾರವನ್ನು ಸ್ವತಃ ಬಾಬಿಯೋ ಪುತ್ರ ಬರ್ಡೆಟ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ಈ ಸುದ್ದಿ ವ್ಯಾಪಕ ವೈರಲ್ ಆಗಿದೆ.

ಆಗಿದ್ದೇನು?
ಬೈಕಿಂಗ್​ ಟ್ರಿಪ್​ಗಾಗಿ ತೆರಳಿದ್ದ ಗೇಬ್​ ಬರ್ಡೆಟ್​ರ ತಂದೆ ಬೋಬಿಯೋರ​ ಬೈಕ್​​ ಅಪಘಾತಗೀಡಾಗಿತ್ತು. ಈ ವೇಳೆ ಕೈಲಿದ್ದ ಆ್ಯಪಲ್​ ವಾಚ್​​ಗೆ ಹಾನಿಯಾದ ಹಿನ್ನೆಲೆ ವಾಚ್​ ತಕ್ಷಣ ಬೋಬಿಯೋ​ ಕುಟುಂಬಸ್ಥರಿಗೆ ತುರ್ತು ಸಂದೇಶ ರವಾನಿಸಿದೆ. ಬೋಬಿಯೋ​ ನೆಲಕ್ಕೆ ಬೀಳುತ್ತಿದ್ದಂತೆ ಬಲವಾಗಿ ಕೆಳಗೆ ಬಿದ್ದಿರುವ ಸೂಚನೆ ನೀಡಿ ಆ್ಯಪಲ್​ ವಾಚ್​ ಬರ್ಡೆಟ್‌​​​​ಗೆ ಮೆಸೇಜ್​ ಕಳುಹಿಸಿದೆ. ತಕ್ಷಣ ವಾಚ್​ ನೀಡಿದ್ದ ಲೊಕೇಷನ್​ ಜಾಡು ಹಿಡಿದು ಹೊರಡಲು ಸಿದ್ದರಾಗ್ತಾರೆ. ಅಲ್ಲದೆ ವಾಚ್​ ತಾನಾಗಿಯೇ ಆ್ಯಂಬುಲೆನ್ಸ್​ ಸರ್ವಿಸ್​​​​ಗೂ ಕೂಡ ಕರೆ ಮಾಡಿ ಲೊಕೇಷನ್​ ಶೇರ್​ ಮಾಡುತ್ತೆ. ಹೀಗಾಗಿ ಮಗ ಬರ್ಡೆಟ್​​​ ಆ್ಯಕ್ಸಿಡೆಂಟ್ ಆಗಿದ್ದ ಸ್ಥಳ ತಲುಪುವ ಹೊತ್ತಿಗೆ ತಂದೆ ಬೋಬಿಯೋ​ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಇದಕ್ಕೂ ಮೊದಲು ವಾಚ್​ನಲ್ಲಿ ತುರ್ತು ಪರಿಸ್ಥಿತಿಯ ವೇಳೆ ಸಂಪರ್ಕಿಸಬೇಕಾದ ನಂಬರ್​​ನಲ್ಲಿ ಮಗನ ನಂಬರ್​​ ದಾಖಲಿಸಿದ್ದರು. ಹೀಗಾಗಿ ತಂದೆ ಅಪಾಯದಲ್ಲಿದ್ದಾಗ ಆ್ಯಪಲ್​ ವಾಚ್ ಮಗನಿಗೆ ಲೊಕೇಷನ್ ಜೊತೆಗೆ ಮೆಸೇಜ್​ ಕಳುಹಿಸಿದೆ. ಆ್ಯಪಲ್​ನಿಂದಾಗಿ ತಂದೆಯ ಜೀವ ಉಳಿದಿದೆ ಅಂತ ಬರ್ಡೆಟ್​​ ಫೇಸ್​​ಬುಕ್​​ನಲ್ಲಿ ಪೋಸ್ಟ್​ ಮಾಡಿದ್ದು. ಆ್ಯಪಲ್​​ ವಾಚ್​​ನಿಂದ ತಮಗಾದ ಸಹಾಯ ನೆನೆದು ಕಂಪನಿಗೆ ಧನ್ಯವಾದ ಅರ್ಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com