ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್'ಗೂ ತಟ್ಟಿತಾ ಕೊರೋನಾ?

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕಳೆದ ಕೆಲ ದಿನಗಳಿಂದ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳದೇ ಇರುವುದಕ್ಕೆ ಆತನಿಗೆ ಕೊರೋನಾ ಹಬ್ಬಿರುವುದೇ ಕಾರಣ ಎಂದು ವರದಿಗಳು ಬಿತ್ತರಗೊಳ್ಳುತ್ತಿವೆ. 
ಕಿಮ್ ಜಾಂಗ್ ಉನ್
ಕಿಮ್ ಜಾಂಗ್ ಉನ್

ವಾಷಿಂಗ್ಟನ್: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕಳೆದ ಕೆಲ ದಿನಗಳಿಂದ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳದೇ ಇರುವುದಕ್ಕೆ ಆತನಿಗೆ ಕೊರೋನಾ ಹಬ್ಬಿರುವುದೇ ಕಾರಣ ಎಂದು ವರದಿಗಳು ಬಿತ್ತರಗೊಳ್ಳುತ್ತಿವೆ. 

ಇಂತಹ ವರದಿಗಳ ನಡುವಲ್ಲೇ ಕಿಮ್ ಜಾಂಗ್ ಉನ್'ಗೆ ಚೀನಾದ ವೈದ್ಯರೊಬ್ಬರಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆಂದು ಅಮೆರಿಕಾದ ವರದಿಗಾರರೊಬ್ಬರು ಹೇಳಿದ್ದು, ಇದೀಗ ಈ ಸುದ್ದಿ ಇಂಟರ್ನೆಟ್ ನಲ್ಲಿ ಭಾರೀ ವೈರಲ್ ಆಗುತ್ತಿದೆ. 

ಕಿಮ್ ಜಾಂಗ್ ಉನ್'ಗೆ ಹೃದಯ ನಾಳ ಚಿಕಿತ್ಸೆಗಾಗಿ ಚೀನಾದ ವೈದ್ಯರೊಬ್ಬರು ಉತ್ತರ ಕೊರಿಯಾಗೆ ಆಗಮಿಸಿದ್ದರು. ಅವರಿಂಗ ಕಿಮ್'ಗೆ ಕೊರೋನಾ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಜಾಕ್ ಪೊಸೊಬಿಕ್ ಎಂಬ ಪತ್ರಕರ್ತರೊಬ್ಬರು ವಿವಿಧ ಮೂಲಗಳನ್ನು ಆಧರಿಸಿ ಟ್ವೀಟ್ ಮಾಡಿದ್ದಾರೆ. 

ಇದೇ ವೇಳೆ ಸಿಎನ್ಎನ್ ಸುದ್ದಿ ವಾಹಿನಿ, ಅಮೆರಿಕಾದ ಗುಪ್ತಚರ ಮಾಹಿತಿಯನ್ನು ಉಲ್ಲೇಖಿಸಿ ಕಿಮ್ ಜಾಂಗ್ ಉನ್ ಆಗೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದೆ. ಇದಕ್ಕೆ ಪೂರಕ ಎಂಬಂತೆ ಕಿಂಗ್ ಜಾಂಗ್ ಏ.15ರಂದು ತಮ್ಮ ತಾತನ 108ನೇ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಳ್ಲದೇ ಇರುವುದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com