ಪಾಕ್ ಹೊಸ ನಿಬಂಧನೆಗೆ ಫೇಸ್ಬುಕ್, ಗೂಗಲ್, ಟ್ವೀಟರ್ ತೀವ್ರ ವಿರೋಧ, ದೇಶದಲ್ಲಿ ಸೇವೆ ಸ್ಧಗಿತ ಬೆದರಿಕೆ!
ಇಸ್ಲಾಮಾಬಾದ್: ಪಾಕ್ ಸರ್ಕಾರ ಹೇಳಿದಂತೆ ಕಾರ್ಯನಿರ್ವಹಿಸಬೇಕು ಎಂಬ ಹೊಸ ನಿಬಂಧನೆಗೆ ದೈತ್ಯ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಗೂಗಲ್ ಮತ್ತು ಟ್ವೀಟರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು ದೇಶದಲ್ಲಿ ಸೇವೆಯನ್ನು ಸ್ಥಗಿತಗೊಳಿಸುವ ಬೆದರಿಕೆ ಹಾಕಿವೆ.
ಪಾಕಿಸ್ತಾನ ಸರ್ಕಾರ ಅನುಮೋದಿಸಿರುವ ಹೊಸ ನಿಬಂಧನೆಗಳ ಅನ್ವಯ ಸಾಮಾಜಿಕ ಮಾಧ್ಯಮ ಕಂಪನಿಗಳು ಕಡ್ಡಾಯವಾಗಿ ಇಸ್ಲಾಮಾಬಾದ್ ನಲ್ಲಿ ಕಚೇರಿ ತೆರೆಯಬೇಕು. ಮಾಹಿತಿ ಸಂಗ್ರಹಕ್ಕೆ ಡೇಟಾ ಸರ್ವರ್ ಗಳನ್ನು ಸಿದ್ಧಪಡಿಸಬೇಕು ಹಾಗೂ ಸರ್ಕಾರ ಗುರುತಿಸಿದ ವಿಷಯಗಳನ್ನು ತೆಗೆದು ಹಾಕಬೇಕಾಗುತ್ತದೆ. ಈ ನಿಯಮಗಳ ಅನ್ವಯ ಕಾರ್ಯಾಚರಿಸದಿದ್ದರೆ ದಂಡ ತೆರಬೇಕಾಗುತ್ತದೆ.
ಈ ಹೊಸ ನಿಬಂಧನೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಏಷ್ಯಾ ಇಂಟರ್ ನೆಟ್ ಮೈತ್ರಿಕೂಟವು(ಎಐಸಿ), ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪತ್ರ ಬರೆದು ಹೊಸ ನಿಯಮ ಮತ್ತು ನಿಂಬಧನೆಗಳನ್ನು ಪರಿಷ್ಕೃತಗೊಳಿಸುವಂತೆ ಒತ್ತಾಯಿಸಿದೆ.
ನಿಬಂಧನೆಗಳ ಮೂಲಕ ಸಾಮಾಜಿಕ ಮಾಧ್ಯಮ ಬಳಕೆದಾರರ ಖಾಸಗಿತನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಕಾರ್ಯನಿರ್ವಹಿಸುವಂತೆ ಒತ್ತಾಯಿಸಲಾಗಿದೆ ಎಂದು ಎಐಸಿ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ