ಉಕ್ರೇನ್ ವಿಮಾನ ದುರಂತ; ತನಿಖೆಗೆ ಸಹಾಯ ಮಾಡಲು ಐಎಸ್‌ಎಒ ಸಿದ್ಧ
ಟೊರೊಂಟೊ: ನಿನ್ನೆ ಅಪಘಾತಕ್ಕೀಡಾದ ಉಕ್ರೇನ್ ಇಂಟರ್ ನ್ಯಾಷನಲ್ ಏರ್‌ಲೈನ್ಸ್ ಫ್ಲೈಟ್ 752ನ ತನಿಖೆಗೆ ಸಹಾಯ ಮಾಡಲು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ) ಸಿದ್ಧವಾಗಿದೆ ಎಂದು ವಿಶ್ವಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಟೆಹ್ರಾನ್‌ನ ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬುಧವಾರ ಬೆಳಿಗ್ಗೆ ಬೋಯಿಂಗ್ 737-800 ವಿಮಾನ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಎಲ್ಲ 176 ಜನರು ಸಾವನ್ನಪ್ಪಿದ್ದರು. ಅದು ಉಕ್ರೇನಿಯನ್ ರಾಜಧಾನಿ ಕೀವ್‌ಗೆ ಹಾರುತ್ತಿತ್ತು. ಸಾವಿಗೀಡಾದವರಲ್ಲಿ ಹೆಚ್ಚಿನವರು ಇರಾನ್ ಮತ್ತು ಕೆನಡಾದ ಪ್ರಜೆಗಳು ಎಂದು ತಿಳಿದುಬಂದಿದೆ.
"ಐಸಿಎಒ ತನ್ನ ಭಾಗಿದಾರ ದೇಶಗಳೊಂದಿಗೆ ಸಂಪರ್ಕದಲ್ಲಿದ್ದು, ಕರೆ ಮಾಡಿದರೆ ಅವರಿಗೆ ಸಹಾಯ ಮಾಡಲಿದೆ. ದುರಂತದ ಕಾರಣದ ಬಗ್ಗೆ ಊಹಾಪೋಹಗಳನ್ನು ತಪ್ಪಿಸುವ ಮಹತ್ವದ ಜವಾಬ್ದಾರಿ ಅದರ ನಾಯಕತ್ವದ ಮೇಲಿದೆ ಎಂದು ಬುಧವಾರ ಹೇಳಿಕೆ ತಿಳಿಸಿದೆ.
ಇದೇ ವಿಚಾರವಾಗಿ ಮಾತನಾಡಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು, ವಿಮಾನ ದುರಂತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈಗಲೇ ಅದರ ಕುರಿತು ಹೇಳಿಕೆ ನೀಡುವುದು ತಪ್ಪು. ತನಿಖೆ ಬಳಿಕ ಮಾಹಿತಿ ತಿಳಿಯಲಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ