ಮಾತಿನ ಮೇಲೆ ಎಚ್ಚರವಿರಲಿ: ಇರಾನ್ ಪರಮೋಚ್ಚ ನಾಯಕರಿಗೆ ಟ್ರಂಪ್

ಆಡುವ ಮಾತಿನ ಮೇಲೆ ಎಚ್ಚರಿಕೆ ಇರಲಿ ಎಂದು ಇರಾನ್ ಪರಮೋಚ್ಚ ನಾಯಕ ಅಯುತೊಲ್ಲಾ ಅಲಿ ಕಮೇನಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡಿದ್ದಾರೆ. 
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಆಡುವ ಮಾತಿನ ಮೇಲೆ ಎಚ್ಚರಿಕೆ ಇರಲಿ ಎಂದು ಇರಾನ್ ಪರಮೋಚ್ಚ ನಾಯಕ ಅಯುತೊಲ್ಲಾ ಅಲಿ ಕಮೇನಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಟ್ರಂಪ್ ಅವರು, ಇತ್ತೀಚೆಗೆ ಸರ್ವೋಚ್ಛ ಅಲ್ಲದೇ ಹೋದರೂ ಇರಾನ್ ಸರ್ವೋಚ್ಚ ನಾಯಕರೆಂದು ಕರೆಯಲ್ಪಡುವವರು ಅಮೆರಿಕಾ ಮತ್ತು ಯುರೋಪ್ ಬಗ್ಗೆ ಕೆಲ ಅಸಹ್ಯಕರ ವಿಚಾರಗಳನ್ನು ಹೇಳುತ್ತಿದ್ದಾರೆಂದು ಹೇಳಿದ್ದಾರೆ. 

ಇರಾನ್ ರಾಷ್ಟ್ರದ ಆರ್ಥಿಕತೆ ಕುಸಿಯುತ್ತಿದ್ದು, ಆ ದೇಶದ ಜನರು ಸಂಕಷ್ಟದಲ್ಲಿದ್ದಾರೆ. ಈ ನಡುವೆ ಇರಾನ್ ರಾಷ್ಟ್ರ ನಾಯಕರು ಕೆಟ್ಟದಾಗಿ ಮಾತನಾಡುತ್ತಿದ್ದು, ಮಾತನಾಡುವುದಕ್ಕೂ ಮುನ್ನ ತಮ್ಮ ಮಾತಿನ ಮೇಲೆ ಎಚ್ಚರಿಕೆ ವಹಿಸಬೇಕೆಂದು ಎಚ್ಚರ ನೀಡಿದ್ದಾರೆ. 

ಈ ಹಿಂದೆ ಅಮೆರಿಕಾ ಮೇಲೆ ದಾಳಿ ನಡೆಸಿದ್ದರ ಕುರಿತಂತೆ ಹೇಳಿಕೆ ನೀಡಿದ್ದ ಇರಾನ್ ಪರಮೋಚ್ಚ ನಾಯಕ ಖಮೇನಿಯರು, ಬ್ರಿಟನ್, ಫ್ರಾನ್ಸ್ ಹಾಗೂ ಜರ್ಮನಿ ರಾಷ್ಟ್ರಗಳು ಅಮೆರಿಕಾದ ದಾಸರಾಗಿರುವುದು ದೊಡ್ಡ ತಪ್ಪು ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com