ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಾರಾಂತ್ಯದಲ್ಲಿ ಲಡಾಖ್ ಪ್ರದೇಶಕ್ಕೆ ಭೇಟಿ ನೀಡುವುದರೊಂದಿಗೆ ರಾಜತಾಂತ್ರಿಕ ಒತ್ತಡವೇರ್ಪಟ್ಟಿದ್ದು, ಭಾರತ- ಚೀನಾ ನಡುವಣ ಗಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿರಂತರ ಮಾತುಕತೆಗಳು ನಡೆಯುತ್ತಿವೆ.
ಭಾನುವಾರ ಸಂಜೆ ಚೀನಾ ವಿದೇಶಾಂಗ ಸಚಿವ , ರಾಜ್ಯ ಕೌನ್ಸಿಲರ್ ಮತ್ತು ವಿಶೇಷ ಪ್ರತಿನಿಧಿ ವಾಂಗ್ ಯಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಸಿನೋ-ಇಂಡಿಯಾ ಗಡಿ ವಿವಾದ ಬಗ್ಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ಸೋಮವಾರ ಚೀನಾ ಹೇಳಿಕೆ ಬಿಡುಗಡೆಯಾಗಿದ್ದು, ಭಿನ್ನಾಭಿಪ್ರಾಯಗಳನ್ನು ವಿವಾದಕ್ಕೆ ಆಸ್ಪದ ನೀಡದಂತೆ ಉಭಯ ದೇಶಗಳು ಒಪ್ಪಿಕೊಂಡಿವೆ. ಆದಾಗ್ಯೂ, ತನ್ನ ಪ್ರದೇಶವೆಂದು ಹೇಳಿಕೊಳ್ಳುತ್ತಿರುವ ಜಾಗದಿಂದ ಹಿಂದೆ ಸರಿಯಲು ಚೀನಾ ಒಲವು ತೋರುತ್ತಿಲ್ಲ.
Advertisement