ಭಾರತದ ಆಗ್ರಹಕ್ಕೆ ಮಣಿದ ಪಾಕ್: ಕುಲಭೂಷಣ್ ಜಾಧವ್'ಗೆ ಕೊನೆಗೂ ಮುಕ್ತ ರಾಜತಾಂತ್ರಿಕ ಸಂಪರ್ಕಕ್ಕೆ ಒಪ್ಪಿಗೆ

ಭಾರತದ ಆಗ್ರಹಕ್ಕೆ ಮಣಿದ ಪಾಕಿಸ್ತಾನ ಸರ್ಕಾರ ಮುಕ್ತ ರಾಜತಾಂತ್ರಿಕ ಸಂಪರ್ಕಕ್ಕೆ ಶುಕ್ರವಾರ ಒಪ್ಪಿಗೆ ನೀಡಿದೆ. 
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್

ಇಸ್ಲಾಮಾಬಾದ್: ಭಾರತದ ಆಗ್ರಹಕ್ಕೆ ಮಣಿದ ಪಾಕಿಸ್ತಾನ ಸರ್ಕಾರ ಮುಕ್ತ ರಾಜತಾಂತ್ರಿಕ ಸಂಪರ್ಕಕ್ಕೆ ಶುಕ್ರವಾರ ಒಪ್ಪಿಗೆ ನೀಡಿದೆ. 

ಬೇಹುಗಾರಿಕೆಯ ಸುಳ್ಳು ಆರೋಪ ಹೊರಿಸಿ ಭಾರತೀಯ ನಾಗರಿಕ ಕುಲಭೂಷಣ್ ಜಾಧವ್'ಗೆ ಗಲ್ಲು ಶಿಕ್ಷೆ ವಿಧಿಸುವಂತೆ ನೋಡಿಕೊಂಡಿದ್ದ ಪಾಕಿಸ್ತಾನ ಸರ್ಕಾರ, ಈ ಹಿಂದೆ ಭಾರತದ ಬೇಡಿಕೆಯಂತೆ ಗುರುವಾರ ಇಸ್ಲಾಮಾಬಾದ್'ನ ಜೈಲಿನಲ್ಲಿ ಕುಲಭೂಷಣ್ ಜಾಧವ್ ರನ್ನು ಭೇಟಿ ಮಾಡಲು ಪಾಕ್ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಕಳೆದ 4 ವರ್ಷಗಳಲ್ಲಿ ನಡೆಯುತ್ತಿರುವ 2ನೇ ರಾಯಭಾರ ಭೇಟಿ ವೇಳೆ ಮುಕ್ತ ಸಂಪರ್ಕದ ಭರವಸೆಯನ್ನು ನೀಡಿತ್ತು. 

ಆದರಂತೆ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ತೆರಳಿದ್ದರಾದರೂ, ಈ ವೇಳೆ ಅಡೆತಡೆರಹಿತ, ಬೇಷರತ್ ಮತ್ತು ಮುಕ್ತರಾಗಿ ಮಾತನಾಡುವ ಅವಕಾಶವನ್ನು ಪಾಕಿಸ್ತಾನ ಕಲ್ಪಿಸಲಿಲ್ಲ. ಮಾತುಕತೆ ವೇಳೆ ತನ್ನ ಅಧಿಕಾರಿಗಳನ್ನು ಜಾಧವ್ ಪಕ್ಕದಲ್ಲೇ ಕೂರಿಸುವ ಮೂಲಕ ಅವರು ಮುಕ್ತವಾಗಿ ಮಾತನಾಡದಂತೆ ಬೆದರಿಕೆ ತಂತ್ರವನ್ನು ಪ್ರಯೋಗಿಸಿದ್ದರು. 

ಇದಕ್ಕೆ ಭಾರತ ತೀವ್ರವಾಗಿ ಕಿಡಿಕಾರಿತ್ತು. ಜಾಧವ್ ಭೇಟಿ ಮಾಡಿದ ಭಾರತದ ರಾಯಭಾರಿ ಅಧಿಕಾಿರಗಳ ಮುಂದೆ ಜಾಧವ್ ಅವರು ಒತ್ತಡದಲ್ಲಿದ್ದಂತೆ ಕಂಡು ಬಂದಿದ್ದರು. ಅಲ್ಲದೆ. ಭಾರತದ ಅಧಿಕಾರಿಗಳ ಜೊತೆ ಜಾಧವ್ ಅವರು ಮುಕ್ತವಾಗಿ ಮಾತನಾಡಲು ಪೂರಕ ವಾತಾವರಣ ಕಲ್ಪಿಸಿರಲಿಲ್ಲ. ಅಲ್ಲದೆ, ಜಾಧವ್ ಅವರಿಗೆ ಇರುವ ಕಾನೂನು ಹಕ್ಕುಗಳ ವಿವರಿಸುವುದರಿಂದ ತಡೆಯಲಾಗಿದ್ದು, ಕಾನೂನು ಪ್ರಾತಿನಿಧ್ಯಕ್ಕೆ ಜಾಧವ್ ಅವರಿಂದ ಲಿಖಿತ ಒಪ್ಪಿಗೆ ಪಡೆಯದಂತೆ ಪಾಕಿಸ್ತಾನ ತಡೆದಿತ್ತು ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾತ್ಸವ ಹೇಳಿದ್ದರು. ಅಲ್ಲದೆ, ಮುಕ್ತ ರಾಜತಾಂತ್ರಿಸ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿತ್ತು. 

ಈ ಆಗ್ರಹಕ್ಕೆ ಮಣಿದಿರುವ ಪಾಕಿಸ್ತಾನ ಸರ್ಕಾರ ಇದೀಗ ಜಾಧವ್'ಗೆ ಮೂರನೇ ಬಾರಿ ಮುಕ್ತ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ ಮಾಡಿಕೊಟ್ಟಿದೆ. 

ಈ ಕುರಿತು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮೂದ್ ಖುರೇಷಿ ಹೇಳಿಕೆ ನೀಡಿದ್ದು, ಜಾಧವ್ ಗಾಗಿ ಪಾಕಿಸ್ತಾನ ಭಾರತಕ್ಕೆ ಮೂರನೇ ರಾಜತಾಂತ್ರಿಕ ಸಂಪರ್ಕದ ಅವಕಾಶ ಕಲ್ಪಿಸುತ್ತಿದೆ. ಭೇಟಿ ವೇಳೆ ಭದ್ರತಾ ಸಿಬ್ಬಂದಿಗಳಿರಬಾರದು ಎಂಬ ಭಾರತದ ಬೇಡಿಕೆಯನ್ನು ಈಡೇರಿಸುತ್ತೇವೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com