ಕೋವಿಡ್-19ಗೆ ಬ್ರೆಜಿಲ್ ನಲ್ಲಿ 50 ಸಾವಿರಕ್ಕೂ ಹೆಚ್ಚು ಬಲಿ‌: ಅತಿ ಹೆಚ್ಚು ಕೊರೋನಾ ಸಾವು ಕಂಡ ಜಗತ್ತಿನ ಎರಡನೇ ರಾಷ್ಟ್ರ

213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾವೈರಸ್ ಗೆ ಬ್ರೆಜಿಲ್ ನಲ್ಲಿ ಸಾವಿನ ಸಂಖ್ಯೆ 50 ಸಾವಿರ ಗಡಿ ದಾಟಿದೆ. ಆ ಮೂಲಕ ಬ್ರೆಜಿಲ್ ಅತೀ ಹೆಚ್ಚು ಕೊರೋನಾ ಸಾವು ಕಂಡ ಜಗತ್ತಿನ 2ನೇ ರಾಷ್ಟ್ರ ಎಂಬ ಕುಖ್ಯಾಗೆ ಭಾಜನವಾಗಿದೆ. 
ಕೊರೋನಾ ವೈರಸ್ ಆರ್ಭಟ
ಕೊರೋನಾ ವೈರಸ್ ಆರ್ಭಟ

ಬ್ರೆಸಿಲಿಯಾ: 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾವೈರಸ್ ಗೆ ಬ್ರೆಜಿಲ್ ನಲ್ಲಿ ಸಾವಿನ ಸಂಖ್ಯೆ 50 ಸಾವಿರ ಗಡಿ ದಾಟಿದೆ. ಆ ಮೂಲಕ ಬ್ರೆಜಿಲ್ ಅತೀ ಹೆಚ್ಚು ಕೊರೋನಾ ಸಾವು ಕಂಡ ಜಗತ್ತಿನ 2ನೇ ರಾಷ್ಟ್ರ ಎಂಬ ಕುಖ್ಯಾಗೆ ಭಾಜನವಾಗಿದೆ. 

ಬ್ರೆಜಿಲ್ ನಲ್ಲಿ ಕಳೆದ 24 ಗಂಟೆಗಳಲ್ಲಿ 17,400 ಹೊಸ ಪ್ರಕರಣಗಳು ಹಾಗೂ ಸೋಂಕಿನಿಂದ 640 ಮಂದಿ ಸಾವಿಗೀಡಾಗಿದ್ದಾರೆ.  ಆ ಮೂಲಕ ಬ್ರೆಜಿಲ್ ನಲ್ಲಿ ಸೋಂಕಿತರ ಸಂಖ್ಯೆ  10,85,038ಕ್ಕೆ ಏರಿಕೆಯಾಗಿದ್ದು, ಕೊರೋನಾ ಸಾವಿನ ಸಂಖ್ಯೆ 50,617ಕ್ಕೆ ಏರಿಕೆಯಾಗಿದೆ. ಇನ್ನು ಈ ವರೆಗೂ ಬ್ರೆಜಿಲ್ ನಲ್ಲಿ 5,50,000 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.

ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಕೋವಿಡ್–19ನಿಂದ ಈವರೆಗೆ 1,19,900 ಜನರು ಮೃತಪಟ್ಟಿದ್ದಾರೆ. ಅಲ್ಲಿನ ಒಟ್ಟು ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ 22,00,000 ದಾಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com