ಪಂಚೇನ್ ಲಾಮಾ
ಪಂಚೇನ್ ಲಾಮಾ

ಪಂಚೆನ್ ಲಾಮಾ ಎಲ್ಲಿದ್ದಾರೆ? ಚೀನಾಗೆ ಅಮೆರಿಕದ ಪ್ರಶ್ನೆ

ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ಚೀನಾ ವಿರುದ್ಧ ಬಹಿರಂಗವಾಗಿಯೇ ತೊಡ ತಟ್ಟುತ್ತಿರುವ ಅಮೆರಿಕ ಇದೀಗ ಹೊಸದಂದು ರಣತಂತ್ರದ ಮೂಲಕ ಚೀನಾ ಮೇಲೆ ಒತ್ತಡ ಹೇರಲು ಮುಂದಾದಿಗೆ.

ವಾಷಿಂಗ್ಟನ್: ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ಚೀನಾ ವಿರುದ್ಧ ಬಹಿರಂಗವಾಗಿಯೇ ತೊಡ ತಟ್ಟುತ್ತಿರುವ ಅಮೆರಿಕ ಇದೀಗ ಹೊಸದಂದು ರಣತಂತ್ರದ ಮೂಲಕ ಚೀನಾ ಮೇಲೆ ಒತ್ತಡ ಹೇರಲು ಮುಂದಾದಿಗೆ.

ಹೌದು.. ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿರುವ ಅಮೆರಿಕ ಇದೀಗ ಪಂಚೆನ್ ಲಾಮಾ ಎಲ್ಲಿದ್ದಾರೆ ಎಂದು ಪ್ರಶ್ನಿಸುತ್ತಿದೆ. 25 ವರ್ಷಗಳಿಂದ ನಾಪತ್ತೆಯಾಗಿರುವ ಪಂಚೇನ್ ಲಾಮಾ ಎಲ್ಲಿದ್ದಾರೆ. ಅವರ  ಇರುವಿಕೆ ಕುರಿತು ಬಹಿರಂಗ ಪಡಿಸಿ ಎಂದು ಅಮೆರಿಕ ಆಗ್ರಹಿಸುತ್ತಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಮೆರಿಕ ಕಾರ್ಯದರ್ಶಿ ಮೈಕ್ ಪೊಂಪಿಯೋ, ಚೀನಾ ಈ ಕೂಡಲೇ ಪಂಚೇನ್ ಲಾಮಾ ಅವರ ಇರುವಿಕೆ ಕುರಿತು ಮಾಹಿತಿ ಬಹಿರಂಗ ಮಾಡಬೇಕು. ದಲೈಲಾಮಾ ಬಳಿಕ ಟೆಬಿಟ್ ನಲ್ಲಿ ಅತ್ಯಂತ ಪ್ರಭಾವಿ ಮತ್ತು ಪ್ರಮುಖ ಧಾರ್ಮಿಕ  ಗುರುವಾಗಿರುವ ಪಂಚೇನ್ ಲಾಮಾ ಎಲ್ಲಿದ್ದಾರೆ ಎಂಬುದರ ಕುರಿತು ಚೀನಾ ಸರ್ಕಾರ ಮಾಹಿತಿ ನೀಡಬೇಕು. ಚೀನಾ ಸರ್ಕಾರ ಧಾರ್ಮಿಕ ಅಸಹಿಷ್ಣು ಎಂಬ ಆರೋಪವಿದ್ದು, ಈ ಬಗ್ಗೆಯೂ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಹೇಳಿದ್ದಾರೆ.

ಪಂಚೇನ್ ಲಾಮಾ ನಾಪತ್ತೆಯಾಗಿ 25 ವರ್ಷಗಳು ಕಳೆದು ಹೋಗಿದ್ದು, ಒಂದು ಧಾರ್ಮಿಕ ಸಮುದಾಯ ಪ್ರಭಾವಿ ನಾಯಕ ನಾಪತ್ತೆಯಾಗಿ ವರ್ಷಗಳೇ ಕಳೆದರೂ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇದು ಆ ಸರ್ಕಾರದ ಧಾರ್ಮಿಕ ಅಸಹಿಷ್ಣುತೆಯನ್ನು ತೋರಿಸುತ್ತದೆ ಎಂದು  ಹೇಳಿದ್ದಾರೆ.

ಟಿಬೆಟಿಯನ್ ಬೌದ್ಧ ಧರ್ಮದ ಎರಡನೇ ಪವಿತ್ರ ಧರ್ಮಗುರುವಾದ ಪಂಚೆನ್ ಲಾಮಾ ​​ಅವರ ಪುನರ್ಜನ್ಮ ಎಂದು ಘೋಷಿಸಲಾಗಿರುವ ಗೆಧುನ್ ಚೋಕಿ ನೈಮಾ, ಕಳೆದ 25 ವರ್ಷಗಳಿಂದ ನಾಪತ್ತೆಯಾಗಿದ್ದಾರೆ. 1995ರಲ್ಲಿ ಅವರ 5ನೇ ವಯಸ್ಸಿನಲ್ಲಿ ಪಿಆರ್ ಸಿ (People's Republic  of China) ಸರ್ಕಾರ ಪಂಚೇನಾ ಲಾಮಾರನ್ನು ವಶಕ್ಕೆ ಪಡೆದ ಬಳಿಕ ಇಂದಿನ ವರೆಗೂ ಅವರ ಇರುವಿಕೆ ಪತ್ತೆಯಾಗಿಲ್ಲ. ಮುಂದಿನ ದಲೈ ಲಾಮಾ ಆಯ್ಕೆ ಮಾಡುವುದು ತನ್ನ ಹಕ್ಕು ಎಂದು ಚೀನಾ ಕಮ್ಯೂನಿಸ್ಟ್ ಪಕ್ಷ ವಾದಿಸುತ್ತಿದ್ದು, ಇದೇ ಕಾರಣಕ್ಕೆ ಪಂಚೆನ್ ಲಾಮಾ ಅವರ  ಪುನರ್ಜನ್ಮವಾಗಿರುವ ಗೆಧುನ್ ಚೋಕಿ ನೈಮಾ ನೇಮಕವನ್ನು ಅದು ವಿರೋಧಿಸುತ್ತಿದೆ. ಹೀಗಾಗಿಯೇ ಅವರ ಅಪಹರಣ ನಡೆದಿದೆ. ಯಾವುದೇ ಸಾರ್ವಜನಿಕ ವೇದಿಕಿಗಳಲ್ಲಿ ಅವರು ಕಾಣಿಸಿಕೊಂಡಿಲ್ಲ. ಕೇವಲ 5ನೇ ವಯಸ್ಸಿನಲ್ಲೇ ಅವರನ್ನು ವಶಕ್ಕೆ ಪಡೆಯಲಾಗಿದೆ. ಇದು ಸಾಮಾನ್ಯ  ಸಂಗತಿಯಲ್ಲ. ಪಂಚೇನ್ ಲಾಮಾಗೆ ಅವರ ಮಾನವ ಹಕ್ಕುಗಳು ಲಭ್ಯವಾಗಬೇಕು ಎಂದು ಪೊಂಪಿಯೋ ಆಗ್ರಹಿಸಿದ್ದಾರೆ.

ಈ ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ರಾಯಭಾರಿ ಸ್ಯಾಮ್ ಬ್ರೌನ್‌ಬ್ಯಾಕ್ ಅವರು, ತಮ್ಮ ಧರ್ಮ ಗುರುವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಟಿಬೆಟಿಯನ್ನರಿಗಿದ್ದು, ಪಂಚೆನ್ ಲಾಮಾ ಎಲ್ಲಿದ್ದಾರೆ ಎಂಬುದನ್ನು ಚೀನಾ ಜಗತ್ತಿಗೆ  ತಿಳಿಸಬೇಕು ಎಂದು ಒತ್ತಾಯಿಸಿದ್ದರು.

ಕೊರೋನಾ ವೈರಸ್ ಗೆ ಚೀನಾ ಕಾರಣ ಎಂದು ಇಡೀ ವಿಶ್ವವೇ ಶಂಕೆಯಿಂದ ನೋಡುತ್ತಿರುವ ಈ ಹೊತ್ತಿನಲ್ಲೇ ಅಮೆರಿಕ ಈ ಪ್ರಶ್ನೆ ಮಾಡುತ್ತಿರುವುದು ಚೀನಾಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. 

Related Stories

No stories found.

Advertisement

X
Kannada Prabha
www.kannadaprabha.com