ಎಕೆ-47 203
ಎಕೆ-47 203

ರಾಜನಾಥ ಸಿಂಗ್ ರಷ್ಯಾ ಭೇಟಿ: ಎಕೆ-47 203 ರೈಫಲ್ ಒಪ್ಪಂದ ಅಂತಿಮ, ಭಾರತದಲ್ಲೇ ಉತ್ಪಾದನೆ!

ರಕ್ಷಣಾ ಸಚಿವ ರಾಜನಾಥ ಸಿಂಗ್ ರಷ್ಯಾಗೆ ಭೇಟಿ ನೀಡಿದ್ದು ಈ ವೇಳೆ ಎಕೆ-47 203 ಉತ್ಪಾದನೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. 

ಮಾಸ್ಕೋ: ರಕ್ಷಣಾ ಸಚಿವ ರಾಜನಾಥ ಸಿಂಗ್ ರಷ್ಯಾಗೆ ಭೇಟಿ ನೀಡಿದ್ದು ಈ ವೇಳೆ ಎಕೆ-47 203 ಉತ್ಪಾದನೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. 

ಭಾರತದಲ್ಲೇ ಎಕೆ 47 ರೈಫಲ್ ನ ಅತ್ಯಾಧುನಿಕ ಮಾದರಿ ಆಗಿರುವ ಎಕೆ-47 203 ರೈಫಲ್ ಗಳನ್ನು ಉತ್ಪಾದನೆಯ ಮಾಡಲಾಗುತ್ತದೆ.

ಭಾರತೀಯ ಸೇನೆಗೆ 7,70,000 ಎಕೆ-47 203 ರೈಫಲ್ ಗಳ ಅಗತ್ಯ ಇದ್ದು ಈ ಪೈಕಿ 1 ಲಕ್ಷ ರೈಫಲ್ ಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಇನ್ನುಳಿದ ರೈಫಲ್ ಗಳನ್ನು ಭಾರತದಲ್ಲೇ ಉತ್ಪಾದಿಸಲಾಗುವುದು ಎಂದು ರಷ್ಯಾದ ಸ್ಪುಟ್ನಿಕ್ ಸುದ್ದಿ ಸಂಸ್ಧೆ ವರದಿ ಮಾಡಿದೆ. 

ಇಂಡೋ-ರಷ್ಯಾ ರೈಫಲ್ಸ್ ಪ್ರೈವೇಟ್ ಲಿಮಿಟೆಡ್(ಐಆರ್ಆರ್ಆರ್ಎಲ್) ಜಂಟಿ ಉದ್ಯಮದ ಮುಂದಾಳತ್ವದಲ್ಲಿ  ಎಕೆ-47 203 ರೈಫಲ್ ಗಳನ್ನು ಭಾರತದಲ್ಲೇ ಉತ್ಪಾದಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. 

Related Stories

No stories found.

Advertisement

X
Kannada Prabha
www.kannadaprabha.com