ಭಾರತದಿಂದ ಪಬ್ ಜಿ ನಿಷೇಧಕ್ಕೆ ಚೀನಾ ತತ್ತರ: ಟೆನ್ಸೆಂಟ್ ಕಂಪನಿಗೆ 14 ಶತಕೋಟಿ ಡಾಲರ್ ನಷ್ಟ!

ಭಾರತದ ಯುವಜನತೆಗೆ ಆಟದ ಹುಚ್ಚು ಹಿಡಿಸಿದ್ದ ಪಬ್ ಜಿ ಗೇಮ್ ಅನ್ನು ಭಾರತ ಸರ್ಕಾರ ನಿಷೇದ ಮಾಡಿದ ಬೆನ್ನಲ್ಲೇ ಚೀನಾದ ಟೆನ್ಸೆಂಟ್ ಕಂಪನಿಯ ಷೇರು ಭಾರೀ ಇಳಿಕೆಯಾಗಿದೆ. 
ಪಬ್ ಜಿ
ಪಬ್ ಜಿ

ಬೀಜಿಂಗ್: ಭಾರತದ ಯುವಜನತೆಗೆ ಆಟದ ಹುಚ್ಚು ಹಿಡಿಸಿದ್ದ ಪಬ್ ಜಿ ಗೇಮ್ ಅನ್ನು ಭಾರತ ಸರ್ಕಾರ ನಿಷೇದ ಮಾಡಿದ ಬೆನ್ನಲ್ಲೇ ಚೀನಾದ ಟೆನ್ಸೆಂಟ್ ಕಂಪನಿಯ ಷೇರು ಭಾರೀ ಇಳಿಕೆಯಾಗಿದೆ. 

ಪಬ್ ಜಿ ಆಟಕ್ಕೆ ಭಾರತೀಯ ಯುವಕರು ಹೆಚ್ಚು ಆಕರ್ಷಿತರಾಗಿದ್ದರು. ಭಾರತದಲ್ಲಿ ದೊಡ್ಡ ಮಾರುಕಟ್ಟೆ ಹೊಂದಿದ್ದ ಪಜ್ ಬಿಯನ್ನು ನಿಷೇಧಿಸಿದ ನಂತರ ಚೀನಾದ ಇಂಟರ್ ನೆಟ್ ಕಂಪನಿ ಟೆನ್ಸೆಂಟ್ ಷೇರು ಶೇ. 2ರಷ್ಟು ಇಳಿಕೆಯಾಗಿದ್ದು ಇದರೊಂದಿಗೆ ಮಾರುಕಟ್ಟೆ ಮೌಲ್ಯದಲ್ಲಿ 14 ಶತಕೋಟಿ ಡಾಲರ್ ಅನುಭವಿಸಿದೆ. 

ಭಾರತದಲ್ಲಿ ಬರೋಬ್ಬರಿ 17.5 ಕೋಟಿ ಜನ ಬಳಕೆ ಮಾಡುತ್ತಿದ್ದರು. ಲಡಾಖ್ ಗಡಿಯಲ್ಲಿ ಚೀನಾ ಉಪಟಳ ನೀಡುತ್ತಿದೆ. ಹೀಗಾಗಿ ಕೇಂದರ್ ಸರ್ಕಾರ ದೇಶದ ಭದ್ರತೆ ಮತ್ತು ಜನರ ಖಾಸಗಿತನವನ್ನು ರಕ್ಷಣೆ ಮಾಡುವ ಸಲುವಾಗಿ ಪಬ್ ಜಿ ಗೇಮ್ ಸೇರಿದಂತೆ 117 ಚೀನಾ ಅಪ್ಲಿಕೇಶನ್ ಗಳನ್ನು ನಿಷೇಧ ಮಾಡಿತ್ತು. 

ಈ ಹಿಂದೆ ಕೇಂದ್ರ ಸರ್ಕಾರ ಟಿಕ್ ಟಾಕ್ ಸೇರಿದಂತೆ 59 ಚೀನಾ ಅಪ್ಲಿಕೇಶನ್ ಗಳನ್ನು ನಿಷೇಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com