ಪಾಕಿಸ್ತಾನದಲ್ಲಿ 5,000 ದಾಟಿದ ಕೊವಿದ್‍-19 ಪ್ರಕರಣಗಳ ಸಂಖ್ಯೆ, 86 ಮಂದಿ ಸಾವು

ಪಾಕಿಸ್ತಾನದಲ್ಲಿ ದೃಢಪಟ್ಟ ಕೊವಿದ್‍-19 ಪ್ರಕರಣಗಳ ಸಂಖ್ಯೆ5,011 ಕ್ಕೆ ಏರಿದ್ದು, ಮಾರಕ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 86ಕ್ಕೇರಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಶನಿವಾರ ರಾತ್ರಿ ನವೀಕೃತ ಮಾಹಿತಿ ಸಂಚಿಕೆಯಲ್ಲಿ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ದೃಢಪಟ್ಟ ಕೊವಿದ್‍-19 ಪ್ರಕರಣಗಳ ಸಂಖ್ಯೆ5,011 ಕ್ಕೆ ಏರಿದ್ದು, ಮಾರಕ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 86ಕ್ಕೇರಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಶನಿವಾರ ರಾತ್ರಿ ನವೀಕೃತ ಮಾಹಿತಿ ಸಂಚಿಕೆಯಲ್ಲಿ ತಿಳಿಸಿದೆ.

ದೇಶದ ಪೂರ್ವ ಭಾಗದ ಪಂಜಾಬ್ ಪ್ರಾಂತ್ಯದಲ್ಲಿ ಒಟ್ಟು 2,414 ಪ್ರಕರಣಗಳು ವರದಿಯಾಗುವುದರೊಂದಿಗೆ ಈ ಪ್ರದೇಶ ಹೆಚ್ಚು ಭಾದಿತವಾಗಿ ಮುಂದುವರೆದಿದೆ. ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ 1,318 ಪ್ರಕರಣಗಳು ದೃಢಪಟ್ಟಿವೆ.

ವಾಯವ್ಯ ಖೈಬರ್ ಫಕ್ತುಂಕ್ವಾ ಪ್ರಾಂತ್ಯದಲ್ಲಿ ಕನಿಷ್ಠ 697, ನೈರುತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ 220 ಮತ್ತು ಉತ್ತರ ಗಿಲ್ಗಿಟ್-ಬಲ್ತಿಸ್ತಾನ್ ಪ್ರಾಂತ್ಯದಲ್ಲಿ 215 ಮತ್ತು ರಾಜಧಾನಿ ಇಸ್ಲಾಮಾಬಾದ್‌ನಲ್ಲಿ 113 ಪ್ರಕರಣಗಳು ದೃಢಪಟ್ಟಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com