ಕೋವಿಡ್-19: ವಿಶ್ವದಾದ್ಯಂತ 1.30 ಲಕ್ಷ ಜನರು ಸಾವು, 20 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ

ಕೊರೋನಾ ಸೋಂಕು ಬುಧವಾರ ವಿಶ್ವದಾದ್ಯಂ 38,000ಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಕಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 2003600ಕ್ಕೆ ತಲುಪಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಲಂಡನ್: ಕೊರೋನಾ ಸೋಂಕು ಬುಧವಾರ ವಿಶ್ವದಾದ್ಯಂ 38,000ಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಕಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 2003600ಕ್ಕೆ ತಲುಪಿದೆ. 

ಇದೇ ವೇಳೆ ಬುಧವಾರ 4200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 1.30 ಲಕ್ಷಕ್ಕೆ ತಲುಪಿದೆ. ಇನ್ನು ಈ ಪೈಕಿ ಯುರೋಪ್ ವೊಂದರಲ್ಲಿಯೇ 10 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 

ಯುರೋಪಿನ 40ಕ್ಕೂ ಹೆಚ್ಚು ದೇಶಗಲು ಕೊರೋನಾ ವೈರಸ್ ನಿಂದ ಬಾಧಿತವಾಗಿವೆ. ಬುಧವಾರ ಮಧ್ಯಾಹ್ನದ ವೇಳೆಗೆ ಯುರೋಪ್ ನಲ್ಲಿ ದಾಖಲಾದ ಕೊರೋನಾ ಪ್ರಕರಣಗಳ ಸಂಖ್ಯೆ 1,010,858ಕ್ಕೆ ಏರಿಕೆಯಾಗಿದ್ದು, 85,271 ಮಂದಿ ಸಾವಿಗೀಡಾಗಿದ್ದಾರೆ. 

ಈ ನಡುವೆ ಕೊರೋನಾ ಮಹಾಮಾರಿಗೆ ನಿನ್ನೆ ಇಟಲಿಯಲ್ಲಿ 578 ಮಂದಿ ಅಸು ನೀಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 21,645 ಏರಿದ್ದು, ಒಟ್ಟು 1,65,155 ಮಂದಿ ಸೋಂಕಿತರಿದ್ದಾರೆ. ಹೊಸದಾಗಿ 3,573 ಮಂದಿಗೆ ವ್ಯಾಧಿ ಅಂಟಿದೆ. 

ಕೊರೋನಾ ಬ್ರಿಟನ್ ನಲ್ಲಿಯೂ ಸಾಕಷ್ಟು ಮಂದಿಯನ್ನು ಬಲಿಪಡೆದುಕೊಂಡಿದ್ದು, ಬುಧವಾರ ಒಂದೇ ದಿನ 761 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲಿಗೆ ಸತ್ತವರ ಸಂಖ್ಯೆ 12,868ಕ್ಕೆ ಮುಟ್ಟಿದೆ. 4,603 ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡಿದ್ದು, ಒಟ್ಟು 98,476 ಮಂದಿಗೆ ಸೋಂಕು ದೃಢವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com