ಭಾರತದ ಭೂ ಪ್ರದೇಶಗಳನ್ನು ಒಳಗೊಂಡ ಹೊಸ ನಕ್ಷೆಯನ್ನು ವಿಶ್ವಸಂಸ್ಥೆ, ಜಾಗತಿಕ ಸಮುದಾಯಕ್ಕೆ ರವಾನೆ; ನೇಪಾಳದ ಉದ್ಧಟತನ 

ಭಾರತದ ಭೂ ಪ್ರದೇಶಗಳನ್ನು ಒಳಗೊಂಡ ಹೊಸ ನಕ್ಷೆಯನ್ನು ವಿಶ್ವಸಂಸ್ಥೆ, ಜಾಗತಿಕ ಸಮುದಾಯಕ್ಕೆ ರವಾನೆ ಮಾಡುವುದಾಗಿ ಹೇಳುವ ಮೂಲಕ ನೇಪಾಳ ಸರ್ಕಾರ ಮತ್ತೆ ಉದ್ಧಟತನ ತೋರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತದ ಭೂ ಪ್ರದೇಶಗಳನ್ನು ಒಳಗೊಂಡ ಹೊಸ ನಕ್ಷೆಯನ್ನು ವಿಶ್ವಸಂಸ್ಥೆ, ಜಾಗತಿಕ ಸಮುದಾಯಕ್ಕೆ ರವಾನೆ ಮಾಡುವುದಾಗಿ ಹೇಳುವ ಮೂಲಕ ನೇಪಾಳ ಸರ್ಕಾರ ಮತ್ತೆ ಉದ್ಧಟತನ ತೋರಿದೆ.

ಹೌದು... ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ನೇತೃತ್ವದ ನೇಪಾಳ ಸರ್ಕಾರವು ಭಾರತೀಯ ಭೂಪ್ರದೇಶಗಳನ್ನು ನೇಪಾಳದ್ದು ಎಂದು ತೋರಿಸುವ ಹೊಸ ನಕ್ಷೆಯನ್ನು ವಿಶ್ವಸಂಸ್ಥೆಗೆ ಕಳುಹಿಸಲು ಯೋಜಿಸುತ್ತಿದೆ. ವಿಶ್ವಸಂಸ್ಥೆ ಮಾತ್ರವಲ್ಲದೇ, ಗೂಗಲ್ ಮ್ಯಾಪ್ ಗೂ ನಕ್ಷೆ ಕಳುಹಿಸಿಕೊಡಲು ನೇಪಾಳ ಸರ್ಕಾರ ಸಿದ್ಧತೆ ನಡೆಸಿದೆ. 

ಭಾರತದ ಲಿಪುಲೇಖ್‌, ಕಾಲಾಪಾನಿ ಮತ್ತು ಲಿಂಪಿಯಾಧುರಾಗಳನ್ನು ನೇಪಾಳಕ್ಕೆ ಸೇರ್ಪಡೆ ಮಾಡಿಕೊಂಡ ಭೂಪಟಕ್ಕೆ ನೇಪಾಳ ಸಂಸತ್ತು ಜೂನ್‌ 13ರಂದು ಅನುಮೋದನೆ ನೀಡಿತ್ತು. ಪರಿಷ್ಕೃತ ನಕಾಶೆಯನ್ನು ಇಂಗ್ಲೀಷ್‌ನಲ್ಲಿಯೂ ಮುದ್ರಿಸುವ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಶೀಘ್ರದಲ್ಲಿಯೇ ಲಿಪುಲೇಖ್‌, ಕಾಲಾಪಾನಿ ಮತ್ತು ಲಿಂಪಿಯಾಧುರಾಗಳನ್ನು ಒಳಗೊಂಡಿರುವ ಭೂಪಟವನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕಳುಹಿಸಿಕೊಡುತ್ತೇವೆ ಎಂದು ನೇಪಾಳದ ಭೂ ನಿರ್ವಹಣಾ ಸಚಿವೆ ಪದ್ಮಾ ಆರ್ಯಾಳ್‌ ಹೇಳಿದ್ದಾರೆ.

ಪ್ರಧಾನಿ ಕೆ.ಪಿ.ಶರ್ಮಾ ಓಲಿ ಸರ್ಕಾರದ ಈ ಕ್ರಮಕ್ಕೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿತ್ತು. ಚೀನಾದ ಆಮಿಷಕ್ಕೆ ಒಳಗಾಗಿ ಭಾರತ ವಿರೋಧಿ ನೀತಿ ಅನುಸರಿಸುತ್ತಿರುವ ಓಲಿ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಬೇಕು ಎಂಬ ಪ್ರಯತ್ನಗಳೂ ನಡೆಯುತ್ತಿವೆ. ಆದರೆ ಅದಾವುದಕ್ಕೂ ಮಣಿಯದ ಪ್ರಧಾನಿ ಓಲಿ, ತಮ್ಮ ನಿರ್ಧಾರಕ್ಕೆ ಅಂಟಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com