ಭಾರತ ನಮ್ಮ ನಿಜವಾದ ಮಿತ್ರ ರಾಷ್ಟ್ರ: ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಪುನರುಚ್ಛಾರ; 7 ಒಪ್ಪಂದಗಳಿಗೆ ಸಹಿ

ಭಾರತ ದೇಶವು ಬಾಂಗ್ಲಾದೇಶದ ನಿಜವಾದ ಸ್ನೇಹಿತ ಎಂದು ಪ್ರಧಾನಿ ಶೇಖ್ ಹಸೀನಾ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದು, ಇದೇ ವೇಳೆ 1971 ರಲ್ಲಿ ಪಾಕಿಸ್ತಾನದ ವಿರುದ್ಧದ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಬೆಂಬಲಕ್ಕಾಗಿ ದೇಶಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ಶೇಖ್ ಹಸೀನಾ-ಪ್ರಧಾನಿ ಮೋದಿ
ಶೇಖ್ ಹಸೀನಾ-ಪ್ರಧಾನಿ ಮೋದಿ

ನವದೆಹಲಿ: ಭಾರತ ದೇಶವು ಬಾಂಗ್ಲಾದೇಶದ ನಿಜವಾದ ಸ್ನೇಹಿತ ಎಂದು ಪ್ರಧಾನಿ ಶೇಖ್ ಹಸೀನಾ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದು, ಇದೇ ವೇಳೆ 1971 ರಲ್ಲಿ ಪಾಕಿಸ್ತಾನದ ವಿರುದ್ಧದ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಬೆಂಬಲಕ್ಕಾಗಿ ದೇಶಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

ಬುಧವಾರ, ಬಾಂಗ್ಲಾದೇಶ ಪಾಕಿಸ್ತಾನ ವಿರುದ್ಧದ ವಿಜಯದ 49 ನೇ ವಾರ್ಷಿಕೋತ್ಸವವನ್ನು ಆಚರಿಸಿತು. 1971 ರ ಡಿಸೆಂಬರ್ 16 ರಂದು ಭಾರತದ ಬೆಂಬಲದೊಂದಿಗೆ ಬಾಂಗ್ಲಾದೇಶ ಪಾಕಿಸ್ತಾನ ವಿರುದ್ಧದ ಯುದ್ಧವನ್ನು ಗೆದ್ದಿತು. ಇದರ ಬೆನ್ನಲ್ಲೇ ಗುರುವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ  ವರ್ಚುವಲ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಶೇಖ್ ಹಸೀನಾ, ವಿಜಯದ ತಿಂಗಳಿನಲ್ಲಿ ಮತ್ತೊಮ್ಮೆ ತನ್ನ ಸ್ನೇಹ ರಾಷ್ಟ್ರ ಭಾರತವನ್ನು ಭೇಟಿಯಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಡಿಸೆಂಬರ್ ಎಲ್ಲಾ ಬಾಂಗ್ಲಾದೇಶಿಗಳಲ್ಲಿ ಸಂತೋಷ, ಸ್ವಾತಂತ್ರ್ಯ ಮತ್ತು ಆಚರಣೆಯ ಉತ್ಸಾಹವನ್ನು ಹುಟ್ಟುಹಾಕುತ್ತದೆ. ನಮ್ಮ  ರಾಷ್ಟ್ರದ ಪಿತಾಮಹ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರನ್ನು ನಾವು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತೇವೆ. ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ ನಾವು ನಮ್ಮ ದೊಡ್ಡ ಸ್ವಾತಂತ್ರ್ಯವನ್ನು ಗಳಿಸಿದ್ದೇವೆ ಎಂದು ಹೇಳಿದರು.

ಅಂತೆಯೇ ಭಾರತ ನಮ್ಮ ನಿಜವಾದ ಸ್ನೇಹಿತ ಎಂದು ಹೇಳಿದ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರು, ಬಾಂಗ್ಲಾ ವಿಮೋಚೆನೆಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಮೂರು ಮಿಲಿಯನ್ ಹುತಾತ್ಮರಿಗೆ ಗೌರವ ಸಲ್ಲಿಸುತ್ತೇನೆ. ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸಶಸ್ತ್ರ ಪಡೆಗಳ ಯೋಧರಿಗೆ ಮತ್ತು  ಅವರ ಕುಟುಂಬಗಳಿಗೆ ನಾನು ಗೌರವ ಸಲ್ಲಿಸುತ್ತೇನೆ. ನಮ್ಮ ರಾಷ್ಟ್ರದ ಉದ್ದೇಶಕ್ಕಾಗಿ ತಮ್ಮ ಸಂಪೂರ್ಣ ಹೃದಯದ ಬೆಂಬಲವನ್ನು ನೀಡಿದ ಸರ್ಕಾರ ಮತ್ತು ಭಾರತದ ಜನರಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ಹೇಳಿದರು. 

ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟ ಶ್ಲಾಘಿಸಿದ ಶೇಖ್ ಹಸೀನಾ
ತಮ್ಮ ಭಾಷಣದಲ್ಲಿ, ಕೊರೋನವೈರಸ್ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತದ ಪ್ರಯತ್ನಗಳನ್ನು ಹಸೀನಾ ಶ್ಲಾಘಿಸಿದರು. 'ಭಾರತವು ಕೋವಿಡ್ ಸಾಂಕ್ರಾಮಿಕ ರೋಗವನ್ನು ಎದುರಿಸಿದ ರೀತಿಯನ್ನು ನಾನು ಪ್ರಶಂಸಿಸಬೇಕು. ಜಾಗತಿಕ ಆರ್ಥಿಕತೆಯ ಚೇತರಿಕೆಗೆ ಭಾರತ  ಮಹತ್ವದ ಕೊಡುಗೆ ನೀಡುತ್ತಿದೆ.  ಈ ಪ್ರಯತ್ನದ ಸಮಯದಲ್ಲಿ ಎರಡೂ ಕಡೆಯ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ದ್ವಿಪಕ್ಷೀಯ ಸಹಕಾರವನ್ನು ಮುಂದಿಟ್ಟಿರುವ ವಿಧಾನವನ್ನು ನಾನು ಪ್ರಶಂಸಿಸುತ್ತೇನೆ ಎಂದು ಹೇಳಿದರು.

ಆಯಾ ದೇಶಗಳ ಪರವಾಗಿ ಸಹಿ ಹಾಕಿದ ಅಧಿಕಾರಿಗಳು
ಕೊರೋನಾ ಸಾಂಕ್ರಾಮಿಕ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಮತ್ತು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ವರ್ಚುವಲ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಆಯಾ ದೇಶಗಳ ಪರವಾಗಿ ಅಧಿಕಾರಿಗಳು ಸಹಿ ಹಾಕಿದರು. ಸಂಬಂಧಪಟ್ಟ ಅಧಿಕಾರಿಗಳು ಬಾಂಗ್ಲಾದೇಶದ ಪರವಾಗಿ ತಿಳುವಳಿಕೆ ಪತ್ರಗಳಿಗೆ ಸಹಿ  ಹಾಕಿದರು. ಢಾಕಾದ ಭಾರತೀಯ ಹೈಕಮಿಷನರ್ ವಿಕ್ರಮ್ ಕೆ ದೊರೈಸ್ವಾಮಿ ಅವರು ಭಾರತ ದೇಶದ ಪರವಾಗಿ ಸಹಿ ಹಾಕಿ ಹಾಕಿದರು ಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಬಾಂಗ್ಲಾದೇಶದ ಕೃಷಿ ಸಚಿವ ಡಾ.ಅಬ್ದುರ್ ರಜಾಕ್, ಸಾಂಸ್ಕೃತಿಕ ವ್ಯವಹಾರಗಳ ಕಿರಿಯ ಸಚಿವ  ಖಾಲಿದ್ ಹೊಸೈನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಸೂದ್ ಬಿನ್ ಮೊಮೆನ್ ಅವರು ರಾಜ್ಯ ಅತಿಥಿಗೃಹದಲ್ಲಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com