ಆರೇ ವಾರದಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ ಗೂ ಲಸಿಕೆ ಸಿದ್ಧವಾಗುತ್ತದೆ: ಬಯೋ ಎನ್ ಟೆಕ್ ಸಂಸ್ಥೆ

ವಿಶ್ವಾದ್ಯಂತ ಕೊರೋನಾ ವೈರಸ್ ನ ಹೊಸ ಸ್ವರೂಪದ ಕುರಿತು ಭಾರಿ ಚರ್ಚೆ ಮತ್ತು ಭೀತಿ ಆರಂಭವಾಗಿರುವಂತೆಯೇ ಇತ್ತ ಬಯೋ ಎನ್ ಟೆಕ್ ಸಂಸ್ಥೆ ಈ ಹೊಸ ಸ್ವರೂಪದ ಕೊರೋನಾ ವೈರಸ್ ಆರೇ ವಾರದಲ್ಲಿ ಲಸಿಕೆ ಕಂಡು ಹಿಡಿಯುವುದಾಗಿ ಹೇಳಿದೆ.
ಬಯೋ ಎನ್ ಟೆಕ್ ಸಂಸ್ಥೆ
ಬಯೋ ಎನ್ ಟೆಕ್ ಸಂಸ್ಥೆ

ಲಂಡನ್: ವಿಶ್ವಾದ್ಯಂತ ಕೊರೋನಾ ವೈರಸ್ ನ ಹೊಸ ಸ್ವರೂಪದ ಕುರಿತು ಭಾರಿ ಚರ್ಚೆ ಮತ್ತು ಭೀತಿ ಆರಂಭವಾಗಿರುವಂತೆಯೇ ಇತ್ತ ಬಯೋ ಎನ್ ಟೆಕ್ ಸಂಸ್ಥೆ ಈ ಹೊಸ ಸ್ವರೂಪದ ಕೊರೋನಾ ವೈರಸ್ ಆರೇ ವಾರದಲ್ಲಿ ಲಸಿಕೆ ಕಂಡು ಹಿಡಿಯುವುದಾಗಿ ಹೇಳಿದೆ.

ಈ ಕುರಿತಂತೆ ಮಾತನಾಡಿದ ಬಯೋ ಎನ್ ಟೆಕ್ ಸಂಸ್ಥೆಯ ಸಹ ಸಂಸ್ಥಾಪಕ ಉಗರ್ ಸಹಿನ್ ಅವರು, 'ಕೊರೋನಾ ವೈರಸ್ ವಿರುದ್ಧದ ಲಸಿಕೆಯೇ ಹೊಸ ಸ್ವರೂಪದ ವೈರಸ್ ಚಿಕಿತ್ಸೆಗೂ ಬಳಕೆ ಮಾಡಬಹುದು. ಹಾಲಿ ಲಸಿಕೆಗಳು ಕೂಡ ಹೊಸ ಸ್ವರೂಪದ ವೈರಸ್ ಮೇಲೂ ಪರಿಣಾಮ  ಬೀರುತ್ತದೆ. ಈ ಬಗ್ಗೆ ಶಂಕೆ ಬೇಡ.. ಅದಾಗ್ಯೂ ಅಗತ್ಯವಿದ್ದರೆ ಹೊಸ ಸ್ವರೂಪದ ವೈರಸ್ ಗೂ ಆರು ವಾರಗಳಲ್ಲಿ ಲಸಿಕೆ ಕಂಡುಹಿಡಿಯಬಹುದು.

ವೈಜ್ಞಾನಿಕವಾಗಿ, ಹಾಲಿ ಲಸಿಕೆ ಪ್ರತಿರಕ್ಷಣಾ ಪ್ರತಿಕ್ರಿಯೆಯ ಮೂಲಕ ಹೊಸ ವೈರಸ್ ರೂಪಾಂತರವನ್ನು ಸಹ ನಿಭಾಯಿಸುತ್ತದೆ. ಒಂದು ವೇಳೆ ಅಗತ್ಯ ಬಿದ್ದರೆ, ಆರು ವಾರಗಳಲ್ಲಿ ಇದಕ್ಕೂ ಲಸಿಕೆ ಸಿದ್ಧ ಪಡಿಸಬಹುದು. ಮೆಸೆಂಜರ್ ತಂತ್ರಜ್ಞಾನದ ಸೌಂದರ್ಯವೆಂದರೆ ಈ ವೈರಸ್ ನ ಹೊಸ  ರೂಪಾಂತರವನ್ನು ಸಂಪೂರ್ಣವಾಗಿ ಅನುಕರಿಸುವ ಲಸಿಕೆಯನ್ನು ನಾವು ನೇರವಾಗಿ ಎಂಜಿನಿಯರ್ ಮಾಡಲು ಪ್ರಾರಂಭಿಸಬಹುದು. ಆರು ವಾರಗಳಲ್ಲಿ ನಾವು ಹೊಸ ಲಸಿಕೆಯನ್ನು ತಾಂತ್ರಿಕವಾಗಿ ಒದಗಿಸಲು ಸಾಧ್ಯವಾಗುತ್ತದೆ ಎಂದು ಸಹಿನ್ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com