ಕೊರೋನಾ ವೈರಸ್: ತೀವ್ರ ಜ್ವರದಿಂದಾಗಿ ಚೀನಾದಲ್ಲಿ ವಿಶೇಷ ವಿಮಾನ ಹತ್ತದ ಆರು ಭಾರತೀಯರು 

ಕೊರೋನಾ ವೈರಸ್ ಪೀಡಿತ ವುಹಾನ್ ನಗರದಲ್ಲಿ ತೀವ್ರ ಜ್ವರದಿಂದಾಗಿ  ಆರು ಭಾರತೀಯರನ್ನು ಮೊದಲ ವಿಶೇಷ ಏರ್ ಇಂಡಿಯಾ ವಿಮಾನ ಹತ್ತುವುದನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀಜಿಂಗ್ : ಕೊರೋನಾ ವೈರಸ್ ಪೀಡಿತ ವುಹಾನ್ ನಗರದಲ್ಲಿ ತೀವ್ರ ಜ್ವರದಿಂದಾಗಿ  ಆರು ಭಾರತೀಯರನ್ನು ಮೊದಲ ವಿಶೇಷ ಏರ್ ಇಂಡಿಯಾ ವಿಮಾನ ಹತ್ತುವುದನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವುಹಾನ್ ನಲ್ಲಿದ್ದ ಭಾರತೀಯ 324 ವಿದ್ಯಾರ್ಥಿಗಳನ್ನು ಹೊತ್ತ ಮೊದಲ ವಿಮಾನ ಬೆಳಗ್ಗೆ ಹೊರಟಿತ್ತು. ತೀವ್ರ ಜ್ವರದ ಕಾರಣದಿಂದಾಗಿ ಆರು ವಿದ್ಯಾರ್ಥಿಗಳು ಭಾರತಕ್ಕೆ ಹೋಗದಂತೆ  ಚೀನಾದ ವಲಸೆ ಅಧಿಕಾರಿಗಳು ತಡೆದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಆರು ವಿದ್ಯಾರ್ಥಿಗಳಿಗೆ ಕೊರೋನಾ ವೈರಸ್ ಲಕ್ಷಣಗಳು ಇದೆಯೇ ಎಂಬುದನ್ನು ನಿರ್ಧರಿಸಲು ಪರೀಕ್ಷೆಗೊಳಪಡಿಸಲಾಗುತ್ತದೆ. ಚೀನಾದಿಂದ ಸ್ಥಳಾಂತರಿಸುವ ಮುನ್ನ ವಿಮಾನ ಹಾರಾಟದ ಮೊದಲು ಪರೀಕ್ಷಿಸಲಾಗುವುದು ಮತ್ತು ಭಾರತವನ್ನು ತಲುಪಿದ ನಂತರ 14 ದಿನಗಳವರೆಗೆ ನಿಗಾ ಇಡಲಾಗುವುದು ಎಂದು ಭಾರತೀಯ ರಾಯಬಾರಿಗಳು ಭಾರತೀಯರಿಗೆ ಮಾಹಿತಿ ನೀಡಿದ್ದಾರೆ.

211 ವಿದ್ಯಾರ್ಥಿಗಳು, 110 ವೃತ್ತಿದಾರರು ಹಾಗೂ ಮೂವರು ಅಪ್ತಾಪ್ತರನ್ನೊಳಗೊಂಡ ವಿಶೇಷ ಏರ್ ಇಂಡಿಯಾ ವಿಮಾನ ವುಹಾನ್ ನಿಂದ ಹೊರಟು ಬೆಳಗ್ಗೆ 7-30ಕ್ಕೆ ದೆಹಲಿಗೆ ಬಂದಿಳಿತು. 

ಕೊರೋನಾ ವೈರಸ್ ನಿಂದಾಗಿ ಮೃತರ ಸಂಖ್ಯೆ 259ಕ್ಕೆ ಏರಿಕೆ ಆಗಿದ್ದು, 11 ಸಾವಿರದ 791 ಜನರಲ್ಲಿ ಈ ಸೋಂಕು ಪತ್ತೆಯಾಗಿದೆ ಎಂದು ಚೀನಾ ಆರೋಗ್ಯ ಸಂಬಂಧಿತ ಸಂಸ್ಥೆಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com