ಕರೋನಾ ವೈರಸ್: ವುಹಾನ್ ನಿಂದ ಹೊರಟ ಭಾರತೀಯರನ್ನು ಹೊತ್ತ 2ನೇ ವಿಮಾನ

ಚೀನಾದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕರೋನಾ ವೈರಸ್ ಪರಿಣಾಮ ಚೀನಾದ ವುಹಾನ್ ನಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ ಹೊರಟ ಇಂಡಿಯನ್ ಏರ್ ಲೈನ್ಸ್ ವಿಮಾನ ಪ್ರಯಾಣಿಕರನ್ನು ಹೊತ್ತು ಭಾರತದತ್ತ ಟೇಕ್ ಆಫ್ ಆಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಚೀನಾದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕರೋನಾ ವೈರಸ್ ಪರಿಣಾಮ ಚೀನಾದ ವುಹಾನ್ ನಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ ಹೊರಟ ಇಂಡಿಯನ್ ಏರ್ ಲೈನ್ಸ್ ವಿಮಾನ ಪ್ರಯಾಣಿಕರನ್ನು ಹೊತ್ತು ಭಾರತದತ್ತ ಟೇಕ್ ಆಫ್ ಆಗಿದೆ.

ವುಹಾನ್ ವಿಮಾನ ನಿಲ್ದಾಣದಿಂದ ಸುಮಾರು 323 ಮಂದಿ ಭಾರತೀಯರನ್ನು ಹೊತ್ತು ಭಾರತದತ್ತ ಪ್ರಯಾಣ ಬೆಳೆಸಿದೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ವಿಮಾನ ಇಳಿಯಲಿದ್ದು, ಇಲ್ಲಿ ಎಲ್ಲ ಪ್ರಯಾಣಿಕರಿಗೆ ವಿಶೇಷ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಇದಕ್ಕಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ವಿಭಾಗ ತೆರೆಯಲಾಗಿದ್ದು, ಅಲ್ಲಿಯೇ ಎಲ್ಲ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ.

ವೈರಸ್ ನಿಂದ ರಕ್ಷಣೆ ನೀಡುವ ಸಾಮರ್ಥ್ಯದ ಮಾಸ್ಕ್, ಗ್ಲೌಸ್​, ಔಷಧಿಗಳನ್ನು ವಿಮಾನದ ಪ್ರತಿ ಆಸನದಲ್ಲೂ ಇರಿಸಲಾಗಿದ್ದು, ಇಬ್ಬರು ವಿಶೇಷ ವೈದ್ಯರನ್ನು ಸಹ ಜತೆಯಲ್ಲಿದ್ದಾರೆ ಎನ್ನಲಾಗಿದೆ. ವುಹಾನ್​ನಲ್ಲಿ ವಿಮಾನಕ್ಕೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಾಗ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಗುವುದು. ಒಂದು ವೇಳೆ ಯಾವುದೇ ವ್ಯಕ್ತಿಯಲ್ಲಿ ಕೊರೊನಾ ವೈರಸ್​ ಕಂಡುಬಂದಲ್ಲಿ ಅಂತಹ ವ್ಯಕ್ತಿಯನ್ನು ವಿಮಾನದೊಳಗೆ ಬಿಡಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com