ಅಮೆರಿಕಾ ಸೆನೆಟ್'ನಲ್ಲಿ ಅಧ್ಯಕ್ಷ ಟ್ರಂಪ್'ಗೆ ಜಯ: ವಾಗ್ದಂಡನೆ ಮಂಡಿಸಿದ್ದ ಡೆಮಾಕ್ರಟಿಕ್'ಗೆ ತೀವ್ರ ಮುಖಭಂಗ

ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಅಮೆರಿಕಾ ಸೆನೆಟ್ ನಲ್ಲಿ ಡೆಮಾಕ್ರಟಿಕ್ ರಿಪಬ್ಲಿಕನ್ ಪಕ್ಷ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಂಡಿಸಿದ್ದ ವಾಗ್ದಂಡನೆಗೆ ಸೋಲಾಗಿದ್ದು, ಟ್ರಂಪ್ ಅವರು ದೋಷಾರೋಪದಿಂದ ಖುಲಾಸೆಗೊಂಡ ಹಿನ್ನೆಲೆಯಲ್ಲಿ ತೀವ್ರ ಮುಖಭಂಗ ಎದುರಿಸುವಂತಾಗಿದೆ. 
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಅಮೆರಿಕಾ ಸೆನೆಟ್ ನಲ್ಲಿ ಡೆಮಾಕ್ರಟಿಕ್ ರಿಪಬ್ಲಿಕನ್ ಪಕ್ಷ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಂಡಿಸಿದ್ದ ವಾಗ್ದಂಡನೆಗೆ ಸೋಲಾಗಿದ್ದು, ಟ್ರಂಪ್ ಅವರು ದೋಷಾರೋಪದಿಂದ ಖುಲಾಸೆಗೊಂಡ ಹಿನ್ನೆಲೆಯಲ್ಲಿ ತೀವ್ರ ಮುಖಭಂಗ ಎದುರಿಸುವಂತಾಗಿದೆ. 

ಅಧಿಕಾರ ದುರುಪಯೋಗ ಮತ್ತು ಸಂಸತ್ ತನಿಖೆಗೆ ಅಡ್ಡಿಯುಂಟು ಮಾಡಿದ್ದಾರೆಂಬ ಆರೋಪದ ಮೇಲೆ ಡೆಮಾಕ್ರೆಟಿಕ್ ಪಕ್ಷ ಟ್ರಂಪ್ ವಿರುದ್ಧ ವಾಗ್ದಂಡನೆ ಮಂಡಿಸಿತ್ತು. ಹೀಗಾಗಿ ಈ ವಿಚಾರ ಅಮೆರಿಕಾದ ಸೆನೆಟ್ ನಲ್ಲಿ ವಿಚಾರಣೆಗೆ ಬಂದಿತ್ತು. 

ಟ್ರಂಪ್ ಅವರ ಕಾನೂನು ತಂಡವು ಅಧ್ಯಕ್ಷಕರು ಯಾವುದೇ ತಪ್ಪನ್ನೂ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಡೆಮಾಕ್ರೆಟಿಕ್ ಪಕ್ಷದ ವಾಗ್ದಂಡನೆ ದುರ್ಬಲದಿಂದ ಕೂಡಿದ್ದು, ಸಂವಿಧಾನದ ಅಪಾಯಕ ಕೃತ್ಯ ಎಂದು ಪ್ರತಿಪಾದಿಸಿದರು. ಇದರಂತೆ ವಾಗ್ದಂಡನೆಯನ್ನು ತಿರಸ್ಕರಿಸುವಂತೆ ಒತ್ತಾಯಿಸಿದರು. 

ಬಳಿಕ ಟ್ರಂಪ್ ವಿರುದ್ಧ ಕೇಳಿ ಬಂದ ಅಧಿಕಾರ ದುರುಪಯೋಗ ಆರೋಪದಿಂದ ಮುಕ್ತಗೊಳಿಸಲು ಮತದಾನ ನಡೆಯಿತು. ಈ ವೇಳೆ ಟ್ರಂಪ್ ಪರವಾಗಿ 52 ಮತಗಳು ಬಿದ್ದರೆ, ಟ್ರಂಪ್ ವಿರುದ್ಧವಾಗಿ 48 ಮಂತಗಳು ಬಂದಿದ್ದವು. ಈ ಮೂಲಕ ಟ್ರಂಪ್ ವಾಗ್ದಂಡನೆಯಿಂದ ಮುಕ್ತಿ ಪಡೆದಿರು. ಈ ಮೂಲಕ ಅಮೆರಿಕಾದ ಇತಿಹಾಸದಲ್ಲಿಯೇ ವಾಗ್ದಂಡನೆಯಿಂದ ಪಾರಾದ ಮೂರನೇ ಅಧ್ಯಕ್ಷ ಇವರಾಗಿದ್ದಾರೆ. 

ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಎದುರಾಳಿಯಾಗಬಹುದಾದ ಜೋ ಬಿಡೆನ್ ಅವರ ವ್ಯಕ್ತಿತ್ವಕ್ಕೆ ಚ್ಯುತಿ ತರುವ ಮಾಹಿತಿಯನ್ನು ಬಹಿರಂಗಪಡಿಸುವಂತೆ ಟ್ರಂಪ್ ಅವರು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿತ್ತು. ಇದಕ್ಕಾಗಿ ಅಮೆರಿಕಾದಿಂದ ಉಕ್ರೇನ್ ಸೇನಾ ಕಾರ್ಯಾಚರಣೆಗಾಗಿ ಬಿಡುಗಡೆಯಾದ 400 ಮಿಲಿಯನ್ ಡಾಲರ್'ನ್ನು ಟ್ರಂಪ್ ತಡೆಹಿಡಿದಿದ್ದಾರೆಂದು ಹೇಳಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com