ಮತ್ತೆ ಬಾಗ್ದಾದ್‌ನ ಅಮೆರಿಕ ರಾಯಭಾರ ಕಚೇರಿ ಬಳಿ ರಾಕೆಟ್ ದಾಳಿ!

ಇರಾನ್ ಮತ್ತು ಅಮೆರಿಕದ ಸಂಘರ್ಷದ ಬೆನ್ನಲ್ಲೇ ಬಾಗ್ದಾದ್‌ನ ಅಮೆರಿಕ ರಾಯಭಾರ ಕಚೇರಿಯ ರಾಕೆಟ್ ದಾಳಿ ನಡೆದಿತ್ತು. ಇದೀಗ ಕೆಲ ತಿಂಗಳ ಬಳಿಕ ಮತ್ತೆ ಬಾಗ್ದಾದ್ ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಬಳಿ ಭಾನುವಾರ ಮುಂಜಾನೆ ರಾಕೆಟ್‌ಗಳು ಅಪ್ಪಳಿಸಿವೆ.
ಮತ್ತೆ ಬಾಗ್ದಾದ್‌ನ ಅಮೆರಿಕ ರಾಯಭಾರ ಕಚೇರಿ ಬಳಿ ರಾಕೆಟ್ ದಾಳಿ!

ಬಾಗ್ದಾದ್(ಇರಾನ್): ಇರಾನ್ ಮತ್ತು ಅಮೆರಿಕದ ಸಂಘರ್ಷದ ಬೆನ್ನಲ್ಲೇ ಬಾಗ್ದಾದ್‌ನ ಅಮೆರಿಕ ರಾಯಭಾರ ಕಚೇರಿಯ ರಾಕೆಟ್ ದಾಳಿ ನಡೆದಿತ್ತು. ಇದೀಗ ಕೆಲ ತಿಂಗಳ ಬಳಿಕ ಮತ್ತೆ ಬಾಗ್ದಾದ್ ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಬಳಿ ಭಾನುವಾರ ಮುಂಜಾನೆ ರಾಕೆಟ್‌ಗಳು ಅಪ್ಪಳಿಸಿವೆ.

ಆದರೆ , ಸಾವು- ನೋವುಗಳು ಮತ್ತು ಹಾನಿಯ ಬಗ್ಗೆ ತಕ್ಷಣದ ಮಾಹಿತಿ ಲಭ್ಯವಾಗಿಲ್ಲ ಎಂದೂ  ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇರಾನ್​​ ಸೇನಾ ಮುಖ್ಯಸ್ಥ ಖಾಸಿಂ ಸೊಲೈಮನಿಯನ್ನು ಅಮೆರಿಕ ಹತ್ಯೆ ಮಾಡಿದ ಬಳಿಕ ಎರಡು ರಾಷ್ಟ್ರಗಳ ನಡುವೆ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಇರಾನ್​ ಅಮೆರಿಕ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಬಾಗ್ದಾದ್​​​ನ  ಅಮೆರಿಕ ರಾಯಭಾರಿ ಕಚೇರಿಗಳನ್ನು ಗುರಿಯಾಗಿಸಿಕೊಂಡು ರಾಕೆಟ್​​ ದಾಳಿ ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com