ನಾನೇ ನಂಬರ್ ಒನ್,  ನನ್ನ ನಂತರ ಪ್ರಧಾನಿ ಮೋದಿ: ಡೊನಾಲ್ಡ್ ಟ್ರಂಪ್

ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 150 ಬಿಲಿಯನ್ ಜನರನ್ನು ಪ್ರತಿನಿಧಿಸುತ್ತಿದ್ದು ಅವರಿಗೆ ಕೆಲ ಅನುಕೂಲ ಪರಿಸ್ಥಿತಿ ಇದೆ. ಆದರೆ, ನಾನು ನಂಬರ್ ಒನ್ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್
ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 150 ಬಿಲಿಯನ್ ಜನರನ್ನು ಪ್ರತಿನಿಧಿಸುತ್ತಿದ್ದು ಅವರಿಗೆ ಕೆಲ ಅನುಕೂಲ ಪರಿಸ್ಥಿತಿ ಇದೆ. ಆದರೆ, ನಾನು ನಂಬರ್ ಒನ್ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ ‘ಫೇಸ್‌ಬುಕ್’ ಅನುಸರಿಸುವವರ ಸಂಖ್ಯೆಯನ್ನು ಪರಿಗಣಿಸಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ ಸುಮಾರು 130 ಕೋಟಿ ಜನಸಂಖ್ಯೆ ಹೊಂದಿದೆ. ಅಮೆರಿಕಾದ ಜನಸಂಖ್ಯೆ ಸುಮಾರು 32 ಕೋಟಿ 50 ಲಕ್ಷ. ಗುರುವಾರ ಪೇಸ್ ಬುಕ್ ಪುಟಗಳನ್ನು ಪರಿಶೀಲಿಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅನುಸರಿಸುತ್ತಿರುವವರ ಸಂಖ್ಯೆ 4 ಕೋಟಿ 50 ಲಕ್ಷ. ಟ್ರಂಪ್ ಅವರನ್ನು 2 ಕೋಟಿ 70 ಲಕ್ಷ ಅನುಸರಿಸುತ್ತಿದ್ದಾರೆ.

ಡೊನಾಲ್ಡ್ ಟ್ರಂಪ್ ದಂಪತಿ ಇದೇ  24  ಹಾಗೂ 25 ರಂದು ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಲಿದ್ದಾರೆ. ಈ ನಡುವೆ ಲಾಸ್ ವೇಗಾಸ್‌ನಲ್ಲಿ ನಡೆದ ಸಮಾರಂಭದಲ್ಲಿ ಡೊನಾಲ್ಡ್ ಟ್ರಂಪ್ ಗುರುವಾರ ಮಾತನಾಡಿ, ಫೇಸ್‌ಬುಕ್ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಇತ್ತೀಚಿಗೆ ತಮ್ಮನ್ನು ಭೇಟಿಯಾಗಿ ಫೇಸ್‌ಬುಕ್ ನಲ್ಲಿ ನಂಬರ್ ಒನ್ ನೀವೇ ಎಂದು ತಿಳಿಸಿದ್ದಾರೆ ಎಂದು ಟ್ರಂಪ್ ನುಡಿದರು. 

ನಾನು ಮುಂದಿನ ವಾರ ಭಾರತ  ಪ್ರವಾಸ  ಕೈಗೊಳ್ಳುತ್ತಿದ್ದೇನೆ. ನಾವು ಏನು ಮಾತನಾಡಲಿದ್ದೇವೆ  ಎಂಬುದು  ನಿಮಗೆ ತಿಳಿದಿದೆಯೇ? ಎಂದು ಸಭಿಕರನ್ನು ಪ್ರಶ್ನಿಸಿದ ಟ್ರಂಪ್, ಅವರು 150 ಬಿಲಿಯನ್ ಜನರನ್ನು ಹೊಂದಿದ್ದು, ಪ್ರಧಾನಿ ಮೋದಿ ಫೇಸ್‌ಬುಕ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ, ಸಂಖ್ಯೆ 2. ಊಹಿಸಿಕೊಳ್ಳಿ.. ನಿಮಗೆ ತಿಳಿದಿದೆಯೇ? ನಂಬರ್ ಒನ್ ಯಾರು ಎಂದು? ಟ್ರಂಪ್ ಎಂಬುದನ್ನು ನಂಬುತ್ತಿರಾ? ನಂಬರ್ ಒನ್ ಎಂಬುದು ನನಗೆ ತಿಳಿದು ಬಂದಿದೆ ಟ್ರಂಪ್ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ "ಫೇಸ್‌ಬುಕ್" ನಲ್ಲಿ ನಾನು ನಂಬರ್ ಒನ್ ಸ್ಥಾನದಲ್ಲಿರುವ ಕಾರಣ ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಅಭಿನಂದಿಸಿದ್ದಾರೆ. ಜುಕರ್‌ಬರ್ಗ್ ಮೂರು ವಾರಗಳ ಹಿಂದೆ ತಮ್ಮ ಬಳಿ ಬಂದು 'ಅಭಿನಂದನೆಗಳು' ಎಂದರು. ನಾನು ಅಭಿನಂದನೆ ಏಕೆ? ಎಂದು ಕೇಳಿದೆ. ನೀವು ಫೇಸ್‌ಬುಕ್‌ನಲ್ಲಿ ಪ್ರಥಮ ಸ್ಥಾನದಲ್ಲಿದ್ದೀರಿ ಎಂದು ಅವರು ಹೇಳಿದರು. ನಾನು ’ಸರಿ’ ಎಂದೆ. ಟ್ವೀಟರ್ ನಲ್ಲಿ ಕೂಡಾ ನಾನು ನಂಬರ್ ಒನ್ ಎಂದು ಟ್ರಂಪ್ ಹೇಳಿದರು ಟ್ರಂಪ್ ಅವರ ಮಾತುಗಳನ್ನು ಕೇಳಿಸಭೆಯಲ್ಲಿದ್ದವರು ನಗೆಗಡಲಲ್ಲಿ ಮುಳುಗಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com