ಕೋರೋನಾವೈರಸ್: ಜಪಾನ್ ಹಡಗಿನಲ್ಲಿ 4 ಭಾರತೀಯರಲ್ಲಿ ಸೋಂಕು ಪತ್ತೆ, ಸೋಂಕಿತ ಭಾರತೀಯರ ಸಂಖ್ಯೆ 12ಕ್ಕೆ ಏರಿಕೆ

ಕಾರವಾರ ಮೂಲಕ ಅಭಿಷೇಕ್ ಸೇರಿದಂತೆ ಒಟ್ಟು 138 ಭಾರತೀಯರು ಇರುವ ಡೈಮಂಡ್ ಪ್ರಿನ್ಸೆಸ್ ರಡಗಿನಲ್ಲಿ ಮತ್ತೆ ನಾಲ್ವರು ಭಾರತೀಯ ಸಿಬ್ಬಂದಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದಾಗಿ ವರದಿಗಳು ತಿಳಿಸಿವೆ. ಈ ಮೂಲಕ ಹಡಗಿನಲ್ಲಿ ಒಟ್ಟು 12 ಮಂದಿ ಭಾರತೀಯರಲ್ಲಿ ವೈರಸ್ ಹಬ್ಬಿದಂತಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಟೋಕಿಯೋ: ಕಾರವಾರ ಮೂಲಕ ಅಭಿಷೇಕ್ ಸೇರಿದಂತೆ ಒಟ್ಟು 138 ಭಾರತೀಯರು ಇರುವ ಡೈಮಂಡ್ ಪ್ರಿನ್ಸೆಸ್ ರಡಗಿನಲ್ಲಿ ಮತ್ತೆ ನಾಲ್ವರು ಭಾರತೀಯ ಸಿಬ್ಬಂದಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದಾಗಿ ವರದಿಗಳು ತಿಳಿಸಿವೆ. ಈ ಮೂಲಕ ಹಡಗಿನಲ್ಲಿ ಒಟ್ಟು 12 ಮಂದಿ ಭಾರತೀಯರಲ್ಲಿ ವೈರಸ್ ಹಬ್ಬಿದಂತಾಗಿದೆ. 

ಜಪಾನ್ ನ ಯೊಕೋಹಾಮಾದಲ್ಲಿ ಲಂಗರು ಹಾಕಿರುವ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಯತ್ನಗಳು ನಡೆದಿರುವಾಗಲೇ, ಮತ್ತೆ ನಾಲ್ವರಲ್ಲಿ ಈ ಸೋಂಕು ಪತ್ತೆಯಾಗಿದೆ. ಮತ್ತೊಂದೆಡೆ, ಕೊರೋನಾಕ್ಕೆ ತುತ್ತಾಗದಿರುವ ಭಾರತೀಯರನ್ನು ವಾಪಸ್ ಕರೆತರುವ ಕಾರ್ಯದಲ್ಲಿ ಭಾರತ ಸರ್ಕಾರ ಸಕ್ರಿತವಾಗಿದ್ದು, ಈ ಪ್ರಕ್ರಿಯೆಗಳು ಫೆ.25 ಅಥವಾ 26ರಂದು ಪೂರ್ಣವಾಗುವ ಸಾಧ್ಯತೆಗಳಿವೆ ಎಂದು ಜಪಾನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮಾಹಿತಿ ನೀಡಿದೆ. 

ಇನ್ನು ಚೀನಾದಲ್ಲಿ ತನ್ನ ಮರಣ ಮೃದಂಗವನ್ನು ಮುಂದುವರೆಸಿರುವ ಮಹಾಮಾರಿ ಕೊರೋನಾ ವೈರಸ್ ಿದೀಗ ಚೀನಾದಲ್ಲಿ ಮತ್ತೋರ್ವ ವೈದ್ಯ ಸೇರಿ 97ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದುಕೊಂಡಿದೆ. ತನ್ಮೂಲರ ಕೊರೋನಾದಿಂದಾಗಿ ಸಾವನ್ನಪ್ಪಿರುವವರ ಸಂಖ್ಯೆ 2442ಕ್ಕೆ ಏರಿಕೆಯಾದರೆ, ವೈದ್ಯರ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಈ ಮಾರಣಾಂತಿಕ ಸೋಂಕಿನ ಕೇಂದ್ರವಾದ ವುಹಾನ್ ನಗರದಲ್ಲಿ ರೋಗಿಗಳ ಚಿಕಿತ್ಸಾ ಕಾರ್ಯದಲ್ಲಿ ತೊಡಗಿದ್ದ 29 ವರ್ಷದ ಮಹಿಳಾ ವೈದ್ಯೆ ಕ್ಸಿಯಾ ಸಿಸಿ ಎಂಬುವವರೇ ಸಾವನ್ನಪ್ಪಿದವರು ಎಂದು ತಿಳಿದುಬಂದಿದೆ. 

ಈ ನಡುವೆ ಜಪಾನ್ ತೀರದಲ್ಲಿ ನಿಂತಿರುವ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಮತ್ತೊಬ್ಬ ವ್ಯಕ್ತಿ ಕೊರೋನಾಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com