ಇರಾನ್ ಸೇನಾಧಿಕಾರಿಯ ಹತ್ಯೆಗೆ ಆದೇಶ ನೀಡಿದ್ದು ಅಧ್ಯಕ್ಷ ಡೊನಾಲ್ಡ್ ಟ್ರಂಪ್: ಅಮೆರಿಕಾ ರಕ್ಷಣಾ ಮೂಲಗಳು 

ಇರಾನ್ ನ ಕ್ರಾಂತಿಕಾರಿ ಸೇನಾಪಡೆಯ ಮುಖ್ಯಸ್ಥ ಖ್ಯಾಸೆಮ್ ಸೊಲೈಮಾನಿಯನ್ನು ಹತ್ಯೆ ಮಾಡಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದರು ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಇರಾನ್ ನ ಕ್ರಾಂತಿಕಾರಿ ಸೇನಾಪಡೆಯ ಮುಖ್ಯಸ್ಥ ಖ್ಯಾಸೆಮ್ ಸೊಲೈಮಾನಿಯನ್ನು ಹತ್ಯೆ ಮಾಡಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದರು ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.


ಇರಾಕ್ ನಲ್ಲಿರುವ ಅಮೆರಿಕಾದ ರಾಯಭಾರಿಗಳು ಮತ್ತು ಸೇವಾ ಸದಸ್ಯರ ಮೇಲೆ ದಾಳಿ ನಡೆಸಲು ಜನರಲ್ ಸೊಲೈಮಾನಿ ಯೋಜನೆ ರೂಪಿಸುತ್ತಿದ್ದರು. ಜನರಲ್ ಸೊಲೈಮಾನಿ ಮತ್ತು ಅವರ ಸೇನಾ ಪಡೆ ನೂರಾರು ಅಮೆರಿಕನ್ನರು ಮತ್ತು ಸಮ್ಮಿಶ್ರ ಸೇವಾ ಸದಸ್ಯರ ಸಾವು ನೋವುಗಳಿಗೆ ಕಾರಣರಾಗಿದ್ದರು. ಈ ಹಿನ್ನಲೆಯಲ್ಲಿ ತಮ್ಮ ದೇಶದ ರಕ್ಷಣಾ ಪಡೆ ನಾಯಕರು ಮತ್ತು ನಾಗರಿಕರ ರಕ್ಷಣೆಗೆ ಸೊಲೈಮಾನಿ ಹತ್ಯೆಗೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಆದೇಶ ಹೊರಡಿಸಿದ್ದರು ಎಂದು ರಕ್ಷಣಾ ಇಲಾಖೆ ತಿಳಿಸಿದೆ.


ಜನರಲ್ ಸೊಲೈಮಾನ್ ಹತ್ಯೆ ಬಳಿಕ ಅಮೆರಿಕಾ ಧ್ವಜದ ಚಿತ್ರವನ್ನು ಹಾಕಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.


ಅಮೆರಿಕಾದ ವಾಯುದಾಳಿ ಇಂದು ನಸುಕಿನ ಜಾವ ಇರಾಕ್ ರಾಜಧಾನಿ ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿ ಇರಾಕ್ ನ ಶಕ್ತಿಶಾಲಿ ಹ್ಯಾಶೆಡ್-ಅಲ್-ಶಾಬಿ ಅರೆ ಸೇನಾ ಪಡೆಯ ಉಪ ಮುಖ್ಯಸ್ಥನನ್ನು ಸಹ ಕೊಂದು ಹಾಕಿದೆ. 


ಕೆಲ ದಿನಗಳ ಹಿಂದೆ ಅಮೆರಿಕಾದ ಮೇಲೆ ನಡೆಸಲಾದ ರಾಕೆಟ್ ದಾಳಿಯಿಂದ ಅಮೆರಿಕಾದ ಕಾಂಟ್ರಾಕ್ಟರ್ ಹತ್ಯೆಯಾದ ಹಿನ್ನಲೆಯಲ್ಲಿ ಅದಕ್ಕೆ ಪ್ರತೀಕಾರವಾಗಿ ಅಮೆರಿಕಾ ಇಂದಿನ ವಾಯುದಾಳಿ ನಡೆಸಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com