ಕಮಾಂಡರ್ ಹತ್ಯೆ; ವಿಡಿಯೋ ಪೋಸ್ಟ್ ಮಾಡಿದ ಅಮೆರಿಕಾ

ಇರಾನ್ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸೊಲೆಮನ್ ಅಮೆರಿಕಾ ಪಡೆಗಳು ನಡೆಸಿ ವೈಮಾನಿಕ ದಾಳಿಯಲ್ಲಿ ಇರಾನ್ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸೊಲೆಮನ್ ಸಾವನ್ನಪ್ಪಿದ್ದಾರೆ. ಖಾಸಿಂ ಹತ್ಯೆಯೊಂದಿಗೆ ಇರಾಕ್ ನಲ್ಲಿ ಸಂಭ್ರಮ ಆಚರಿಸಿಕೊಳ್ಳಲಾಗುತ್ತಿದೆ. 

Published: 03rd January 2020 08:25 PM  |   Last Updated: 03rd January 2020 08:25 PM   |  A+A-


US Posts Video of Iraqis Dancing in Streets

ಇರಾಕ್ ನಲ್ಲಿ ಸಂಭ್ರಮ

Posted By : Srinivasamurthy VN
Source : UNI

ವಾಷಿಂಗ್ಟನ್: ಇರಾನ್ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸೊಲೆಮನ್ ಅಮೆರಿಕಾ ಪಡೆಗಳು ನಡೆಸಿ ವೈಮಾನಿಕ ದಾಳಿಯಲ್ಲಿ ಇರಾನ್ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸೊಲೆಮನ್ ಸಾವನ್ನಪ್ಪಿದ್ದಾರೆ. ಖಾಸಿಂ ಹತ್ಯೆಯೊಂದಿಗೆ ಇರಾಕ್ ನಲ್ಲಿ ಸಂಭ್ರಮ ಆಚರಿಸಿಕೊಳ್ಳಲಾಗುತ್ತಿದೆ. 

ರಾಷ್ಟ್ರ ದ್ವಜವನ್ನು ಪ್ರದರ್ಶಿಸುತ್ತ ಇರಾಕ್ ಬೀದಿಗಳಲ್ಲಿ ಜನರು ಮೆರವಣಿಗೆ ನಡೆಸಿದ್ದಾರೆ ಎಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. 

ಕಾಸಿಮ್ ಹತ್ಯೆಯನ್ನು ಇರಾಕಿಗಳು ಸಂಭ್ರಮಿಸುತ್ತಿದ್ದಾರೆ. ಇರಾಕಿಗಳು ಸ್ವಾತಂತ್ರ್ಯಕ್ಕಾಗಿ ಬೀದಿಗಳಲ್ಲಿ ನರ್ತಿಸುತ್ತಿದ್ದಾರೆ. ಈ ಸಡಗರಗಳಿಗೆ ಜನರಲ್ ಸೋಲೆಮನ್ ಇನ್ನಿಲ್ಲ ಎಂಬುದೇ ಕಾರಣ ಎಂದು ಹೇಳಿದ್ದಾರೆ. ವೀಡಿಯೊದಲ್ಲಿ ಇರಾಕಿಗಳು ರಾಷ್ಟ್ರ ಧ್ವಜ ಹಾಗೂ ಬ್ಯಾನರ್‌ಗಳೊಂದಿಗೆ ರಸ್ತೆಯಲ್ಲಿ ಮೆರವಣಿಗೆ ನಡೆಸುತ್ತಿರುವ ದೃಶ್ಯಗಳು ಇವೆ.

ಇಂದು ಬೆಳಗ್ಗೆ ಅಮೆರಿಕಾ ಸೇನಾ ಪಡೆ ನಡೆಸಿದ ವಾಯುದಾಳಿಯಲ್ಲಿ ಇರಾನಿನ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಖಾಸೆಮ್ ಸೊಲೈಮಾನಿ ಮೃತಪಟ್ಟಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ದೇಶನದ ಮೇರೆಗೆ ಅಮೆರಿಕದ ಸಶಸ್ತ್ರ ಪಡೆಗಳು ಖಾಸೆಮ್ ಸೊಲೈಮಾನಿ ಅವರನ್ನು ಕೊಲ್ಲಲು ಬಾಗ್ದಾದ್‌ನಲ್ಲಿ ಶುಕ್ರವಾರ ವೈಮಾನಿ ದಾಳಿ ನಡೆಸಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp