ಕ್ಷಿಪಣಿ ದಾಳಿಯಲ್ಲಿ 80 ಅಮೆರಿಕ ಉಗ್ರರ ಸಾವು, ಟ್ರಂಪ್ ಸರ್ಕಾರಕ್ಕೆ ಕಪಾಳ ಮೋಕ್ಷ; ಇರಾನ್ ಸರ್ವೋಚ್ಛ ನಾಯಕ ಖಮೇನಿ

ಇರಾಕ್ ನಲ್ಲಿದ್ದ ಅಮೆರಿಕಾ ವಾಯುನೆಲೆ ಮೇಲೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ 80 ಮಂದಿ ಸಾವಿಗೀಡಾಗಿದ್ದಾರೆಂದು ಇರಾನ್ ತನ್ನ ವರದಿಯಲ್ಲಿ ಹೇಳಿಕೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಗ್ದಾದ್: ಇರಾಕ್ ನಲ್ಲಿದ್ದ ಅಮೆರಿಕಾ ವಾಯುನೆಲೆ ಮೇಲೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ 80 ಮಂದಿ ಸಾವಿಗೀಡಾಗಿದ್ದಾರೆಂದು ಇರಾನ್ ತನ್ನ ವರದಿಯಲ್ಲಿ ಹೇಳಿಕೊಂಡಿದೆ. 

ತನ್ನ ಸೇನಾಧಿಕಾರಿ ಸೊಲೈಮಾನಿ ಹತ್ಯೆಯ ಪ್ರತೀಕಾರವಾಗಿ ಇಂದು ಬೆಳಿಗ್ಗೆ ಇರಾನ್ ಅಮೆರಿಕಾದ ವಾಯುನೆಲೆ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ದಾಳಿ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಟ್ರಂಪ್, ಆಲ್ ಇಸ್ ವೆಲ್, ಇರಾಕ್ ನಲ್ಲಿರುವ ಅಮೆರಿಕಾದ ಎರಡು ಸೇನಾ ನೆಲೆಗಲ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿದೆ. ನಾವು ಇದೀಗ ಸಾವು ನೋವು ಹಾಗೂ ಹಾನಿಯ ಲೆಕ್ಕಾಚಾರ ಹಾಕುತ್ತಿದ್ದೇವೆ. ಈವರೆಗೂ ಎಲ್ಲವೂ ನಿಯಂತ್ರಣದಲ್ಲಿದೆ. ನಾವು ವಿಶ್ವದಲ್ಲಿಯೇ ಈ ವರೆಗಿನ ಅತ್ಯಂತ ಶಕ್ತಿಯುತ ಹಾಗೂ ಶಸ್ತ್ರಾಸ್ತ್ರ ಸಜ್ಜಿತ ರಾಷ್ಟ್ರ. ದಾಳಿ ಕುರಿತು ನಾಲೆ ಬಳಿಗ್ಗೆ ಮಾಹಿತಿ ನೀಡುತ್ತೇನೆಂದು ಹೇಳಿದ್ದರು. 

ಈ ಹಿನ್ನೆಲೆಯಲ್ಲಿ ದಾಳಿ ಕುರಿತು ವರದಿ ಮಾಡಿರುವ ಇರಾನ್ ಮಾಧ್ಯಮಗಳು, ಕ್ಷಿಪಣಿ ದಾಳಿಯಲ್ಲಿ 80 ಮಂದಿ ಅಮೆರಿಕಾದ ಭಯೋತ್ಪಾದಕರು ಹತರಾಗಿದ್ದಾರೆಂದು ತಿಳಿಸಿದೆ. ಅಲ್ಲದೆ, ಪ್ರತೀಕಾರಕ್ಕೆ ಅಮೆರಿಕಾ ಮುಂದಾಗಿದ್ದೇ ಆದರೆ, 100 ಸ್ಥಳಗಳಿಗೆ ಗುರಿ ಇಡಲು ತಯಾರಿ ನಡೆಸಲಾಗಿದೆ ಎಂದು ತಿಳಿಸಿದೆ.

ಇನ್ನು ಟ್ರಂಪ್ ಅವರ ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಿರುವ ಇರಾನ್, ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಟ್ರಂಪ್ ಯತ್ನಿಸುತ್ತಿದ್ದಾರೆಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com