ಕಾಶ್ಮೀರ ವಿವಾದ ಬಗೆಹರಿಸದೆ ಭಾರತ ಜೊತೆಗೆ ಶಾಂತಿ ಮಾತುಕತೆಗೆ ಖಂಡಿತಾ ಸಿದ್ದವಿಲ್ಲ: ಪಾಕಿಸ್ತಾನ ಪುನರುಚ್ಛಾರ  

ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸದ ಹೊರತು ಶಾಂತಿಮಾತುಕತೆ ವಿಚಾರದಲ್ಲಿ ಭಾರತದೊಂದಿಗೆ ಯಾವುದೇ ಹೊಂದಾಣಿಕೆಗೆ ಸಿದ್ದವಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಪುನರುಚ್ಛರಿಸಿದ್ದಾರೆ.
ಶಾ ಮೊಹಮ್ಮದ್ ಖುರೇಷಿ
ಶಾ ಮೊಹಮ್ಮದ್ ಖುರೇಷಿ

ವಾಷಿಂಗ್ಟನ್; ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸದ ಹೊರತು ಶಾಂತಿಮಾತುಕತೆ ವಿಚಾರದಲ್ಲಿ ಭಾರತದೊಂದಿಗೆ ಯಾವುದೇ ಹೊಂದಾಣಿಕೆಗೆ ಸಿದ್ದವಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಪುನರುಚ್ಛರಿಸಿದ್ದಾರೆ.


ಅವರು ವಾಷಿಂಗ್ಟನ್ ನಲ್ಲಿ ನಿನ್ನೆ ಕಾರ್ಯತಂತ್ರ ಮತ್ತು ಅಂತಾರಾಷ್ಟ್ರೀಯ ಅಧ್ಯಯನಗಳ ಚಿಂತಕರ ಸಮಾವೇಶವನ್ನುದ್ದೇಶಿಸಿ ಮಾತನಾಡಿ, ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯೆ ಪ್ರವೇಶಿಸಬೇಕೆಂದು ಮತ್ತೊಮ್ಮೆ ಒತ್ತಾಯಿಸಿದ್ದಾರೆ.


ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತೆಗೆದುಹಾಕಿ ಅವುಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ ನಂತರ ಭಾರತ ಮತ್ತು ಪಾಕಿಸ್ತಾನ ಸಂಬಂಧ ಮತ್ತಷ್ಟು ಹದಗೆಟ್ಟಿದ್ದು ಇದಕ್ಕೆ ಪಾಕಿಸ್ತಾನ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಲೇ ಬಂದಿದೆ.ತನಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧವಾಗಿ ಬೇರೆ ದೇಶಗಳು ಬೆಂಬಲ ನೀಡಬೇಕೆಂದು ಪಾಕಿಸ್ತಾನ ಕೇಳುತ್ತಲೇ ಬಂದಿದೆ.


ನೆರೆಯ ದೇಶಗಳಲ್ಲಿ ಶಾಂತಿ ನೆಲೆಸಬೇಕೆಂದು ನಮ್ಮ ಸರ್ಕಾರ ಬಯಸುತ್ತದೆ. ಆರ್ಥಿಕ ಸುಧಾರಣೆಗೆ ಮತ್ತು ಇತರ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ನಮ್ಮ ದೇಶದ ಅಜೆಂಡಾವನ್ನು ಸಾಧಿಸುವತ್ತ ಗಮನ ಹರಿಸಲು ನಮಗೆ ಶಾಂತಿ ಬೇಕು. ಹಾಗೆಂದು ಭಾರತದೊಂದಿಗೆ ಶಾಂತಿಮಾತುಕತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದು ನಮ್ಮ ಘನತೆ, ಗೌರವಕ್ಕೆ ತಕ್ಕುದಾದುದಲ್ಲ, ಕಾಶ್ಮೀರ ಸಮಸ್ಯೆಯನ್ನು ಭಾರತ ಬಗೆಹರಿಸದಿದ್ದರೆ ಶಾಂತಿ ಮಾತುಕತೆಗೆ ನಾವು ಖಂಡಿತಾ ಸಿದ್ದವಿಲ್ಲ ಎಂದಿದ್ದಾರೆ.


ಬಡತನ ಮತ್ತು ಹಸಿವು ವಿರುದ್ಧ ಒಗ್ಗಟ್ಟಿನಿಂದ ಕೆಲಸ ಮಾಡುವುದರ ಬದಲು ಆರ್ ಎಸ್ಎಸ್ ಪ್ರೇರಿತ ಭಾರತದ ಬಿಜೆಪಿ ಸರ್ಕಾರ ಹಿಂದೂ ರಾಷ್ಟ್ರ ಮಾಡುವುದರತ್ತ ಗಮನ ಹರಿಸಿದೆ. ಹಿಂದುತ್ವ ಮತ್ತು ಅಖಂಡ ಭಾರತ ಮಾಡುವ ಹಪಾಹಪಿಯಿಂದ ಭಾರತೀಯರು ನಲುಗಿ ಹೋಗುತ್ತಿದ್ದಾರೆ ಎಂದು ಕೂಡ ಖುರೇಷಿ ಆರೋಪಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com