ಕರೋನಾ ವೈರಸ್: ವುಹಾನ್ ನಿಂದ ಭಾರತೀಯರ ಸ್ಥಳಾಂತರಕ್ಕೆ ಹೊರಟ ಏರ್ ಇಂಡಿಯಾ ಬಿ 747 ವಿಮಾನ

ಕರೋನಾ ವೈರಸ್ ಪೀಡಿತ ಚೀನಾದ ಹುಬೈ ಪ್ರಾಂತ್ಯದಲ್ಲಿ ವಾಸಿಸುತ್ತಿರುವ 600 ಭಾರತೀಯರೊಂದಿಗೆ ಭಾರತ ಸರ್ಕಾರ ಸಂಪರ್ಕ ಸಾಧಿಸಿದ ಒಂದು ದಿನದ ನಂತರ ಅವರನ್ನು ಸ್ಥಳಾಂತರಿಸಲು ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ 423 ಆಸನಗಳ ಬಿ 747 ವಿಮಾನ ದೆಹಲಿ ವಿಮಾನ ನಿಲ್ದಾಣದಿಂದ ಶುಕ್ರವಾರ 1230 ಗಂಟೆಗೆ ಹೊರಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕರೋನಾ ವೈರಸ್ ಪೀಡಿತ ಚೀನಾದ ಹುಬೈ ಪ್ರಾಂತ್ಯದಲ್ಲಿ ವಾಸಿಸುತ್ತಿರುವ 600 ಭಾರತೀಯರೊಂದಿಗೆ ಭಾರತ ಸರ್ಕಾರ ಸಂಪರ್ಕ ಸಾಧಿಸಿದ ಒಂದು ದಿನದ ನಂತರ ಅವರನ್ನು ಸ್ಥಳಾಂತರಿಸಲು ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ 423 ಆಸನಗಳ ಬಿ 747 ವಿಮಾನ ದೆಹಲಿ ವಿಮಾನ ನಿಲ್ದಾಣದಿಂದ ಶುಕ್ರವಾರ 1230 ಗಂಟೆಗೆ ಹೊರಟಿದೆ.

ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಮತ್ತೊಮ್ಮೆ ರಕ್ಷಣೆಗೆ ಧಾವಿಸಿದೆ. ಈ ಬಾರಿ ಕರೋನಾ ವೈರಸ್ ಪೀಡಿತ ವುಹಾನ್ ನಿಂದ ಭಾರತೀಯರನ್ನು ಸ್ಥಳಾಂತರಿಸಲು ದೆಹಲಿ ಮತ್ತು ವುಹಾನ್ ನಡುವೆ ಜಂಬೊ 747 ವಿಮಾನ ಕಾರ್ಯಾಚರಣೆ ಇಂದು ಪ್ರಾರಂಭವಾಗುತ್ತಿದೆ ಎಂದು ಏರ್ ಇಂಡಿಯಾ ವಕ್ತಾರ ಅಶ್ವನಿ ಲೋಹಾನಿ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಮಾಸ್ಕ್, ಗ್ಲೌಸ್​, ಔಷಧಿಗಳನ್ನು ವಿಮಾನದ ಪ್ರತಿ ಆಸನದಲ್ಲೂ ಇರಿಸಲಾಗಿದ್ದು, ಇಬ್ಬರು ವಿಶೇಷ ವೈದ್ಯರನ್ನು ಸಹ ಜತೆಯಲ್ಲಿ ಕಳುಹಿಸಿಕೊಡಲಾಗುತ್ತಿದೆ.

ವುಹಾನ್​ನಲ್ಲಿ ವಿಮಾನಕ್ಕೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಾಗ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಗುವುದು. ಒಂದು ವೇಳೆ ಯಾವುದೇ ವ್ಯಕ್ತಿಯಲ್ಲಿ ಕೊರೊನಾ ವೈರಸ್​ ಕಂಡುಬಂದಲ್ಲಿ ಅಂತಹ ವ್ಯಕ್ತಿಯನ್ನು ವಿಮಾನದೊಳಗೆ ಬಿಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಚೀನಾದಲ್ಲಿ ಕೊರೊನಾ ವೈರಸ್​ನಿಂದಾಗಿ ಈಗಾಗಲೇ 200ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ. 9,000ಕ್ಕೂ ಹೆಚ್ಚಿನ ಜನರಲ್ಲಿ ವೈರಸ್​ ಕಂಡುಬಂದಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ. 

ಒಟ್ಟಾರೆಯಾಗಿ 15 ದೇಶಗಳಲ್ಲಿ ಕೊರೊನಾ ವೈರಸ್​ ಪತ್ತೆಯಾಗಿರುವುದು ದಾಖಲಾಗಿದೆ. ನಿನ್ನೆ ಸಂಜೆ ಕೇರಳದಲ್ಲಿ ದೇಶದ ಮೊದಲ ಕೊರೊನಾ ಪ್ರಕರಣ ಬೆಳಕಿಗೆ ಬಂದಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com