ಚೀನಾಗೆ ಗುದ್ದು: ಜೂನ್ 16ರಿಂದ ಚೀನಾ ವಿಮಾನಗಳ ಹಾರಾಟ ರದ್ದುಪಡಿಸಿದ ಅಮೆರಿಕಾ!

ಮಹಾಮಾರಿ ಕೊರೋನಾ ವೈರಸ್ ಹಾವಳಿ ಅಮೆರಿಕದಲ್ಲಿ ಹೆಚ್ಚಾಗಿರುವುದರಿಂದ ಮುನಿಸಿಕೊಂಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಚೀನಾಗೆ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದಾರೆ. 
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಮಹಾಮಾರಿ ಕೊರೋನಾ ವೈರಸ್ ಹಾವಳಿ ಅಮೆರಿಕದಲ್ಲಿ ಹೆಚ್ಚಾಗಿರುವುದರಿಂದ ಮುನಿಸಿಕೊಂಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಚೀನಾಗೆ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದಾರೆ. 

ಜೂನ್ 16ರಿಂದ ಚೀನಾ ವಿಮಾನಗಳ ಹಾರಾಟವನ್ನು ಅಮೆರಿಕ ರದ್ದುಪಡಿಸಿದೆ. ಇದರೊಂದಿಗೆ ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಪ್ರಯಾಣ ಕ್ಷೇತ್ರದಲ್ಲಿ ಬಿಕ್ಕಟ್ಟು ಉದ್ಭವಿಸಿದೆ.

ಅಮೆರಿಕಾದ ಸಾರಿಗೆ ಇಲಾಖೆಯೂ ಜೂನ್ 16ರಿಂದ ಚೀನಾದ 4 ವಿಮಾನಯಾನ ಕಂಪನಿಗಳ ಎಲ್ಲಾ ಪ್ರಯಾಣಿಕ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿರುವುದಾಗಿ ತಿಳಿಸಿದೆ. 

ಅಮೆರಿಕಾ ವಿಮಾನಗಳ ಹಾರಾಟಕ್ಕೆ ಚೀನಾ ಅನುಮತಿ ನಿರಾಕರಿಸಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಈ ಆದೇಶವನ್ನು ಹೊರಡಿಸಿದೆ. 

ಕೊರೋನಾ ಮಹಾಮಾರಿಯ ಆರ್ಭಟ ಅಮೆರಿಕದಲ್ಲಿ ಸ್ವಲ್ಪ ತಣ್ಣಗಾಗಿದ್ದರಿಂದ ಚೀನಾದಿಂದ ತನ್ನ ದೇಶಕ್ಕೆ ವಿಮಾನ ಸಂಚಾರ ಆರಂಭಿಸಲು ಅಮೆರಿಕಾ ಮುಂದಾಗಿತ್ತು. ಆದರೆ ಅಮೆರಿಕಾದ ಯುನೈಟೆಡ್ ಏರ್ ಲೈನ್ಸ್ ಹಾಗೂ ಡೆಲ್ಟಾ ಏರ್ ಲೈನ್ಸ್ ಸಂಚಾರಕ್ಕೆ ಚೀನಾ ಅನುಮತಿ ನಿರಾಕರಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com