ಜಾರ್ಜ್ ಫ್ಲಾಯ್ಡ್ ಹತ್ಯೆ ಬೆನ್ನಲ್ಲೇ ಅಮೆರಿಕ ಪೊಲೀಸರಿಂದ ಮತ್ತೋರ್ವ ಕಪ್ಪು ವರ್ಣೀಯನ ಸಾವು, ಮತ್ತೆ ಭುಗಿಲೆದ್ದ ಆಕ್ರೋಶ

ಆಫ್ರೋ–ಅಮೆರಿಕನ್‌ ಪ್ರಜೆ ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಮತ್ತು ಪ್ರತಿಭಟನೆ ಹಸಿರಾಗಿರುವಂತೆಯೇ ಅತ್ತ ಅಮೆರಿಕದಲ್ಲಿ ಮತ್ತೋರ್ವ ಕಪ್ಪು ವರ್ಣೀಯ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.
ಅಮರಿಕನ್ನರ ಪ್ರತಿಭಟನೆ
ಅಮರಿಕನ್ನರ ಪ್ರತಿಭಟನೆ

ಅಟ್ಲಾಂಟಾ: ಆಫ್ರೋ–ಅಮೆರಿಕನ್‌ ಪ್ರಜೆ ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಮತ್ತು ಪ್ರತಿಭಟನೆ ಹಸಿರಾಗಿರುವಂತೆಯೇ ಅತ್ತ ಅಮೆರಿಕದಲ್ಲಿ ಮತ್ತೋರ್ವ ಕಪ್ಪು ವರ್ಣೀಯ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

ಹೌದು.. ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಸಂಬಂಧ ಅಮೆರಿಕಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಹೊತ್ತಿನಲ್ಲೇ, ಮತ್ತೊಬ್ಬ ಕಪ್ಪು ವರ್ಣೀಯನನ್ನು ಅಟ್ಲಾಂಟಾದಲ್ಲಿ ಪೊಲೀಸರು ಆಕಸ್ಮಿಕವಾಗಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ 27 ವರ್ಷದ ರೇಶರ್ಡ್‌ ಬ್ರೂಕ್ಸ್‌ ಎಂಬಾತ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.  ಈ ಘಟನೆ ಖಂಡಿಸಿ ಅಟ್ಲಾಂಟಾದಲ್ಲಿ ಭಾರಿ ಪ್ರತಿಭಟನೆ ನಡೆದಿದೆ. ಬ್ರೂಕ್ಸ್‌ ಹತ್ಯೆ ನಡೆದ ವೆಂಡಿ ರೆಸ್ಟೋರೆಂಟ್‌ಗೆ ಪ್ರತಿಭಟನಕಾರರು  ರಾತ್ರಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ನಡೆದ ಕೆಲವೇ ಗಂಟೆಗಳ ನಂತರ, ಅಟ್ಲಾಂಟಾ ಪೊಲೀಸ್‌ ಮುಖ್ಯಸ್ಥ ಎರಿಕಾ ಶೀಲ್ಡ್ಸ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅಟ್ಲಾಂಟಾ ಪೊಲೀಸ್ ಮೂಲಗಲ ಪ್ರಕಾರ ವೆಂಡಿ ರೆಸ್ಟೋರೆಂಟ್‌ನ ವಾಹನ ಪಾರ್ಕಿಂಗ್‌ ಸ್ಥಳದಲ್ಲಿರುವ ಕಾರೊಂದರಲ್ಲಿ ಯುವಕನೊಬ್ಬ ಮಲಗಿದ್ದು, ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಕೆಲವರು ಪೊಲೀಸರಿಗೆ ದೂರಿದ್ದಾರೆ. ಈ ವೇಳೆ ಸ್ಥಳಕ್ಕೆ ತೆರಳಿದ್ದ ಪೊಲೀಸರು, ಕಾರಿನಲ್ಲಿದ್ದ ಯುವಕ ಬ್ರೂಕ್ಸ್ ಮದ್ಯಪಾನ ಮಾಡಿರುವ ಶಂಕೆ ವ್ಯಕ್ತಪಡಿಸಿ, ಪರೀಕ್ಷೆಗೆ ಒಳಗಾಗುವಂತೆ‌ ಸೂಚನೆ ನೀಡಿದ್ದಾರೆ. ಈ ಪರೀಕ್ಷೆಗೆ ಒಳಪಡಲು ನಿರಾಕರಿಸಿದ ಬ್ರೂಕ್ಸ್‌, ಓಡಿ ಹೋಗಲು ಯತ್ನಿಸಿದ್ದಾನೆ. ಆತನನ್ನು ಹಿಡಿಯಲು ಪೊಲೀಸರು ಯತ್ನಿಸಿದಾಗ, ಅವರ ಕೈಯಲ್ಲಿದ್ದ ಟೇಸರ್‌ (ತಪ್ಪಿಸಿಕೊಂಡು ಹೋಗುವವರತ್ತ ವಿದ್ಯುತ್‌ ತರಂಗ ಹೊರಹೊಮ್ಮಿಸಿ, ಅವರು ಚಲಿಸದಂತೆ ಮಾಡಲು ಪೊಲೀಸರು ಉಪಯೋಗಿಸುವ ಸಾಧನ) ಕಿತ್ತುಕೊಂಡ ಬ್ರೂಕ್ಸ್‌, ಓಡಿ ಹೋಗುತ್ತಿದ್ದಾಗ ಪೊಲೀಸರು ಗುಂಡು ಹಾರಿಸಿದರು ಎಂದು ಜಾರ್ಜಿಯಾ ಬ್ಯುರೋ ಆಫ್‌ ಇನ್ವೆಸ್ಟಿಗೇಷನ್‌ (ಜಿಬಿಐ) ಅಧಿಕಾರಿಗಳು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com