ಕೊರೋನಾದಿಂದ ರಷ್ಯಾ ಅಧ್ಯಕ್ಷ ಪುಟಿನ್ ರಕ್ಷಣೆಗೆ ಡಿಸಿನ್ಫೆಕ್ಷನ್ ಸುರಂಗ ನಿರ್ಮಾಣ..!

ರಷ್ಯಾದಲ್ಲಿ ಕೊರೊನಾ ವೈರಸ್ ಭಯ ಭೀತಿ ಸೃಷ್ಟಿಸಿರುವ ಹಿನ್ನಲೆಯಲ್ಲಿ ದೇಶದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸೋಂಕು ತಗುಲದಂತೆ ಪ್ರತ್ಯೇಕ ಡಿಸ್ ಇನ್ ಫೆಕ್ಷನ್ ಸುರಂಗವೊಂದನ್ನು ವ್ಯವಸ್ಥೆ ಮಾಡಲಾಗಿದೆ ಎಂದು ರಷ್ಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಡಿಸಿನ್ಫೆಕ್ಷನ್ ಸುರಂಗ ನಿರ್ಮಾಣ
ಡಿಸಿನ್ಫೆಕ್ಷನ್ ಸುರಂಗ ನಿರ್ಮಾಣ

ಮಾಸ್ಕೋ: ರಷ್ಯಾದಲ್ಲಿ ಕೊರೊನಾ ವೈರಸ್ ಭಯ ಭೀತಿ ಸೃಷ್ಟಿಸಿರುವ ಹಿನ್ನಲೆಯಲ್ಲಿ ದೇಶದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸೋಂಕು ತಗುಲದಂತೆ ಪ್ರತ್ಯೇಕ ಡಿಸ್ ಇನ್ ಫೆಕ್ಷನ್ ಸುರಂಗವೊಂದನ್ನು ವ್ಯವಸ್ಥೆ ಮಾಡಲಾಗಿದೆ ಎಂದು ರಷ್ಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಷ್ಯಾ ಅಧ್ಯಕ್ಷರ ಭದ್ರತಾ ಅಧಿಕಾರಿಗಳು ಈ ರಕ್ಷಣಾ ಕ್ರಮ ಕೈಗೊಂಡಿದ್ದು, ಯಾರಾದರೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿವಾಸವಿರುವ ಕಟ್ಟಡ ಪ್ರವೇಶಿಸಬೇಕೆಂದರೆ ಡಿಸ್ ಇನ್ ಫೆಕ್ಷನ್ ಸುರಂಗ ಮಾರ್ಗದ ಮೂಲಕ ತೆರಳು ವ್ಯವಸ್ಥೆ ಮಾಡಿದ್ದಾರೆ. ಪೆನ್ಜಾ ನಗರಕ್ಕೆ ಸೇರಿದ ರಷ್ಯಾದ ಕಂಪನಿಯೊಂದು ಈ ಸುರಂಗ ನಿರ್ಮಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ರಷ್ಯಾದಲ್ಲಿ ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಈ ವರೆಗೂ ಆ ರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಅತೀ ಹೆಚ್ಚು ಸೋಂಕು ಹೊಂದಿರುವ ಟಾಪ್ 10 ರಾಷ್ಟ್ರಗಳಲ್ಲಿ ರಷ್ಯಾ 3ನೇ ಸ್ಥಾನವನ್ನು ಪಡೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com