ಹೆಚ್-1ಬಿ ಸೇರಿ ವಿದೇಶಿ ಉದ್ಯೋಗ ವೀಸಾಗಳ ರದ್ದು: ಟ್ರಂಪ್ ನಿರ್ಧಾರಕ್ಕೆ ಗೂಗಲ್ ಸಿಇಒ ಪಿಚೈ ಬೇಸರ

ಹೆಚ್-1ಬಿ ಸೇರಿದಂತೆ ವಿದೇಶಿ ಉದ್ಯೋಗ ವೀಸಾಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಕುರಿತು ಗೂಗಲ್ ಸಿಇಒ ಸುಂದರ್ ಪಿಚೈ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. 

Published: 23rd June 2020 11:14 AM  |   Last Updated: 23rd June 2020 11:22 AM   |  A+A-


Sundar Pichai

ಗೂಗಲ್ ಸಿಇಒ ಸುಂದರ್ ಪಿಚೈ

Posted By : Manjula VN
Source : Online Desk

ವಾಷಿಂಗ್ಟನ್: ಹೆಚ್-1ಬಿ ಸೇರಿದಂತೆ ವಿದೇಶಿ ಉದ್ಯೋಗ ವೀಸಾಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಕುರಿತು ಗೂಗಲ್ ಸಿಇಒ ಸುಂದರ್ ಪಿಚೈ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಹೊರದೇಶಗಳಿಂದ ಬಂದ ಉದ್ಯೋಗಿಗಳು ಅಮೆರಿಕಾದ ಆರ್ಥಿಕ ಯಶಸ್ಸಿಗೆ ಗಣನೀಯ ಕೊಡುಗೆಗಳನ್ನು ನೀಡಿದ್ದಾರೆ. ಇದರ ಜೊತೆಗೆ ಅಮೆರಿಕಾ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವನಾಯಕನಾಗಿ ಬೆಳೆಯಲು ಕೊಡುಗೆ ನೀಡಿದ್ದಾರೆ. 

ಗೂಗಲ್ ಕಂಪನಿ ಇಂದು ಈ ಸ್ಥಿತಿಯಲ್ಲಿರಲು ಅವರು ಕಾರಣ ಎಂದು ಹೇಳಕೊಂಡಿದ್ದಾರೆ. ಅಮೆರಿಕಾದ ಇಂದಿನ ಆದೇಶದಿಂದ ಬಹಳ ಬೇಸರವಾಗಿದೆ. ನಾವು ವಿದೇಶಗಳಿಂಗ ಆಗಮಿಸಿದವರ ಪರವಾಗಿ ನಿಲ್ಲಲಿದ್ದೇವೆ. ಈ ಕೆಲಸ ಎಲ್ಲರಿಗೂ ಉದ್ಯೋಗದ ಅವಕಾಶವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಲೀಡರ್'ಶಿಪ್ ಕಾನ್ಫರೆನ್ಸ್ ಆನ್ ಸಿವಿಲ್ ಆ್ಯಂಡ್ ಹ್ಯೂಮನ್ ರೈಟ್ಸ್ ಅಧ್ಯಕ್ಷ ಹಾಗೂ ಸಿಇಒ ವಿನಿತಾ ಗುಪ್ತಾ ಕೂಡಾ ಟ್ರಂಪ್ ಆಡಳಿತದ ಈ ಕ್ರಮಮವನ್ನು ಕಟುವಾಗಿ ಟೀಕಿಸಿದ್ದಾರೆ. 

Stay up to date on all the latest ಅಂತಾರಾಷ್ಟ್ರೀಯ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp