ಕೊರೋನಾ ಸಮಸ್ಯೆಯೇ ಮುಗಿದಿಲ್ಲ, ಚೀನಾದಲ್ಲಿ ಮತ್ತೊಂದು ಸಾಂಕ್ರಾಮಿಕ ಸಾಮರ್ಥ್ಯದ ಸ್ವೈನ್ ಫ್ಲೂ ಜಿ4 ವೈರಸ್ ಪತ್ತೆ!

ಜಗತ್ತಿನ 213 ರಾಷ್ಟ್ರಗಳಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟವೇ ಇನ್ನೂ ಕಡಿಮೆಯಾಗಿಲ್ಲ ಆದಾಗಲೇ ಕೋವಿಡ್-19 ವೈರಸ್ ತವರು ಚೀನಾದಲ್ಲಿ ಮತ್ತೊಂದು ವೈರಸ್ ಸಾಂಕ್ರಾಮಿಕ ಕಾಣಿಸಿಕೊಂಡಿದೆ.

Published: 30th June 2020 11:50 AM  |   Last Updated: 30th June 2020 12:40 PM   |  A+A-


G4-swine flu virus

ಸಂಗ್ರಹ ಚಿತ್ರ

Posted By : Srinivasamurthy VN
Source : AFP

ವಾಷಿಂಗ್ಟನ್: ಜಗತ್ತಿನ 213 ರಾಷ್ಟ್ರಗಳಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟವೇ ಇನ್ನೂ ಕಡಿಮೆಯಾಗಿಲ್ಲ ಆದಾಗಲೇ ಕೋವಿಡ್-19 ವೈರಸ್ ತವರು ಚೀನಾದಲ್ಲಿ ಮತ್ತೊಂದು ವೈರಸ್ ಸಾಂಕ್ರಾಮಿಕ ಕಾಣಿಸಿಕೊಂಡಿದೆ.

ಹೌದು... ಚೀನಾದಲ್ಲಿರುವ ಸಂಶೋಧಕರು ಚೀನಾದಲ್ಲಿ ಸಾಂಕ್ರಾಮಿಕವಾಗಿ ಹರಡಬಲ್ಲ ಸಾಮರ್ಥ್ಯವಿರುವ ಸ್ವೈನ್ ಫ್ಲೂ (ಹಂದಿಜ್ವರ)ದ ವೈರಸ್ ಅನ್ನು ಪತ್ತೆ ಮಾಡಿದ್ದಾರೆ. ಚೀನಾದಲ್ಲಿರುವ ಹಂದಿಗಳಲ್ಲಿ ಈ ವೈರಸ್ ಕಾಣಿಸಿಕೊಂಡಿದ್ದು, ಈ ವೈರಸ್ ಮನುಷ್ಯರಿಗೂ ಅಂಟಿಕೊಳ್ಳುವ ಸಾಮರ್ಥ್ಯವಿದ್ದು, ಮನುಷ್ಯರಿಂದ ಮನುಷ್ಯರಿಗೆ ಹರಡಿ ಸಾಂಕ್ರಾಮಿಕವಾಗುವ ಭೀತಿ ಇದೆ ಎಂದು  ಚೀನಿ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಚೀನಾದ ಕೆಲ ಪ್ರಾಂತ್ಯಗಳಲ್ಲಿರುವ ಹಂದಿಗಳು ಇನ್‌ಫ್ಲುಯೆಂಜಾದಿಂದ ಹೆಚ್ಚು ಹೆಚ್ಚು ಸೋಂಕಿಗೆ ಒಳಗಾಗುತ್ತಿವೆ, ಈ ಸೋಂಕು ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ. ಇದು ಸುಲಭದಲ್ಲಿ ಒಬ್ಬರಿಂದ ಒಬ್ಬರಿಗೆ ಹರಡಬಹುದಾಗಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಜಿ-4 ಎಂಬ ಹೆಸರಿನ ವೈರಸ್‌ ಇದಾಗಿದ್ದು,ಚೀನಾದ ಹಂದಿಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ವೈರಸ್‌ ಯುರೋಪಿಯನ್ ಮತ್ತು ಏಷ್ಯನ್ ಪಕ್ಷಿಗಳಲ್ಲಿಯೂ ತಗಲುವ ಸಾಧ್ಯತೆ ಇದೆ.

ಈ ಬಗ್ಗೆ  ಚೀನಾ ಅಗ್ರಿಕಲ್ಚರಲ್ ಯೂನಿವರ್ಸಿಟಿಯ (ಸಿಎಯು) ಲಿಯು ಜಿನ್ಹುವಾ ನೇತೃತ್ವದ ತಂಡವು ಚೀನಾದ 10 ಕಸಾಯಿಖಾನೆಗಳ 30 ಸಾವಿರಕ್ಕೂ ಅಧಿಕ ಹಂದಿಗಳ ಸ್ವ್ಯಾಬ್‌ಗಳ ಪರೀಕ್ಷೆ ಮಾಡಿದ್ದು, ಅವುಗಳ ಉಸಿರಾಟದ ತೊಂದರೆಯಿಂದ ಬಳಲುತ್ತಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ, ಇದರ ಅಧ್ಯಯನ ನಡೆಸಲಾಗಿತ್ತು. ಈದೀಗ ಈ ವೈರಸ್ ಕುರಿತಂತೆ ವಿಜ್ಞಾನಿಗಳು ಮಾಹಿತಿ ನೀಡಿದ್ದು, ಈ ವೈರಸ್ ನಿಯಂತ್ರಣಕ್ಕೆ ಈಗಾಗಲೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. 

ಇನ್ನು ಇದೇ ವೈರಸ್ ಕುರಿತಂತೆ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟವಾದ ಈ ಅಧ್ಯಯನವೂ ಕೂಡ ಜಿ 4 ಹೆಸರಿನ ವೈರಸ್‌ನ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದು, ಇದು 2009ರಲ್ಲಿ ವಿಶ್ವದೆಲ್ಲೆಡೆ ಬೆಚ್ಚಿ ಬೀಳಿಸಿದ್ದ ಎಚ್‌1ಎನ್‌1ನ ಇನ್ನೊಂದು ರೂಪಾಂತರ ಎಂದು ಉಲ್ಲೇಖಿಸಿದೆ. ಮನುಷ್ಯರಿಗೆ ಸೋಂಕು ತಗುಲಿಸಬಹುದಾದ ಎಲ್ಲಾ ಲಕ್ಷಣಗಳನ್ನೂ ಈ ವೈರಸ್ ಹೊಂದಿದೆ ಎಂದು ಹೇಳಿದೆ.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp