ಮುರಿದುಬಿದ್ದ ತಾಲಿಬಾನ್-ಅಮೆರಿಕಾ ಒಪ್ಪಂದ: ಮತ್ತೆ ಉಗ್ರರ ದಾಳಿ, 20 ಆಫ್ಘನ್ ಸೈನಿಕರ ಹತ್ಯೆ

18 ವರ್ಷಗಳ ರಕ್ತಸಿಕ್ತ ಅಧ್ಯಾಯ ಕೊನೆಗೊಳಿಸಲು ತಾಲಿಬಾನ್ ಉಗ್ರರೊಂದಿಗೆ ಅಮೆರಿಕ ಮಾಡಿಕೊಂಡ ಒಪ್ಪಂದ ಸಂಪೂರ್ಣವಾಗಿ ಮುರಿದು ಬಿದಿದ್ದು, ಆಫ್ಘಾನಿಸ್ತಾನ ಭದ್ರತಾಪಡೆಗಳ ವಿರುದ್ಧ ತಿರುಗಿಬಿದ್ದಿರುವ ತಾಲಿಬಾನ್ ಉಗ್ರರು 20 ಮಂದಿಯನ್ನು ಹತ್ಯೆ ಮಾಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬುಲ್: 18 ವರ್ಷಗಳ ರಕ್ತಸಿಕ್ತ ಅಧ್ಯಾಯ ಕೊನೆಗೊಳಿಸಲು ತಾಲಿಬಾನ್ ಉಗ್ರರೊಂದಿಗೆ ಅಮೆರಿಕ ಮಾಡಿಕೊಂಡ ಒಪ್ಪಂದ ಸಂಪೂರ್ಣವಾಗಿ ಮುರಿದು ಬಿದಿದ್ದು, ಆಫ್ಘಾನಿಸ್ತಾನ ಭದ್ರತಾಪಡೆಗಳ ವಿರುದ್ಧ ತಿರುಗಿಬಿದ್ದಿರುವ ತಾಲಿಬಾನ್ ಉಗ್ರರು 20 ಮಂದಿಯನ್ನು ಹತ್ಯೆ ಮಾಡಿದ್ದಾರೆ. 

ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ, ತಾಲಿಬಾನ್ ಉಪ ನಾಯಕ ಮುಲ್ಲಾ ಅಬ್ದುಲ್ಲಾ ಘನಿ ಜೊತೆಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದರು. 

ಈ ಮಾತುಕತೆ ವೇಳೆ ಆಫ್ಘಾನಿಸ್ತಾನದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಹಿಂಸಾತ್ಮಕ ಚಟುವಟಿಕೆ ಕಡಿಮೆ ಮಾಡಬೇಕು. ಅಲ್ಲದೆ, ಅಫ್ಘನ್ ಗುಂಪುಗಳ ಪ್ರತಿನಿಧಿಗಳ ಜೊತೆಗೆ ಮಾತುಕತೆ ನಡೆಸಿ ಎಂದು ಟ್ರಂಪ್ ವಿನಂತಿ ಮಾಡಿಕೊಂಡಿದ್ದಾರೆಂದು ಶ್ವೇತಭವನ ತಿಳಿಸಿದೆ. ಆದರೆ, ಈ ಮಾತುಕತೆ ನಡೆದ ಬೆನ್ನಲ್ಲೇ ತಾಲಿಬಾನ್ ಉಗ್ರರು ಆಫ್ಘನ್ ಸೇನಾ ನೆಲೆಗಳ ಮೇಲೆ ದಾಳಿ ಮಾಡಿ 20 ಮಂದಿ ಯೋಧರನ್ನು ಹತ್ಯೆ ಮಾಡಿದೆ. 

ಇಮಾಮ್ ಸಾಬೀಜ್ ಜಿಲ್ಲೆಯ ಕಂಡೂಝ್ ಎಂಬಲ್ಲಿ ಮಂಗಳವಾರ ರಾತ್ರಿ ಮೂರು ಸೇನಾ ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ತಾಲಿಬಾನ್ ಒಪ್ಪಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com