ಕೊರೋನಾ ವೈರಸ್ ಹರಡಿದ ಚೀನಾ ವಿರುದ್ಧ 20 ಟ್ರಿಲಿಯನ್ ಡಾಲರ್ ಮೊಕದ್ದಮೆ ದಾಖಲಿಸಿದ ಅಮೆರಿಕ ವಕೀಲ! 

ಕೊರೋನಾ ವೈರಸ್ ಹರಡಿದ್ದಕ್ಕೆ ಅಮೆರಿಕ ಚೀನಾವನ್ನು ಹೊಣೆ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ.
ಚೀನಾ-ಅಮೆರಿಕ
ಚೀನಾ-ಅಮೆರಿಕ

ಕೊರೋನಾ ವೈರಸ್ ಹರಡಿದ್ದಕ್ಕೆ ಅಮೆರಿಕ ಚೀನಾವನ್ನು ಹೊಣೆ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ. ಈ ನಡುವೆ ಅಮೆರಿಕದ ವಕೀಲ ಲ್ಯಾರಿ ಕ್ಲೇಮನ್, ಅವರ ಫ್ರೀಡಂ ವಾಚ್ ಹಾಗೂ ಬಝ್ ಫೋಟೋಸ್ ಸಂಸ್ಥೆ ಟೆಕ್ಸಾಸ್ ನ ನ್ಯಾಯಾಲಯದಲ್ಲಿ ಚೀನಾ ವಿರುದ್ಧ 20 ಲಕ್ಷಕೋಟಿ ಡಾಲರ್ ಮೊತ್ತದ ಹಣ ಪರಿಹಾರವಾಗಿ ನೀಡಬೇಕೆಂದು ಆಗ್ರಹಿಸಿ ಕೇಸ್ ದಾಖಲಿಸಿದ್ದಾರೆ. 

ಚೀನಾ ಕೊರೋನಾ ವೈರಸ್ ನ್ನು ಜೈವಿಕ ಅಸ್ತ್ರವನ್ನಾಗಿ ಬಳಕೆ ಮಾಡಿ, ಉದ್ದೇಶಪೂರ್ವಕವಾಗಿ ಸೃಷ್ಟಿಸಿ 334,000 ಜನರಿಗೆ ಸೋಂಕು ಉಂಟುಮಾಡಿದೆ ಎಂದು ಲ್ಯಾರಿ ಕ್ಲೇಮೆನ್ ಆರೋಪಿಸಿದ್ದು, ಚೀನಾ ವಿರುದ್ಧ ಉಗ್ರವಾದಕ್ಕೆ ನೆರವು, ಅಮೆರಿಕದ ಜನರ ಹತ್ಯೆ ಹಾಗೂ ನಷ್ಟವನ್ನುಂಟುಮಾಡುವ ಸಂಚುಗಳ ಆರೋಪವನ್ನು ಹೊರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com