ಜಿ20 ದೇಶಗಳ ಒಕ್ಕೂಟದಿಂದ ಕೊರೋನಾ ವಿರುದ್ಧದ ಹೋರಾಟಕ್ಕೆ 5 ಟ್ರಿಲಿಯನ್ ಡಾಲರ್!

ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮವನ್ನು ಎದುರಿಸುವ ಉದ್ದೇಶದಿಂದ ಜಾಗತಿಕ ಆರ್ಥಿಕತೆಗೆ ಐದು ಟ್ರಿಲಿಯನ್ ಡಾಲರ್‌ ಮೊತ್ತವನ್ನು ತೊಡಗಿಸಲು ಬದ್ಧವಾಗಿರುವುದಾಗಿ ಜಿ -20 ಒಕ್ಕೂಟದ ರಾಷ್ಟ್ರಗಳು ಹೇಳಿವೆ.
ಜಿ20 ಶೃಂಗಸಭೆ
ಜಿ20 ಶೃಂಗಸಭೆ

ನವದೆಹಲಿ: ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮವನ್ನು ಎದುರಿಸುವ ಉದ್ದೇಶದಿಂದ ಜಾಗತಿಕ ಆರ್ಥಿಕತೆಗೆ ಐದು ಟ್ರಿಲಿಯನ್ ಡಾಲರ್‌ ಮೊತ್ತವನ್ನು ತೊಡಗಿಸಲು ಬದ್ಧವಾಗಿರುವುದಾಗಿ ಜಿ -20 ಒಕ್ಕೂಟದ ರಾಷ್ಟ್ರಗಳು ಹೇಳಿವೆ.

ಜಿ- 20 ಸದಸ್ಯ ರಾಷ್ಟ್ರಗಳು ಸ್ವಯಂಪ್ರೇರಿತವಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನೇತೃತ್ವದ ‘ಕೋವಿಡ್ -19 ಒಗ್ಗಟ್ಟು ಪ್ರತಿಸ್ಪಂದನಾ ನಿಧಿ’ಗೆ ಕೊಡುಗೆ ನೀಡಲು ಸಹಮತ ವ್ಯಕ್ತಪಡಿಸಿವೆ.

ಈ ವರ್ಷ ಜಿ- 20 ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಸೌದಿ ಅರೇಬಿಯಾ, ಕೊರೋನಾ ವೈರಸ್ ಬಿಕ್ಕಟ್ಟನ್ನು ಎದುರಿಸುವ ನಿಟ್ಟಿನಲ್ಲಿ ಜಾಗತಿಕ ಪ್ರಯತ್ನಗಳ ಬಗ್ಗೆ ಚರ್ಚಿಸಲು ಜಿ-20 ರಾಷ್ಟ್ರಗಳ ಪ್ರಮುಖ ನಾಯಕರ ಸಭೆಯನ್ನು ಕರೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com