ಕೊರೋನಾ ವೈರಸ್: ಭಾರತ ಮೂಲದ 10 ವರ್ಷದ ಬಾಲಕಿಗೆ ಅಮೆರಿಕ ಅಧ್ಯಕ್ಷರಿಂದ ಗೌರವ!

ಕೊರೋನಾ ವೈರಸ್ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ಅದ್ಭುತ ಸೇವೆ ಮಾಡಿದ್ದಕ್ಕಾಗಿ ಭಾರತ ಮೂಲದ 10 ವರ್ಷದ ಬಾಲಕಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೌರವಿಸಿದ್ದಾರೆ.
ಭಾರತ ಮೂಲದ ಶ್ರಾವ್ಯ
ಭಾರತ ಮೂಲದ ಶ್ರಾವ್ಯ

ವಾಷಿಂಗ್ಟನ್: ಕೊರೋನಾ ವೈರಸ್ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ಅದ್ಭುತ ಸೇವೆ ಮಾಡಿದ್ದಕ್ಕಾಗಿ ಭಾರತ ಮೂಲದ 10 ವರ್ಷದ ಬಾಲಕಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೌರವಿಸಿದ್ದಾರೆ.

ಹೌದು.. ಮಾರಕ ಕೊರೋನಾ ವೈರಸ್ ಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ತತ್ತರಿಸಿ ಹೋಗಿರುವ ಅಮೆರಿಕದಲ್ಲಿ ಕೊರೋನಾ ವಾರಿಯರ್ಸ್ ಗಳನ್ನು ದೇವರಂತೆ ನೋಡಲಾಗುತ್ತಿದೆ. ಇದೇ ಕಾರಣಕ್ಕೆ ಸೇವೆ ಸಲ್ಲಿಸುತ್ತಿರುವ ಕೊರೋನಾ ವಾರಿಯರ್ಸ್ ಗೆ ಅಮೆರಿಕ ಸರ್ಕಾರ ಸನ್ಮಾನ  ಮಾಡಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಜೀವದ ಹಂಗು ತೊರೆದು ರೋಗಿಗಳ ಜೀವ ಉಳಿಸಲು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳನ್ನು ಅಮೆರಿಕ ಸರ್ಕಾರ ಗೌರವಿಸಿದೆ. ಇದೇ ಕಾರ್ಯಕ್ರಮದಲ್ಲಿಯೇ ಭಾರತ ಮೂಲದ ಕೇವಲ 10 ವರ್ಷದ ಪುಟ್ಟ ಪೋರಿಯನ್ನೂ ಕೂಡ ಅಮೆರಿಕ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೌರವಿಸಿದ್ದಾರೆ.

ಇಷ್ಟಕ್ಕೂ ಆ 10ರ ಪೋರಿ ಮಾಡಿದ್ದಾದರೂ ಏನುಗೊತ್ತಾ...? ಕೊರೋನಾ ವಾರಿಯರ್ಸ್ ಗೆ ಬಿಸ್ಕಟ್ ನೀಡಿದ್ದಳು. ಹೌದು ಭಾರತ ಮೂಲದ 10 ವರ್ಷದ ಪೋರಿ ಶ್ರಾವ್ಯ ಅಣ್ಣಪ್ಪ ರೆಡ್ಡಿ ತನ್ನ ಸಹಪಾಠಇಗಳೊಂದಿಗೆ ಸೇರಿ ಕೊರೋನಾ ವಿರುದ್ಧ ಹೋರಾಡುತ್ತಿದ್ದ ಕೊರೋನಾ ವಾರಿಯರ್ಸ್ ಗೆ  ತಿನ್ನಲು ಬಿಸ್ಕತ್ ಮತ್ತು ಅವರಿಗೆ ಗ್ರೀಟಿಂಗ್ಸ್ ಗಳು, ಹೂಗುಚ್ಚಗಳನ್ನು ನೀಡಿ ಅವರನ್ನು ಹುರಿದುಂಬಿಸುತ್ತಿದ್ದಳು. ಈಕೆಯ ಈ ಅಪರೂಪದ ಕಾರ್ಯವನ್ನು ಮೆಚ್ಚಿ ಅಮೆರಿಕ ಅಧ್ಯಕ್ಷರೇ ಆಕೆಯನ್ನು ಗೌರವಿಸಿ ಪದಕ ಮತ್ತು ಪ್ರಮಾಣ ಪತ್ರ ವಿತರಿಸಿದ್ದಾರೆ.

ಅಮೆರಿಕದ ಮೇರಿಲ್ಯಾಂಡ್ ನಲ್ಲಿರುವ ಹಾನೋವರ್ ಹಿಲ್ಸ್ ನಲ್ಲಿರುವ ಎಲಿಮೆಂಟ್ರಿ ಶಾಲೆಯಲ್ಲಿ ಶ್ರಾವ್ಯ 4ನೇ ತರಗತಿಯ ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲದೆ ಶ್ರಾವ್ಯ ಶಾಲೆಯ ಸ್ಕೌಟ್ಸ್ ತಂಡದ ಸದಸ್ಯೆ ಕೂಡ ಆಗಿದ್ದು, ಸ್ಕೌಟ್ಸ್ ತಂಡದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶ್ರಾವ್ಯ  ಕೊರೋನಾ ವಾರಿಯರ್ಸ್ ಗೆ ಬಿಸ್ಕತ್ ಮತ್ತು ಗ್ರೀಟಿಂಗ್ ಮತ್ತು ಹೂ ಗುಚ್ಚ ನೀಡುತ್ತಿದ್ದಳು. ಆ ಮೂಲಕ ಕೊರೋನಾ ವಾರಿಯರ್ಸ್ ಗೆ ಗೌರವ ಸಲ್ಲಿಕೆ ಮಾಡುತ್ತಿದ್ದರು. ಬಾಲಕಿಯ ಈ ಅಪರೂಪದ ಸೇವೆಯನ್ನು ಗುರುತಿಸಿ ಅಮೆರಿಕ ಸರ್ಕಾರ ಇದೀಗ ಆಕೆಯನ್ನು ಗೌರವಿಸಿದೆ.

ಇನ್ನು ಶ್ರಾವ್ಯ ಅವರ ಪೋಷಕಕರು ಆಂಧ್ರಪ್ರದೇಶ ಮೂಲದವರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com