ಜಗತ್ತಿಗೆ ಕೊರೋನಾಘಾತ: 50 ಲಕ್ಷ ದಾಟಿದ ಸೋಂಕಿತರ ಸಂಖ್ಯೆ, 3.25 ಲಕ್ಷ ಸಾವು!

ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ಮಹಾಮಾರಿಗೆ ಅದಾಗಲೇ 3.25 ಲಕ್ಷ ಮಂದಿಯನ್ನು ಬಲಿಪಡೆದಿದ್ದು ಇದೀಗ ಸೋಂಕಿತರ ಸಂಖ್ಯೆ 50 ಲಕ್ಷ ದಾಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ಮಹಾಮಾರಿಗೆ ಅದಾಗಲೇ 3.25 ಲಕ್ಷ ಮಂದಿಯನ್ನು ಬಲಿಪಡೆದಿದ್ದು ಇದೀಗ ಸೋಂಕಿತರ ಸಂಖ್ಯೆ 50 ಲಕ್ಷ ದಾಟಿದೆ. 

ಅಮೆರಿಕದಲ್ಲಿ ಅತೀ ಹೆಚ್ಚು ಸೋಂಕಿತರಿದ್ದು 15,71,131 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಇನ್ನು 93,558 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. 

ರಷ್ಯಾದಲ್ಲಿ 3 ಲಕ್ಷ ಸೋಂಕಿತರಿದ್ದರೆ 2,972 ಮಂದಿ ಸಾವಿಗೀಡಾಗಿದ್ದಾರೆ. ಸ್ಪೇನ್ ನಲ್ಲಿ 2.78 ಲಕ್ಷ ಸೋಂಕಿದ್ದರೆ 27,778 ಮಂದಿ ಸಾವಿಗೀಡಾಗಿದ್ದಾರೆ. ಬ್ರೆಜಿಲ್ ನಲ್ಲಿ 2.71 ಲಕ್ಷ ಸೋಂಕು. 17,983 ಮಂದಿ ಸಾವು. ಬ್ರಿಟನ್ ನಲ್ಲಿ 2.48 ಲಕ್ಷ ಸೋಂಕು. 35 ಸಾವಿರ ಬಲಿ. ಇಟಲಿಯಲ್ಲಿ 2.26 ಲಕ್ಷ ಸೋಂಕಿತರ ಪೈಕಿ 32 ಸಾವಿರ ಮಂದಿ ಬಲಿಯಾಗಿದ್ದಾರೆ. 

ಇನ್ನು ಸೋಂಕು ಹುಟ್ಟಿದ ಚೀನಾದಲ್ಲಿ ಮಾತ್ರ 82,965 ಮಂದಿಗೆ ಮಾತ್ರ ಸೋಂಕು ಪತ್ತೆಯಾಗಿದ್ದು 4,634 ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿ 1 ಲಕ್ಷ ಮಂದಿಯಲ್ಲಿ ಸೋಂಕು ಕಂಡುಬಂದಿದ್ದು 3,303 ಮಂದಿ ಬಲಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com