ಕೊರೋನಾಘಾತ: ಜಗತ್ತಿನಾದ್ಯಂತ 24 ಗಂಟೆಗಳಲ್ಲಿ 1 ಲಕ್ಷ ಮಂದಿಗೆ ಸೋಂಕು!

ವಿಶ್ವಾದ್ಯಂತ ಕೊರೋನಾ ಅಟ್ಟಹಾಸ ಮತ್ತಷ್ಟು ಹೆಚ್ಚಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಜಗತ್ತಿನಲ್ಲಿ 1.06 ಲಕ್ಷ ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ವಿಶ್ವಾದ್ಯಂತ ಕೊರೋನಾ ಅಟ್ಟಹಾಸ ಮತ್ತಷ್ಟು ಹೆಚ್ಚಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಜಗತ್ತಿನಲ್ಲಿ 1,06,000 ಲಕ್ಷ ಜನರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.

ಕೊರೋನಾ ದಿಂದ ನಲುಗಿ ಹೋಗಿದ್ದ ಇಟಲಿ, ಸ್ಪೇನ್ ಮುಂತಾದ ಕಡೆ ನಿಧಾನವಾಗಿ ಲಾಕ್ ಡೌನ್ ಸಡಿಲಿಸಲಾಗಿದೆ. ಆದರೂ ಏರಡನೇ ಹಂತದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ.

ಅಮೆರಿಕಾದಲ್ಲಿ ಕೊರೋನಾ ಆರ್ಭಟ ಏರುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 1,531 ಮಂದಿ ಬಲಿಯಾಗಿದ್ದಾರೆ. ಬುಧವಾರ ಸಾವನ್ನಪ್ಪಿದ 1,531 ಮಂದಿಯೊಂದಿಗೆ ಅಮೆರಿಕಾದಲ್ಲಿ ಈವರೆಗೂ ಮಹಾಮಾರಿ ವೈರಸ್'ಗೆ 94,994 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಸೋಂಕಿತರ ಸಂಖ್ಯೆ ಕೂಡ ಏರುತ್ತಲೇ ಇದ್ದು, ಈ ವರೆಗೂ 1,591,991 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಗುಣಮುಖರಾಗುತ್ತಿರುವವರ ಸಂಖ್ಯೆ ಏರಿಕೆ ಕಾಣುತ್ತಿದ್ದು, ಈ ವರೆಗೂ 370,076 ಸೋಂಕಿನಿಂದ ಗುಣಮುಖರಾಗಿದ್ದಾರೆ. 

ರಷ್ಯಾದಲ್ಲಿ 3 ಲಕ್ಷ ಸೋಂಕಿತರಿದ್ದರೆ 2,972 ಮಂದಿ ಸಾವಿಗೀಡಾಗಿದ್ದಾರೆ. ಸ್ಪೇನ್ ನಲ್ಲಿ 2.79 ಲಕ್ಷ ಸೋಂಕಿದ್ದರೆ 27,888 ಮಂದಿ ಸಾವಿಗೀಡಾಗಿದ್ದಾರೆ. ಬ್ರೆಜಿಲ್ ನಲ್ಲಿ 2.93 ಲಕ್ಷ ಸೋಂಕು. 18,894 ಮಂದಿ ಸಾವು. ಬ್ರಿಟನ್ ನಲ್ಲಿ 2.48 ಲಕ್ಷ ಸೋಂಕು. 35 ಸಾವಿರ ಬಲಿ. ಇಟಲಿಯಲ್ಲಿ 2.27 ಲಕ್ಷ ಸೋಂಕಿತರ ಪೈಕಿ 32 ಸಾವಿರ ಮಂದಿ ಬಲಿಯಾಗಿದ್ದಾರೆ. 

ಇನ್ನು ಸೋಂಕು ಹುಟ್ಟಿದ ಚೀನಾದಲ್ಲಿ ಮಾತ್ರ 82,967 ಮಂದಿಗೆ ಮಾತ್ರ ಸೋಂಕು ಪತ್ತೆಯಾಗಿದ್ದು 4,634 ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿ 1.12 ಲಕ್ಷ ಮಂದಿಯಲ್ಲಿ ಸೋಂಕು ಕಂಡುಬಂದಿದ್ದು 3,438 ಮಂದಿ ಬಲಿಯಾಗಿದ್ದಾರೆ.

ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 59 ಲಕ್ಷ ದಾಟಿತ್ತು ಸಾವಿನ ಸಂಖ್ಯೆ 3.30 ಲಕ್ಷ ದಾಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com