ಅಟ್ಟಾರಿ-ವಾಘಾ ಗಡಿ ಮೂಲಕ ಭಾರತದಿಂದ 176 ಮಂದಿ ಪಾಕಿಸ್ತಾನಿಯರು ಇಂದು ಸ್ವದೇಶಕ್ಕೆ!

ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಭಾರತದಲ್ಲಿ ಸಿಲುಕಿಹಾಕಿಕೊಂಡಿರುವ 176 ಮಂದಿ ಪಾಕಿಸ್ತಾನಿಯರು ಇಂದು ಅಂದರೆ ಬುಧವಾರ ಅಟ್ಟಾರಿ-ವಾಘಾ ಗಡಿ ಮೂಲಕ ದೇಶಕ್ಕೆ ಹಿಂತಿರುಗಲಿದ್ದಾರೆ ಎಂದು ವಿದೇಶಾಂಗ ಕಚೇರಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಭಾರತದಲ್ಲಿ ಸಿಲುಕಿಹಾಕಿಕೊಂಡಿರುವ 176 ಮಂದಿ ಪಾಕಿಸ್ತಾನಿಯರು ಇಂದು ಅಂದರೆ ಬುಧವಾರ ಅಟ್ಟಾರಿ-ವಾಘಾ ಗಡಿ ಮೂಲಕ ದೇಶಕ್ಕೆ ಹಿಂತಿರುಗಲಿದ್ದಾರೆ ಎಂದು ವಿದೇಶಾಂಗ ಕಚೇರಿ ತಿಳಿಸಿದೆ.

ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುವುದನ್ನು ತಡೆಗಟ್ಟಲು ವಿಶ್ವದ ಬೇರೆ ದೇಶಗಳಂತೆ ಭಾರತ ಕೂಡ ಲಾಕ್ ಡೌನ್ ಘೋಷಣೆ ಮಾಡಿತ್ತು. ಭಾರತ ಪಾಕಿಸ್ತಾನ ಗಡಿ ಅಟ್ಟಾರಿ-ವಾಘಾ ಗಡಿಭಾಗವನ್ನು ಕೂಡ ಬಂದ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ 176 ಮಂದಿ ಪಾಕಿಸ್ತಾನೀಯರು ಭಾರತದ ವಿವಿಧ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರು.

ಇದೀಗ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಆದೇಶದ ಪ್ರಕಾರ ಪಾಕಿಸ್ತಾನಿಯರನ್ನು ಅವರ ದೇಶಕ್ಕೆ ಕರೆಸಿಕೊಳ್ಳಲು ದೆಹಲಿಯಲ್ಲಿರುವ ಪಾಕಿಸ್ತಾನ ಹೈ ಕಮಿಷನ್ ಭಾರತದ ಹೈ ಕಮಿಷನ್ ಜೊತೆಗೆ ಸಂಪರ್ಕ ಸಾಧಿಸಿ ಮತ್ತು ಪಾಕಿಸ್ತಾನದಲ್ಲಿರುವ ಬೇರೆ ಅಧಿಕಾರಿಗಳು, ವಿದೇಶಾಂಗ ಕಚೇರಿ ನೆರವಿನೊಂದಿಗೆ ಪಾಕಿಸ್ತಾನೀಯರನ್ನು ಕರೆಸಿಕೊಳ್ಳುತ್ತಿದೆ.

ಕಳೆದ ಮಾರ್ಚ್ 20ರಿಂದ ಅಟ್ಟಾರಿ-ವಾಘಾ ಗಡಿ ಮೂಲಕ 400ಕ್ಕೂ ಹೆಚ್ಚು ಪಾಕಿಸ್ತಾನಿಯರನ್ನು ಭಾರತದಿಂದ ವಾಪಾಸ್ ಕರೆಸಿಕೊಳ್ಳಲಾಗಿತ್ತು. ಪಾಕಿಸ್ತಾನದಲ್ಲಿ ಕೊರೋನಾ ವೈರಸ್ ಗೆ 57,705 ಮಂದಿ ತುತ್ತಾಗಿದ್ದು 1,197 ಮಂದಿ ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com