ಜಪಾನ್: ಕೋವಿಡ್-19 ನಿಂದ ಮೃತಪಟ್ಟವರಿಗಿಂತ ಆತ್ಮಹತ್ಯೆಯಿಂದ ಸಾವನ್ನಪ್ಪಿದವರೇ ಹೆಚ್ಚು!

ವಿಶ್ವಾದ್ಯಂತ ಕೋವಿಡ್-19 ನಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ ಜಪಾನ್ ನಲ್ಲಿ ಕೋವಿಡ್-19 ನಿಂದ ಮೃತಪಟ್ಟವರಿಗಿಂತ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡು ಜನರು ಸಾವನ್ನಪ್ಪುತ್ತಿದ್ದಾರೆ. 
ಆತ್ಮಹತ್ಯೆ
ಆತ್ಮಹತ್ಯೆ

ನವದೆಹಲಿ: ವಿಶ್ವಾದ್ಯಂತ ಕೋವಿಡ್-19 ನಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ ಜಪಾನ್ ನಲ್ಲಿ ಕೋವಿಡ್-19 ನಿಂದ ಮೃತಪಟ್ಟವರಿಗಿಂತ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡು ಜನರು ಸಾವನ್ನಪ್ಪುತ್ತಿದ್ದಾರೆ. 

ಜಪಾನ್ ನಲ್ಲಿ ಉದ್ಯೋಗ ನಷ್ಟವಾಗುತ್ತಿರುವುದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಇತ್ತೀಚೆಗಷ್ಟೇ ಟೋಕಿಯೋ (ಸಿಎನ್ಎನ್) ನ ಎರಿಕೋ ಕೊಬಯಾಶಿ ಸತತ ನಾಲ್ಕನೇ ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಮೂರು ದಿನಗಳ ನಂತರ ಆಸ್ಪತ್ರೆಯಲ್ಲಿ ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿದ್ದರು. 

"ಬಾಡಿಗೆ ಕಟ್ಟುವುದಕ್ಕೆ, ಆಹಾರ ಪದಾರ್ಥಗಳನ್ನು ತರುವುದಕ್ಕೆ ಹಣವಿರಲಿಲ್ಲ. ವೇತನ ಸರಿಯಾಗಿ ಸಿಗುತ್ತಿಲ್ಲ. ತೀರಾ ಬಡತನಕ್ಕೆ ಸಿಲುಕಿದ್ದೇನೆ ಎನ್ನುತ್ತಾರೆ ಆತ್ಮಹತ್ಯೆಗೆ ಯತ್ನಿಸಿದ ಕೊಬಯಾಶಿ

43 ವರ್ಷದ ಕೊಬಯಾಶಿ ಅವರು ತಮ್ಮ ಮಾನಸಿಕ ಆರೋಗ್ಯ ಹೋರಾಟದ ಬಗ್ಗೆ ಪುಸ್ತಕಗಳನ್ನು ಬರೆದಿದ್ದು, ಈಗ ಎನ್ ಜಿಒ ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಆದರೆ ಕೊರೋನಾ ವೈರಸ್ ಈಗ ಅವರ ಒತ್ತಡವನ್ನು ಮರಳಿ ಎದುರಿಸುವಂತೆ ಮಾಡಿದೆ.

" ನನ್ನ ವೇತನ ಕಡಿತಗೊಳ್ಳುತ್ತಿತ್ತು, ನಿರಂತರವಾಗಿ ಬಿಕ್ಕಟ್ಟಿನ ಪ್ರಜ್ಞೆ ನನ್ನನ್ನು ಕಾಡುತ್ತಿದೆ, ನಾನು ಮತ್ತೆ ಬಡತನಕ್ಕೆ ಬೀಳಬಹುದು ಎಂಬ ಭಯ ಕಾಡುತ್ತಿದೆ.

ಕೊರೋನಾದಿಂದ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ತಜ್ಞರು ಎಚ್ಚರಿಸಿದ್ದು, ಹೆಚ್ಚುತ್ತಿರುವ ನಿರುದ್ಯೋ, ಸಾಮಾಜಿಕ ಅಂತರ, ಆತಂಕ ಹೆಚ್ಚುತ್ತಿದ್ದು ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ.

ಅಕ್ಟೋಬರ್ ತಿಂಗಳಲ್ಲಿ ಜಪಾನ್ ನಲ್ಲಿ ಕೋವಿಡ್-19 ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಾವನ್ನಪ್ಪಿದ್ದಾರೆ ಎಂದು ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ. ಅಕ್ಟೋಬರ್ ತಿಂಗಳಲ್ಲಿ ಜಪಾನ್ ನಲ್ಲಿ 2,153 ಜನರು ಆತ್ಮಹತ್ಯೆ ಮಾಡಿಕೊಂಡರೆ, ಕೋವಿಡ್-19 ನಿಂದಾಗಿ 2,087 ಜನರು ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com