ಕೋವಿಡ್-19 ಒಂದು ಕೃತಕ ಭಯಾನಕ ಪರಿಸ್ಥಿತಿ: ಡೊನಾಲ್ಡ್ ಟ್ರಂಪ್

ಚೀನಾ ದೇಶ ಕೋವಿಡ್-19ನ್ನು ಬೇರೆ ದೇಶಗಳಿಗೆ ಕಳುಹಿಸಿಕೊಡುವವರೆಗೆ ಯಾರೂ ಕೂಡ ಏನಾಗಬಹುದು ಎಂದು ಎಣಿಸಿರಲಿಲ್ಲ, ಚೀನಾ ಕೂಡ ಭಾವಿಸಿರಲಿಲ್ಲ,  ಇದೀಗ ನಾವು ಕೊರೋನಾದಿಂದ ಮುಕ್ತರಾಗಲು ಸಜ್ಜಾಗಿದ್ದು 20 ಲಕ್ಷಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿರಬಹುದು.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಚೀನಾ ದೇಶ ಕೋವಿಡ್-19ನ್ನು ಬೇರೆ ದೇಶಗಳಿಗೆ ಕಳುಹಿಸಿಕೊಡುವವರೆಗೆ ಯಾರೂ ಕೂಡ ಏನಾಗಬಹುದು ಎಂದು ಎಣಿಸಿರಲಿಲ್ಲ, ಚೀನಾ ಕೂಡ ಭಾವಿಸಿರಲಿಲ್ಲ,  ಇದೀಗ ನಾವು ಕೊರೋನಾದಿಂದ ಮುಕ್ತರಾಗಲು ಸಜ್ಜಾಗಿದ್ದು 20 ಲಕ್ಷಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿರಬಹುದು.

ನಮಗೆ ಅವರು ಮಾಡಿರುವ ಅನ್ಯಾಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಡೊನಾಲ್ಡ್ ಟ್ರಂಪ್ ಫ್ಲೋರಿಡಾದಲ್ಲಿ ಹೇಳಿದರು.

ಕೋವಿಡ್-19 ಬರುವುದಕ್ಕೆ ಮೊದಲು ಅಮೆರಿಕ ವಿಶ್ವದಲ್ಲಿಯೇ ಬಲಿಷ್ಠ ಆರ್ಥಿಕ ದೇಶವಾಗಿತ್ತು,ಕೊರೋನಾ ಬಂದು ಅನೇಕ ವಿಷಯಗಳಲ್ಲಿ ಸಂಕಷ್ಟ ತಂದೊಡ್ಡಿದೆ, ಈ ವೈರಸ್ ಒಂದು ಸಹಜವಲ್ಲದ ನಿರ್ಮಿತ ಭಯಾನಕ ಪರಿಸ್ಥಿತಿ ಎಂದು ಟ್ರಂಪ್ ಬಣ್ಣಿಸಿದ್ದಾರೆ.

ವಿಶ್ವ ವ್ಯಾಪಾರ ಸಂಘಟನೆಗೆ ಚೀನಾ ಸೇರ್ಪಡೆಯಾಗಲು ತಮ್ಮ ಪ್ರತಿಸ್ಪರ್ಧಿ ಜೋ ಬಿಡನ್ ಬೆಂಬಲ ನೀಡಿರುವುದಕ್ಕೆ ಹರಿಹಾಯ್ದ ಟ್ರಂಪ್, ಇದು ನಾವು ಮಾಡಿಕೊಂಡ ಅತ್ಯಂತ ಕೆಟ್ಟ ಒಪ್ಪಂದವಾಗಿದೆ. ಅಲ್ಲಿಯವರೆಗೆ ಸುಮ್ಮನಿದ್ದ ಚೀನಾ ನಂತರ ವಿಶ್ವದ ಬೇರೆ ದೇಶಗಳ ಮೇಲೆ ದಬ್ಬಾಳಿಕೆ ಮಾಡಲು ಆರಂಭಿಸಿತು. ಇಂದು ಅವರು ಅಭಿವೃದ್ಧಿ ಹೊಂದಿದ ದೇಶ ಎಂದು ಭಾವಿಸುತ್ತಾರೆ, ಅವರು ಅಭಿವೃದ್ಧಿ ಹೊಂದಿದ ದೇಶವಾದರೆ ನಾವು ಕೂಡ ಹಿಂದೆ ಉಳಿದಿಲ್ಲ ಎಂದರು.

ಅಮೆರಿಕದಲ್ಲಿ ಕೋವಿಡ್-19 80 ಲಕ್ಷಕ್ಕೂ ಅಧಿಕ ಮಂದಿಗೆ ತಗುಲಿದ್ದು 2 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅಲ್ಲಿ ಇದುವರೆಗೆ 31 ಲಕ್ಷದ 77 ಸಾವಿರದ 397 ಮಂದಿ ಗುಣಮುಖ ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com