ಸ್ವೀಡನ್ ಮೂಲದ ಗ್ರೇಟಾ ಥನ್ಬರ್ಗ್
ವಿದೇಶ
'ಹೃದಯ ವಿದ್ರಾವಕ'; ಕೋವಿಡ್-19 ಸಾಂಕ್ರಾಮಿಕದ ನಡುವೆ ಭಾರತದ ಆಕ್ಸಿಜನ್ ಕೊರತೆ ವಿಚಾರವಾಗಿ 'ಗ್ರೇಟಾಥನ್ಬರ್ಗ್' ಪ್ರತಿಕ್ರಿಯೆ
ಭಾರತದಲ್ಲಿನ ಕೊವಿಡ್-19 ಸಾಂಕ್ರಾಮಿಕದ 2ನೇ ತನ್ನ ಅಬ್ಬರ ಮುಂದುವರೆಸಿದ್ದು, ದೇಶಾದ್ಯಂತ ಆಕ್ಸಿಜನ್ ಕೊರತೆ ಮುಂದುವರೆದಿರುವಂತೆಯೇ ಇತ್ತ ಸ್ವೀಡನ್ ನ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ನವದೆಹಲಿ: ಭಾರತದಲ್ಲಿನ ಕೊವಿಡ್-19 ಸಾಂಕ್ರಾಮಿಕದ 2ನೇ ತನ್ನ ಅಬ್ಬರ ಮುಂದುವರೆಸಿದ್ದು, ದೇಶಾದ್ಯಂತ ಆಕ್ಸಿಜನ್ ಕೊರತೆ ಮುಂದುವರೆದಿರುವಂತೆಯೇ ಇತ್ತ ಸ್ವೀಡನ್ ನ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಭಾರತದಲ್ಲಿನ ವೈದ್ಯಕೀಯ ಆಕ್ಸಿಜನ್ ಕೊರತೆ ವಿಚಾರವಾಗಿ ಟ್ವೀಟ್ ಮಾಡಿರುವ ಗ್ರೇಟಾ, 'ಭಾರತದ ಇತ್ತೀಚಿನ ಬೆಳವಣಿಗೆಗಳು ಹೃದಯ ವಿದ್ರಾವಕವಾಗಿದೆ. ಜಾಗತಿಕ ಸಮುದಾಯವು ಎಚ್ಚೆತ್ತುಕೊಂಡು ತಕ್ಷಣವೇ ಅಗತ್ಯವಾದ ಸಹಾಯವನ್ನು ನೀಡಬೇಕು' ಎಂದು ಟ್ವೀಟ್ ಮಾಡಿದ್ದಾರೆ.
ಭಾರತದಲ್ಲೀಗ ವಿಶ್ವದಲ್ಲಿ ಅತ್ಯಂತ ಹೆಚ್ಚು ದೈನಂದಿನ ಕೊರೋನ ಪ್ರಕರಣ ವರದಿಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 3.46 ಲಕ್ಷಕ್ಕೂ ಅಧಿಕ ಕೋವಿಡ್ ಸೋಂಕು ಪ್ರಕರಣ ವರದಿಯಾಗಿದೆ. 2,624 ಜನರು ಸಾವನ್ನಪ್ಪಿದ್ದಾರೆ.
ಈ ಹಿಂದೆ ಭಾರತದ ರೈತರ ಹೋರಾಟದ ವಿಚಾರವಾಗಿ ಟ್ವೀಟ್ ಮಾಡಿ ಸುದ್ದಿಗೆ ಗ್ರಾಸವಾಗಿದ್ದ ಗ್ರೇಟಾ ವ್ಯಾಪಕ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರು.

